UPI Transactions Limits Per Day: UPI ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲ್ಲ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಇದನ್ನು ಅಭಿವೃದ್ಧಿಪಡಿಸಿದೆ. ಆನ್ಲೈನ್ ಶಾಪಿಂಗ್ ನಿಂದ ಹಿಡಿದು ಸ್ನೇಹಿತರಿಗೆ ಹಣ ಕಳುಹಿಸುವವರೆಗೆ PhonePe, Google Pay, ಮತ್ತು Paytm ನಂತಹ ಆಪ್ ಗಳು ಕೆಲವೇ ಸೆಕೆಂಡ್‌ಗಳಲ್ಲಿ ವಹಿವಾಟು ಮಾಡಲು ಸಹಾಯ ಮಾಡುತ್ತವೆ. UPI ನಲ್ಲಿ ಹಣ ವರ್ಗಾವಣೆ ಮಾಡಲು ಮಿತಿಯನ್ನು ಅಳವಡಿಸಲಾಗಿದೆ. ಹಾಗಾದರೆ UPI ನಲ್ಲಿ ದಿನಕ್ಕೆ ಎಷ್ಟು ಹಣ ವರ್ಗಾವಣೆ ಮಾಡಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
UPI ವಹಿವಾಟು ಎಂದರೇನು?
UPI (Unified Payments Interface) ವಹಿವಾಟು ಎಂದರೆ Smartphone Application ಬಳಸಿಕೊಂಡು ಬ್ಯಾಂಕ್ ಖಾತೆಗಳ ನಡುವೆ ತ್ವರಿತ, ನೈಜ-ಸಮಯದ ಹಣ ವರ್ಗಾವಣೆ, ಬಿಲ್ ಗಳಿಗೆ ಪಾವತಿಗಳನ್ನು ಸುಗಮಗೊಳಿಸುವುದು, ಆನ್ಲೈನ್ ಶಾಪಿಂಗ್ ಮಾಡುವುದು ಅಥವಾ ಸೂಕ್ಷ್ಮ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳದೆ ಒಂದೇ UPI ಐಡಿ (ವರ್ಚುವಲ್ ಪಾವತಿ ವಿಳಾಸ) ಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವ ಮೂಲಕ ಜನರಿಗೆ ಹಣವನ್ನು ಕಳುಹಿಸುವುದು. ಇದು 24/7 ಕಾರ್ಯನಿರ್ವಹಿಸುತ್ತದೆ, UPI ಪಿನ್ ನಮೂದಿಸುವುದರ ಮೂಲಕ ಅಪ್ಲಿಕೇಶನ್ ಮೂಲಕ ತ್ವರಿತ, ಸುರಕ್ಷಿತ ಮತ್ತು ತಡೆರಹಿತ ಡಿಜಿಟಲ್ ಪಾವತಿಗಳನ್ನು ಅನುಮತಿಸುತ್ತದೆ.
UPI ಪಾವತಿ ಮಿತಿ
UPI ಇದು ನಿಮ್ಮ ದೈನಂದಿನ ಜೀವನದಲ್ಲಿ ಹಣ ಕಳುಹಿಸುವ ಬಹಳ ಸುಲಭವಾದ ಮಾರ್ಗವಾಗಿದೆ. Google Pay, PhonePe ಅಥವಾ Paytm ನಂತಹ ಅಪ್ಲಿಕೇಶನ್ ಗಳು ನಿಮಗೆ ಹಣವನ್ನು ವರ್ಗಾಗಿಸಲು ಮಿತಿ ನಿಗದಿಪಡಿಸಿದೆ. ಈ ಮಿತಿ UPI ಬಳಕೆದಾರನ ಹಿಂದಿನ ಟ್ರಾನ್ಸಾಕ್ಷನ್ ಅಥವಾ ಗ್ರಾಹಕರ ಚಟುವಟಿಕೆಯ ಆಧಾರದ ಮೇಲೆ ಅವಲಂಭಿತವಾಗಿರಬಹುದು. ಅದೇ ರೀತಿಯಲ್ಲಿ NPCI ದಿನಕ್ಕೆ UPI ಮಿತಿಯನ್ನು 1 ಲಕ್ಷಕ್ಕೆ ಸೀಮಿತ ಮಾಡಿದೆ.
