Earn Money: ಈಗ ಫೋನ್ ಪೆ, ಗೂಗಲ್ ಪೆ ಮೂಲಕ ಮನೆಯಲ್ಲಿ ಹಣ ಗಳಿಸಬಹುದು, ಗ್ರಾಹಕರಿಗೆ ಹೊಸ ಸೇವೆ ಬಿಡುಗಡೆ.
ಮನೆಯಲ್ಲಿ ಕುಳಿತು PhonePe, Google Pay ಮೂಲಕ ಹಣ ಗಳಿಸಬಹುದು
UPI Cash Back: ಪ್ರಸ್ತುತ ಎಲ್ಲೆಡೆ ಯುಪಿಐ (UPI) ವಹಿವಾಟು ಹೆಚ್ಚುತ್ತಿದೆ. ಜನರು ಹೆಚ್ಚಾಗಿ ಯುಪಿಐ ಪಾವತಿಯನ್ನು ಇಷ್ಟಪಡುತ್ತಿದ್ದಾರೆ. ಇನ್ನು ಯುಪಿಐ ಪಾವತಿ ಅಪ್ಲಿಕೇಶನ್ ಗಳು ಕೂಡ ಗ್ರಾಹಕರಿಗೆ ಹೆಚ್ಚಿನ ಫೀಚರ್ ಅನ್ನು ನೀಡುತ್ತಿದೆ. ಗ್ರಾಹಕರು ಯುಪಿಐ ನ ಹೊಸ ಹೊಸ ಫೀಚರ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಇತ್ತೀಚಿಗೆ ಯುಪಿಐ ಅಪ್ಲಿಕೇಶನ್ ಗಳು ಹತ್ತು ಹಲವು ಫೀಚರ್ ಅನ್ನು ನೀಡುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತಿದೆ.
ಈಗಾಗಲೇ ಯುಪಿಐ ಪಾವತಿಗಾಗಿ ಸಾಕಷ್ಟು ಅಪ್ಲಿಕೇಶನ್ ಗಳು ಚಾಲ್ತಿಯಲ್ಲಿವೆ. ಇತ್ತೀಚೆಗಷ್ಟೇ ಯುಪಿಐ ನಲ್ಲಿ ಯುಪಿಐ ಲೈಟ್ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದರ ಮೂಲಕ ಪಾವತಿ ಇನ್ನು ಸುಲಭವಾಗಲಿದೆ. ಯುಪಿಐ ಲೈಟ್ ಪಾವತಿಯ ಸೇವೆಯನ್ನು ನೀಡುತ್ತಿರುವುದರ ಬೆನ್ನಲ್ಲೇ ಇದೀಗ ಯುಪಿಐ ಬಳಕೆದಾರರಿಗೆ ಹೊಸ ಸೌಲಭ್ಯ ಸಿಗಲಿದೆ. ಈ ಹೊಸ ಸೌಲಭ್ಯವೂ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.
ಯುಪಿಐ ನ ಮೂಲಕ ಹಣ ಗಳಿಸಬಹುದು
ಯುಪಿಐ ಬಳಕೆದಾರರಿಗೆ ಸಾಕಷ್ಟು ವಿಷಯಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಯುಪಿಐ ಪಾವತಿಯ ಮೂಲಕ ಕೂಡ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಇನ್ನಿತರ ಯುಪಿಐ ಅಪ್ಲಿಕೇಶನ್ ಗಳು ಬಳಕೆದಾರರಿಗೆ ವಿವಿಧ ರೀತಿಯ ಸಾಲ ಸೌಲಭ್ಯವನ್ನು ನೀಡುತ್ತದೆ. ಡೆಬಿಟ್ ಕಾರ್ಡ್, ಉಳಿತಾಯ ಮತ್ತು ಚಾಲ್ತಿ ಖಾತೆಗಳು ಹಾಗೂ ವಿಮಾ ಸೌಲಭ್ಯಗಳನ್ನು ಒದಗಿಸುತ್ತದೆ.
ಕ್ಯಾಶ್ ಬ್ಯಾಕ್ ಮೂಲಕ ಹಣ ಗಳಿಸಬಹುದು
ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಇನ್ನಿತರ ಯುಪಿಐ ಅಪ್ಲಿಕೇಶನ್ ಗಳನ್ನೂ ಬಳಸುವಾಗ ಹಣವನ್ನು ಗಳಿಸಬಹುದು. ಈ ಅಪ್ಲಿಕೇಶನ್ ಗಳು ವಹಿವಾಟುಗಳು ಹೆಚ್ಚಿನ ಕ್ಯಾಶ್ ಬ್ಯಾಕ್ ಅನ್ನು ನೀಡುತ್ತದೆ. ಇನ್ನು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಲೂಡೋ, ರಮ್ಮಿ ಆಟಗಳನ್ನು ಆಡುವ ಮೂಲಕ ಕೂಡ ಹಣವನ್ನು ಗಳಿಸಬಹುದು.
ಯಾವುದೇ ರೀತಿಯ ಶಾಪಿಂಗ್, ಮೊಬೈಲ್ ರಿಚಾರ್ಜ್, ಹಣದ ವರ್ಗಾವಣೆ ಮಾಡಿದರೆ ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ಕೆಲವೊಮ್ಮೆ ಕ್ಯಾಶ್ ಬ್ಯಾಕ್ ನ ಮೂಲಕ ಪಾವತಿಸಿದ ಅಷ್ಟು ಹಣವನ್ನು ಕೂಡ ಮರಳಿ ಪಡೆಯಬಹುದಾಗಿದೆ. ಸ್ವಂತ ಉತ್ಪನ್ನದ ಮಾರಾಟದ ಮೇಲು ಕ್ಯಾಶ್ ಬ್ಯಾಕ್ ಪಡೆಯಬಹುದು.