Conversational UPI: ಇನ್ನುಮುಂದೆ ಪಿನ್ ಹಾಕುವ ಅಗತ್ಯ ಇಲ್ಲ, ಬಾಯಿ ಮಾತಿನ ಮೂಲಕ UPI ಪೇಮೆಂಟ್ ಮಾಡಿ, ಬಂತು ಬಿಗ್ ಅಪ್ಡೇಟ್.
ಇನ್ನುಮುಂದೆ ನಿಮ್ಮ ದ್ವನಿ ಅಥವಾ ಸಂಭಾಷಣೆಯ ಮೂಲಕ ಯುಪಿಐ ಪಾವತಿಯನ್ನು ಪೂರ್ಣಗೊಳಿಸಿಕೊಳ್ಳಬಹುದು.
UPI Conversational Payment: ಪ್ರಸ್ತುತ ಎಲ್ಲೆಡೆ ಯುಪಿಐ (UPI) ವಹಿವಾಟು ಹೆಚ್ಚುತ್ತಿದೆ. ಜನರು ಹೆಚ್ಚಾಗಿ ಯುಪಿಐ ಪಾವತಿಯನ್ನು ಇಷ್ಟಪಡುತ್ತಿದ್ದಾರೆ. ಇನ್ನು ಯುಪಿಐ ಪಾವತಿ ಅಪ್ಲಿಕೇಶನ್ ಗಳು ಕೂಡ ಗ್ರಾಹಕರಿಗೆ ಹೆಚ್ಚಿನ ಫೀಚರ್ ಅನ್ನು ನೀಡುತ್ತಿದೆ. ಗ್ರಾಹಕರು ಯುಪಿಐ ನ ಹೊಸ ಹೊಸ ಫೀಚರ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಇತ್ತೀಚಿಗೆ ಯುಪಿಐ ಅಪ್ಲಿಕೇಶನ್ ಗಳು ಹತ್ತು ಹಲವು ಫೀಚರ್ ಅನ್ನು ನೀಡುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತಿದೆ.
ಈಗಾಗಲೇ ಯುಪಿಐ ಪಾವತಿಗಾಗಿ ಸಾಕಷ್ಟು ಅಪ್ಲಿಕೇಶನ್ ಗಳು ಚಾಲ್ತಿಯಲ್ಲಿವೆ. ಇತ್ತೀಚೆಗಷ್ಟೇ ಯುಪಿಐ ನಲ್ಲಿ ಯುಪಿಐ ಲೈಟ್ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದರ ಮೂಲಕ ಪಾವತಿ ಇನ್ನು ಸುಲಭವಾಗಲಿದೆ. ಯುಪಿಐ ಲೈಟ್ ಪಾವತಿಯ ಸೇವೆಯನ್ನು ನೀಡುತ್ತಿರುವುದರ ಬೆನ್ನಲ್ಲೇ ಇದೀಗ ಯುಪಿಐ ಬಳಕೆದಾರರಿಗೆ ಹೊಸ ಸೌಲಭ್ಯ ಸಿಗಲಿದೆ. ಈ ಹೊಸ ಸೌಲಭ್ಯವೂ ಬಳಕೆದಾರರಿಗೆ ಇನ್ನು ಹೆಚ್ಚಿನ ಅನುಕೂಲವನ್ನು ನೀಡಲಿದೆ.