UPI ಸಾಮಾನ್ಯ ಮಿತಿ
* ಸಾಮಾನ್ಯ ಬಳಕೆದಾರರು ದಿನಕ್ಕೆ ಗರಿಷ್ಠ 1 ಲಕ್ಷ ಹಣ ವರ್ಗಾವಣೆ ಮಾಡಬಹುದಾಗಿದೆ. ಇದರಲ್ಲಿ ಸ್ನೇಹಿತರಿಗೆ ಅಥವಾ ಅಂಗಡಿಗಳಲ್ಲಿ ಪಾವತಿ ಮಾಡಬಹುದಾಗಿದೆ.
* ಹಲವು ಬಾರಿ ಬೇರೆ ಬೇರೆ ಕಡೆ ವಹಿವಾಟು ಮಾಡಿ 1 ಲಕ್ಷ ತಲುಪಿದರೆ, ಆ ದಿನದ ವಹಿವಾಟು ನಿಲ್ಲುತ್ತದೆ.
* ಹಲವು ಬ್ಯಾಂಕ್ ಗಳು ವಹಿವಾಟು ಸಂಖ್ಯೆಗೂ ಕೂಡ ಮಿತಿ ಹಾಕಿವೆ. ಉದಾಹರಣೆಗೆ SBI ನಲ್ಲಿ ದಿನಕ್ಕೆ 20 P2P ವಹಿವಾಟುಗಳು ಮಾತ್ರ.
ಇಂತಹ ಸಂದರ್ಭದಲ್ಲಿ ಹೆಚ್ಚು ಮೊತ್ತ ವರ್ಗಾವಣೆ
ಕೆಲವು ವಿಶೇಷ ಸಂದರ್ಭದಲ್ಲಿ ಮಿತಿಗಿಂತ ಹೆಚ್ಚು ವಹಿವಾಟು ಮಾಡಬಹುದಾಗಿದೆ. ತೆರಿಗೆ ಪಾವತಿ, IPO ಅಪ್ಲಿಕೇಶನ್, ಆಸ್ಪತ್ರೆ ಅಥವಾ ಶಿಕ್ಷಣ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ವಹಿವಾಟು ನೆಡೆಸಬಹುದಾಗಿದೆ. ಸುಮಾರು 5 ಲಕ್ಷದವರೆಗೆ ಇಂತಹ ಸಂದರ್ಭದಲ್ಲಿ ಹೆಚ್ಚು ಮೊತ್ತವನ್ನ ವರ್ಗಾವಣೆ ಮಾಡಬಹುದಾಗಿದೆ.
UPI ಗೌಪ್ಯತೆಗಾಗಿ ಸಲಹೆಗಳು
ಡಿಜಿಟಲ್ ಪಾವತಿಗಳು ಜೀವನವನ್ನು ಸರಳಗೊಳಿಸಿದರೂ, ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ.
* ಯಾವಾಗಲೂ UPI ಅಪ್ಲಿಕೇಶನ್ ಗಳಿಗೆ ಪಾಸ್ ವರ್ಡ್ ಅಥವಾ ಬಯೋಮೆಟ್ರಿಕ್ ಲಾಕ್ ಬಳಸಿ.
* Google My Activity ಅಥವಾ Paytm ನಲ್ಲಿ ವಹಿವಾಟು ಇತಿಹಾಸವನ್ನು ಪದೇಪದೇ ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಮರೆಮಾಡುವುದು ಉತ್ತಮ.
* ನಿಮ್ಮ ಫೋನ್ ಗೆ ಸ್ಕ್ರೀನ್ ಲಾಕ್ ಹಾಕಿ, ಇದರಿಂದ ಯಾರೂ ಆಪ್ ಗಳನ್ನು ತೆರೆಯಲು ಸಾಧ್ಯವಾಗದು.
* ಗೌಪ್ಯ ವಹಿವಾಟುಗಳಿಗೆ ಪ್ರತ್ಯೇಕ ಖಾತೆಯನ್ನು ಬಳಸುವುದು ಒಳ್ಳೆಯದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

