Credit Line: ಖಾತೆತಲ್ಲಿ ಹಣ ಇಲ್ಲದಿದ್ದರೂ UPI ಪೇಮೆಂಟ್ ಮಾಡುವುದು ಹೇಗೆ…? UPI ಹೊಸ ಸೇವೆ ಆರಂಭ.

ಈಗ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ UPI ನಲ್ಲಿ ಪೇಮೆಂಟ್ ಮಾಡಬಹುದು.

UPI Credit Line Facility: Google Pay, PhonePe, Paytm ಸೇರಿದಂತೆ ಇನ್ನಿತರ ಆನ್ಲೈನ್ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳು ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಡಿಜಿಟಲ್ ಯುಗದಲ್ಲಿ ಇದೀಗ UPI ಬಹು ಮುಖ್ಯ ಸ್ಥಾನವನ್ನು ಪಡೆದಿದೆ ಎನ್ನಬಹುದು. ದಿನದಿಂದ ದಿನಕ್ಕೆ UPI ಮೂಲಕ ವಹಿವಾಟು ಹೆಚ್ಚುತ್ತಲೇ ಇದೆ.

ಇನ್ನು Reserve Bank Of India ಈಗಾಗಲೇ UPI ವಹಿವಾಟಿನಲ್ಲಿ ಅನೇಕ ಬದಲಾವಣೆಯನ್ನು ತಂದಿದೆ. ಈಗಾಗಲೇ Internet ಇಲ್ಲದೆ UPI ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಬೆನ್ನಲ್ಲೇ RBI UPI ವಹಿವಾಟಿಗೆ ಸಂಬಂಧಿಸಿದಂತೆ ಮಗದೊಂದು ಸೌಲಭ್ಯವನ್ನು ಜನರಿಗೆ ಪರಿಚಯಿಸಿದೆ. ಇನ್ನುಮುಂದೆ ನೀವು ನಿಮ್ಮ ಬ್ಯಾಂಕ್ ನಲ್ಲಿ ಹಣ ಇಲ್ಲದಿದ್ದರೂ ಕೂಡ UPI ಮಾಡಲು RBI ಅವಕಾಶ ನೀಡಲಿದೆ.

Now you can make payments on UPI even if you don't have money in your account.
Image Credit: businesstoday

ಖಾತೆಯಲ್ಲಿ ಹಣ ಇಲ್ಲದಿದ್ದರೂ UPI ಪೇಮೆಂಟ್ ಸಾಧ್ಯ
ಈಗಾಗಲೇ UPI ವಹಿವಾಟುಗಳಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರಗಳು ನಡೆಯುತ್ತವೆ. ಪ್ರಸ್ತುತ UPI ತನ್ನ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಇನ್ನುಮುಂದೆ UPI ಸೇವೆಗಳು ಬ್ಯಾಂಕ್ ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಗಳಿಗೂ ಅನ್ವಯಿಸುತ್ತದೆ. UPI ಲಿಂಕ್ ಮಾಡುವ ಸೇವೆಗಳನ್ನು ಬ್ಯಾಂಕ್ ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಗಳಿಗೂ ತರಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೊಂಡಿದೆ.

ಇನ್ನು ಯಾವುದೇ ಬ್ಯಾಂಕ್ ಗ್ರಾಹಕರು ಬ್ಯಾಂಕ್ ನಲ್ಲಿ ಹಣ ಇಲ್ಲದಿದ್ದರೂ ಕೂಡ UPI ಮಾಡಬಹುದು. UPI Network ನ ಮೂಲಕ ಪೂರ್ವ ಅನುಮೋದಿತ Credit Line ಗಳನ್ನೂ ವರ್ಗಾಯಿಸಲು RBI ಬ್ಯಾಂಕ್ ಗಳಿಗೆ ಅವಕಾಶ ನೀಡುತ್ತಿದೆ.

ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿಲ್ಲದಿದ್ದರು ಖಾತೆದಾರರು ಮಿತಿಯ ವರೆಗೆ UPI ಮೂಲಕ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ. ಉಳಿತಾಯ ಖಾತೆಗಳು, ಓವರ್‌ ಡ್ರಾಫ್ಟ್ ಖಾತೆಗಳು, ಪ್ರಿಪೇಯ್ಡ್ ವ್ಯಾಲೆಟ್‌ ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು UPI ಗೆ ಲಿಂಕ್ ಮಾಡಬಹುದು.

Join Nadunudi News WhatsApp Group

Payment can now be made through UPI without having money in the bank account.
Image Credit: moneycontrol

Account ನಲ್ಲಿ ಹಣ ಇಲ್ಲದಿದ್ದರೂ UPI ಪೇಮೆಂಟ್ ಮಾಡುವುದು ಹೇಗೆ..?
*ಗ್ರಾಹಕರು ಬ್ಯಾಂಕ್‌ ಗೆ ಅರ್ಜಿ ಸಲ್ಲಿಸುವ ಮೂಲಕ ಕ್ರೆಡಿಟ್ ಲೈನ್ ಸೌಲಭ್ಯವನ್ನು ಪಡೆಯಬಹುದು.

*ಕ್ರೆಡಿಟ್ ಇತಿಹಾಸ ಮತ್ತು ವೈಯಕ್ತಿಕ ವಿವರಗಳನ್ನು ಪರಿಗಣಿಸಿ ಸಾಲದ ಮಿತಿಯನ್ನು ಬ್ಯಾಂಕ್‌ ಗಳು ನಿರ್ಧರಿಸುತ್ತವೆ. ಈ ಮಿತಿ ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾಗಿರಬಹುದು.

*ಗ್ರಾಹಕರು ಖರ್ಚು ಮಾಡಿದ ಮೊತ್ತ ಮತ್ತು ದಿನಗಳ ಸಂಖ್ಯೆಗೆ ಅನುಗುಣವಾಗಿ ಬ್ಯಾಂಕ್‌ ಗಳು ಬಡ್ಡಿ ವಿಧಿಸುತ್ತವೆ. ಸಂಪೂರ್ಣ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.

*ನೀವು ಬಳಸುವ UPI Application ನಲ್ಲಿ New Pay Letter Account ಅನ್ನು ಆರಿಸಿ, ನಂತರ Credit Line ಸೇವೆಯನ್ನು ನೀಡುವ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ಇದಾದ ಬಳಿಕ UPI Pin ಅನ್ನು ಆಯ್ಕೆ ಮಾಡಿದರೆ ನೀವು ಪಾವತಿ ಮಾಡಲು ಸಾಧ್ಯವಾಗುತ್ತದೆ.

Join Nadunudi News WhatsApp Group