UPI Update: ಗೂಗಲ್ ಪೆ, ಫೋನ್ ಪೆ ಮತ್ತು UPI ಬಳಸುವವರಿಗೆ ಇಂದಿನಿಂದ ಹೊಸ ಸೇವೆ ಆರಂಭ, ಇನ್ನುಮುಂದೆ ಇಂಟರ್ನೆಟ್ ಬೇಕಾಗಿಲ್ಲ.
ಇನ್ನುಮುಂದೆ ಇಂಟರ್ನೆಟ್ ಇಲ್ಲದೆ ಕೂಡ ಹಣದ ವಹಿವಾಟನ್ನು ಸುಲಭವಾಗಿ ಮಾಡಬಹುದಾಗಿದೆ.
UPI By Without Internet: ದೈನಂದಿನ ಜೀವನದಲ್ಲಿ ಯುಪಿಐ (UPI) ಪಾವತಿ ಅಗತ್ಯವಾಗಿದೆ. ಜನರು ಇತ್ತೀಚಿಗೆ ಕೈಯಲ್ಲಿ ನಗದು ಹಣವನ್ನು ಇಟ್ಟುಕೊಳ್ಳುತ್ತಿಲ್ಲ. ಬದಲಾಗಿ 10 ರಿಂದ ಹಿಡಿದು ಸಾವಿರ ರೂ. ಗಳ ವಹಿವಾಟನ್ನು ಕೂಡ ಯುಪಿಐ ಮೂಲಕವೇ ಮಾಡಲು ಇಷ್ಟಪಡುತ್ತಾರೆ.
ಇನ್ನು ಬಳಕೆದಾರರ ಅನುಕೂಲಕ್ಕಾಗಿ ಯುಪಿಐ ಪಾವತಿ ಅಪ್ಲಿಕೇಶನ್ ಗಳು ಕೂಡ ತನ್ನ ಸೇವೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇರುತ್ತವೆ. ಬಳಕೆದಾರರು ಹೊಸ ಹೊಸ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ಯುಪಿಐ ಬಳಕೆದಾರರಿಗೆ ಹೊಸ ಸೌಲಭ್ಯ
ಇನ್ನು ಯುಪಿಐ ಪಾವತಿಯಿಂದ ಜನರು ಹಣವನ್ನು ಇಟ್ಟುಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇಂಟೆರ್ ನೆಟ್ ಇಲ್ಲದೆ ಇದ್ದರೆ ನೀವು ಯುಪಿಐ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಅಸಾಧ್ಯ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಹೀಗಿರುವಾಗ ಯುಪಿಐ ಪಾವತಿಯನ್ನು ಇಂಟರ್ನೆಟ್ ಇಲ್ಲದೆ ಕೂಡ ಬಳಸಲು ಅನುವು ಮಾಡಿಕೊಡಲಾಗುತ್ತಿದೆ.
