UPI OTP: UPI ನಲ್ಲಿ ಇನ್ನುಮುಂದೆ ಇಷ್ಟು ಹಣವನ್ನ ಯಾವುದೇ OTP ಇಲ್ಲದೆ ಕಳುಹಿಸಬಹುದು, RBI ನಿಂದ ಬಿಗ್ ಅಪ್ಡೇಟ್

UPI ಪಾವತಿದಾರರು ಇನ್ನುಮುಂದೆ OTP ಬಳಸದೇ ಆಟೊ ಪೇಮೆಂಟ್ ಮಾಡಬಹುದಾಗಿದೆ

UPI Autopay Limit Increase: ಭಾರತೀಯ ರಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಯುಪಿಐ ಆಟೊ ಪೇಮೆಂಟ್ (UPI Auto Payment) ಮಿತಿಯ ಬಗ್ಗೆ ಹೊಸ ನಿಯಮಯನ್ನು ಜಾರಿಗೆ ತಂದಿದೆ. ಈ ಹಿಂದೆ ಪ್ರತೀ ವಹಿವಾಟಿಗೆ UPI Autopay Limit 15,000 ರೂ ಇತ್ತು. ಅಂದರೆ, ಒಮ್ಮೆಗೆ 15,000 ರೂಪಾಯಿ ವರೆಗಿನ ಮೊತ್ತವನ್ನು ಮಾತ್ರ ಸ್ವಯಂಚಾಲಿತವಾಗಿ ಕಡಿತಗೊಳ್ಳಲು ಮಿತಿ ಇತ್ತು. ಅದಕ್ಕಿಂತ ಹೆಚ್ಚಿನ ಮೊತ್ತ ಆಟೊ ಡೆಬಿಟ್ ಆಗಲು ಸಾಧ್ಯವಿರಲಿಲ್ಲಆದರೆ ಇನ್ನುಮುಂದೆ ಇದರ ಮಿತಿಯನ್ನು ಹೆಚ್ಚಿಸಿದ್ದು ಗ್ರಾಹಕರಿಗೆ ಬಹಳ ಅನುಕೂಲಕರ ಆಗಲಿದೆ ಎನ್ನಬಹದು.

UPI Autopay Limit Increase
Image Credit: Informal News

ಯುಪಿಐ ಆಟೊ ಡೆಬಿಟ್ ಪಾವತಿ

ದೊಡ್ಡ ಮೊತ್ತದ ಪಾವತಿ ಅಗತ್ಯ ಇರುವ ಸೇವೆಗಳಿಗೆ ಈ ಸೌಲಭ್ಯವನ್ನು RBI ಕಲ್ಪಿಸಿದೆ. ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುವ ಯುಪಿಐ ಆಟೊಪೇ ಮಿತಿಯನ್ನು 15,000 ರೂನಿಂದ 1 ಲಕ್ಷ ರೂಗೆ ಏರಿಸಲಾಗಿದೆ. ಮ್ಯುಚುವಲ್ ಫಂಡ್ ಎಸ್​ಐಪಿ, ಇನ್ಷೂರೆನ್ಸ್ ಪ್ರೀಮಿಯಮ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಗೆ ಈ 1 ಲಕ್ಷ ರೂ ಮಿತಿಹೆಚ್ಚಳ ಅನ್ವಯ ಆಗುತ್ತದೆ.

ಮ್ಯೂಚುವಲ್ ಫಂಡ್​ನ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್, ಇನ್ಷೂರೆನ್ಸ್ ಪ್ರೀಮಿಯಮ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಯಲ್ಲಿ 15,000 ರೂಗಿಂತ ಹೆಚ್ಚಿನ ಮೊತ್ತದ ವಹಿವಾಟು ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಮಿತಿಯನ್ನು ಆರ್​ಬಿಐ ಹೆಚ್ಚಿಸಿದೆ.

UPI Latest Update
Image Credit: News 18

ಯುಪಿಐ ಆಟೊ ಡೆಬಿಟ್ ವಿವರ

Join Nadunudi News WhatsApp Group

ಭಾರತದಲ್ಲಿ ಈ ರೀತಿ ಆಟೊ ಡೆಬಿಟ್​ಗೆ ನೊಂದಣಿಯಾದ ಸರ್ವಿಸ್ ಸಂಖ್ಯೆ 8.5 ಕೋಟಿಯಷ್ಟಿದೆ. ಇವುಗಳಿಂದ ತಿಂಗಳಿಗೆ ಒಟ್ಟು 2,800 ಕೋಟಿ ರೂ.ನಷ್ಟು ವಹಿವಾಟು ಆಗುತ್ತದೆ. ಯುಪಿಐ ಆಟೊ ಡೆಬಿಟ್ ಮೂಲಕ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಪ್ಲಾಟ್​ಫಾರ್ಮ್​ನಲ್ಲಿ ನಿಮ್ಮ ಮೊಬೈಲ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಸ್ವಯಂ ಚಾಲಿತವಾಗಿ ಪಾವತಿಯಾಗುವಂತೆ ಮಾಡಬಹುದು. ಈ ವ್ಯವಸ್ಥೆಯಲ್ಲಿ ಮೊಬೈಲ್ ಬಿಲ್ ಬಂದಾಗ ನಿಮ್ಮ ಬ್ಯಾಂಕ್ ಖಾತೆಯಿಂದ ಅಷ್ಟು ಹಣ ಸ್ವಯಂಚಾಲಿವಾಗಿ ಕಡಿತಗೊಳ್ಳುತ್ತದೆ.

Join Nadunudi News WhatsApp Group