UPI Cash: ಗೂಗಲ್ ಪೆ ಮತ್ತು ಫೋನ್ ಪೆ ಮೂಲಕ ATM ನಲ್ಲಿ ಹಣ ತಗೆಯಬಹುದು, ಹೊಸ ತಂತ್ರಜ್ಞಾನ
ಈಗ ಗೂಗಲ್ ಪೆ ಮತ್ತು ಫೋನ್ ಪೆ ಮೂಲಕ ಏಟಿಎಂ ನಲ್ಲಿ ಹಣವನ್ನ ಪಡೆಯಬಹುದಾಗಿದೆ.
ATM Withdraw Through UPI: ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳು (UPI Payment) ಹೆಚ್ಚಾಗುತ್ತಿದೆ. ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳಿಗೆ ಯುಪಿಐ ವಹಿವಾಟುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಂತೂ ಯುಪಿಐನಲ್ಲಿ ಅನೇಕ ಅಪ್ಡೇಟ್ ಗಳು ಬಂದಿವೆ. ಯುಪಿಐ ತನ್ನ ಸೇವೆಯನ್ನು ವಿಸ್ತರಿಸುತ್ತಾ ಹೋಗುತ್ತಿವೆ.
ಇದೀಗ ಯುಪಿಐನಲ್ಲಿ ಹೊಸ ಸೌಲಭ್ಯ ಸಿಗಲಿದೆ. ಇನ್ನು ಮುಂದಿನ ದಿನಗಳಲ್ಲಿ ನೀವು ಯುಪಿಐನ ಮೂಲಕ ಎಟಿಎಂನಲ್ಲಿ ಹಣದ ವಹಿವಾಟುಗಳನ್ನು ಮಾಡಬಹುದು. ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.
ATM ನಲ್ಲಿ UPI ಮೂಲಕ ಹಣ ಪಡೆಯಬಹುದು
ಬ್ಯಾಂಕ್ ಗಳು ತಮ್ಮ ಗ್ರಾಹಕರಿಗಾಗಿ ಎಟಿಎಂ ಸೌಲಭ್ಯವನ್ನು ಒದಗಿಸಿತ್ತು. ಹಾಗೆಯೆ ಇತ್ತೀಚಿಗೆ UPI ವಹಿವಾಟಿನ ಸೌಲಭ್ಯ ಕೂಡ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ನೀಡುತ್ತಿದೆ. ಇದೀಗ ಯುಪಿಐ ವಹಿವಾಟು ಮತ್ತಷ್ಟು ವಿಸ್ತರಣೆಗೊಂಡಿದೆ. ಇನ್ನುಮುಂದೆ ಗೂಗಲ್ ಪೇ, ಪೆಟಿಎಂ, ಫೋನ್ ಪೇ ಮೂಲಕ ನೀವು ಎಟಿಎಂ ಕಾರ್ಡ್ ಇಲ್ಲದೆ ಹಣವನ್ನು ಪಡೆಯಬಹುದು.
ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ಹಿಂಪಡೆಯುವಿಕೆಯ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದರಿಂದಾಗಿ ಜನರು ತಮ್ಮ ಯುಪಿಐ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಎಟಿಎಂ ನ ಮೂಲಕ ಹಣವನ್ನು ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ಸಿ ಬ್ಯಾಂಕ್ ಹಾಗೂ ಪಾಂಜಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಮಾತ್ರ ಯುಪಿಐ ಅಪ್ಲಿಕೇಶನ್ ನ ಮೂಲಕ ಹಣವನ್ನು ಪಡೆಯಬಹುದು.
ಯುಪಿಐ ನ ಮೂಲಕ ಹಣ ಪಡೆಯುವ ವಿಧಾನ
*ATM ಮಷಿನ್ UPI ವಿಥ್ ಡ್ರಾ ಸೇವೆಯ ಆಯ್ಕೆಯನ್ನು ಹೊಂದಿರಬೇಕು.
*ಡಿಸ್ ಪ್ಲೇ ಮೇಲಿನ ವಿಥ್ ಡ್ರಾ ಕ್ಯಾಶ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
*ವಿಥ್ ಡ್ರಾ ಕ್ಯಾಶ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಯುಪಿಐ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.