ಇನ್ನುಮುಂದೆ ಯುಪಿಐ ಪಾವತಿ ಇನ್ನು ಸುಲಭ
ಇನ್ನು ಸಾಮಾನ್ಯವಾಗಿ ಯುಪಿಐ ವಹಿವಾಟುಗಳನ್ನು ನಡೆಸಲು ಇಂಟರ್ನೆಟ್ ನ ಅಗತ್ಯವಿರಬೇಕಾಗುತ್ತದೆ. ಇನ್ನುಮುಂದೆ ಆಫ್ ಲೈನ್ ನಲ್ಲಿ ಕೂಡ ಯುಪಿಐ ವಹಿವಾಟನ್ನು ಮಾಡಬಹುದಾಗಿದೆ. ಆಫ್ ಲೈನ್ ನಲ್ಲಿ ಯುಪಿಐ ವಹಿವಾಟಿಗೆ ಅವಕಾಶವನ್ನು ನೀಡಲು ಆರ್ ಬಿಐ ನಿರ್ಧರಿಸಿದೆ. ಇನ್ನು ಆಫ್ ಲೈನ್ ಪಾವತಿಯ ಜೊತೆಗೆ ಯುಪಿಐ ಲೈಟ್ ಪಾವತಿಯ ಮಿತಿಯ ಬಗ್ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
ಕೇಂದ್ರೀಯ ಬ್ಯಾಂಕ್ ಯುಪಿಐ ಲೈಟ್ ಮೂಲಕ ಪ್ರತಿ ಪಾವತಿ ಸಾಧನಕ್ಕೆ 2000 ರೂ. ಗಳ ಒಟ್ಟಾರೆ ಮಿತಿಯೊಳಗೆ ಆಫ್ ಲೈನ್ ಮೋಡ್ ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳ ವಹಿವಾಟಿನ ಮಿತಿಯನ್ನು 200 ರೂ. ನಿಂದ 500 ರೂ. ಗೆ ಏರಿಕೆ ಮಾಡಿದೆ. ಇನ್ನುಮುಂದೆ ಇಂಟರ್ನೆಟ್ ಇಲ್ಲದೆಯೂ ನೀವು ಯುಪಿಐ ಮೂಲಕ 500 ರೂ. ಹಣವನ್ನು ಕ್ಯೂ ಆರ್ ಕೋಡ್ ಸ್ಕಾನ್ ಮಾಡಿ ಪಾವತಿ ಮಾಡಬಹುದಾಗಿದೆ.
ಯುಪಿಐನಲ್ಲಿ ಸಂಭಾಷಣೆ ಪಾವತಿ ಸಾಧ್ಯ
ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ದ್ವನಿಯ ಮೂಲಕ ಹಣ ಪಾವತಿಸುವ ವಿಧಾನವನ್ನು ಯುಪಿಐನಲ್ಲಿ ನೀಡಲು ಯೋಜಿಸುತ್ತಿದೆ. ಸುರಕ್ಷಿತ ಮತ್ತು ಸುಭದ್ರಾ ರೀತಿಯಲ್ಲಿ ಹಣಕಾಸು ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಬಳಕೆದಾರರಿಗೆ ಸಹಾಯ ಮಾಡಿಕೊಡಲು ‘ಸಂಭಾಷಣಾ ಪಾವತಿ’ (Conversational Payment) ಯೋಜನೆಯನ್ನು ನೀಡುವ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ.
ಇನ್ನುಮುಂದೆ ದ್ವನಿಯ ಮೂಲಕ ಪಾವತಿ ಮಾಡಬಹುದು
ಸದ್ಯದಲ್ಲೇ ಈ ಸಂಭಾಷಣಾ ಪಾವತಿ ಸೌಲಭ್ಯ ಯುಪಿಐ ಬಳಕೆದಾರರಿಗೆ ಲಭ್ಯವಾಗಲಿದೆ. ಇನ್ನುಮುಂದೆ ನಿಮ್ಮ ದ್ವನಿ ಅಥವಾ ಸಂಭಾಷಣೆಯ ಮೂಲಕ ಯುಪಿಐ ಪಾವತಿಯನ್ನು ಪೂರ್ಣಗೊಳಿಸಿಕೊಳ್ಳಬಹುದು.ಸಂಭಾಷಣೆ ಪಾವತಿ ಸೌಲಭ್ಯವು ಕೃತಕ ಬುದ್ದಿಮತ್ತೆ ಚಾಲಿತವಾಗಿದೆ. ಹೊಸ ತಂತ್ರಜ್ಞಾನದ ಮೂಲಕ ಆರ್ ಬಿಐ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಹೊಸ ಸಂಭಾಷಣೆ ಪಾವತಿ ಸೌಲಭ್ಯ ಯುಪಿಐ ಬಳಕೆದಾರರ ಸಮಯವನ್ನು ಇನ್ನಷ್ಟು ಉಳಿಸಲಿದೆ.