ಇನ್ನುಮುಂದೆ ಇಂಟರ್ನೆಟ್ ಇಲ್ಲದೆ ಕೂಡ ಹಣದ ಪಾವತಿ ಸಾಧ್ಯ
ಯುಪಿಐ ಬಳಕೆದಾರರು ಇನ್ನುಮುಂದೆ ಇಂಟರ್ನೆಟ್ ಇಲ್ಲದೆ ಕೂಡ ಹಣದ ವಹಿವಾಟನ್ನು ಸುಲಭವಾಗಿ ಮಾಡಬಹುದಾಗಿದೆ. ಯುಪಿಐ ಪಾವತಿಗಾಗಿ ವಿವಿಧ ಅಪ್ಲಿಕೇಶನ್ ಗಳು ಬಳಕೆಯಲ್ಲಿವೆ. ನೀವು ಬಳಸುತ್ತಿರುವ ಯುಪಿಐ ಪಾವತಿ ಅಪ್ಲಿಕೇಶನ್ ಗಳಲ್ಲಿ ಕೆಲವು ಸೆಟ್ಟಿಂಗ್ ಗಳನ್ನೂ ಮಾಡುವುದರಿಂದ ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಸಾಧ್ಯ ಮಾಡಿಕೊಳ್ಳಬಹುದು. ಇಂಟರ್ನೆಟ್ ಬಳಸದೆ ಯಾವ ಸೆಟ್ಟಿಂಗ್ ಗಳ ಮೂಲಕ ಯುಪಿಇ ಪಾವತಿ ಸಾಧ್ಯ ಎನ್ನುವ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ
ಇಂಟರ್ನೆಟ್ ಇಲ್ಲದೆ UPI ಪಾವತಿ ಮಾಡುವ ವಿಧಾನ
*ಇಂಟರ್ನೆಟ್ ಇಲ್ಲದೆ ಯುಪಿಐ ಬಳಸಲು ನೀವು *99# ಕೋಡ್ ಅನ್ನು ಬಳಸಬೇಕಾಗುತ್ತದೆ. ದೇಶದ 83 ಪ್ರಮುಖ ಬ್ಯಾಂಕ್ ಹಾಗೂ ಕನ್ನಡ,ಇಂಗ್ಲಿಷ್ ಸೇರಿದಂತೆ 13 ಭಾಷೆಗಳಲ್ಲಿ ಈ ಸೇವೆ ಲಭ್ಯವಿರುತ್ತದೆ.
*ನಿಮ್ಮ ಮೊಬೈಲ್ ನಲ್ಲಿ *99 # ಸಂಖ್ಯೆಯನ್ನು ಡಯಲ್ ಮಾಡಿ, ನಿಮ್ಮ ಆಯ್ಕೆಯ ಭಾಷೆಯನ್ನು ಆರಿಸಿ, ಬ್ಯಾಂಕ್ ಹೆಸರನ್ನು ನಮೂದಿಸಬೇಕು.
*ನಂತರ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ನ ವಿವರ ಕಾಣಿಸುತ್ತದೆ.
*ವಹಿವಾಟು ನಡೆಯಬೇಕಾಗಿರುವ ಖಾತೆಯನ್ನು ಆರಿಸಿ, ನಿಮ್ಮ ಡೆಬಿಟ್ ಕಾರ್ಡ್ ಮುಕ್ತಾಯದ ದಿನಾಂಕದೊಂದಿಗೆ ಕಾರ್ಡ್ ಸಂಖ್ಯೆಯ ಕೊನೆಯ 6 ಅಂಕೆಯನ್ನು ನಮೂದಿಸಿದರೆ ನಿಮ್ಮ ಸೆಟ್ಟಿಂಗ್ ಪೂರ್ಣಗೊಳ್ಳುತ್ತದೆ.
*ಸೆಟ್ಟಿಂಗ್ ಪೂರ್ಣಗೊಂಡ ಬಳಿಕ *99 # ಡಯಲ್ ಮಾಡಿ 1 ಅನ್ನು ಒತ್ತಿ, ನೀವು ಯಾರಿಗೆ ಹಣವನ್ನು ಕಳುಹಿಸಬೇಕೋ ಆ ವ್ಯಕ್ತಿಯ ವೈಯಕಿಯ ವಿವರ ನಮೂದಿಸಿ, ಕಳುಹಿಸಬೇಕಾದ ಮೊತ್ತವನ್ನು ನಮೂದಿಸಿ ಕೊನೆಯದಾಗಿ ಯುಪಿಐ ನಂಬರ್ ಹೊಡೆದರೆ ನಿಮ್ಮ ಪಾವತಿ ಯಶಸ್ವಿಯಾಗುತ್ತದೆ.
*ಇದರ ಮೂಲಕ ನೀವು ಒಮ್ಮೆಲೇ 5000 ಹಣವನ್ನು ಪಾವತಿಸಬಹುದು. ನೀವು ಎಷ್ಟು ಬಾರಿ *99 # ಸೇವೆಯನ್ನು ಬಳಸುತ್ತಿರೋ ಆಗ 50 ಪೈಸೆ ಶುಲ್ಕ ಪಾವತಿಸಬೇಕಾಗುತ್ತದೆ.