UPI Close: ಡಿಸೆಂಬರ್ 31 ರೊಳಗೆ ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ಫೋನ್ ಪೇ, ಗೂಗಲ್ ಪೇ ಮತ್ತು ಪೆಟಿಎಂ.

ಇಂತಹ ಜನರ UPI ID ಯನ್ನು ರದ್ದುಗೊಳಿಸಲು ಮುಂದಾದ NPCI.

UPI ID Close: ಸದ್ಯ ದೇಶದಲ್ಲಿ UPI ಪಾವತಿಯನ್ನು ಎಲ್ಲರು ಬಳಸುತ್ತಾರೆ. UPI ಸೇವೆಯನ್ನು ಇತ್ತೀಚಿಗೆ ದಿನದಿಂದ ದಿನಕ್ಕೆ ಹೆಚ್ಚು ವಿಸ್ತರಣೆಗೊಳ್ಳುತ್ತಿದೆ. UPI ಸದ್ಯ ಬಳಕೆದಾರರಿಗೆ ಹೆಚ್ಚಿನ ಫೀಚರ್ ನೊಂದಿಗೆ ಲಭ್ಯವಾಗಿದೆ. UPI ಬಳಕೆ ಇಂಟೆರ್ ನೆಟ್ ಇಲ್ಲದೆ ಕೂಡ ಕೆಲಸ ಮಾಡುವ ಸೌಲಭ್ಯವನ್ನು ನೀಡುವ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಿದೆ.

UPI ID Close
Image Credit: Eenadu

UPI ಬಳಕೆದಾರರಿಗೆ ಬಿಗ್ ಅಪ್ಡೇಟ್
ಇನ್ನು ಬಳಕೆದಾರರು Google Pay, PhoneP , Paytm, Amazon Pay, Airtel Pay ಸೇರಿದಂತೆ ಇತರ UPI Application ಗಳ ಮೂಲಕ UPI ಪಾವತಿ ಮಾಡುತ್ತಿದ್ದಾರೆ. ಈಗಾಗಲೇ NPCI ಬಳಕೆದಾರರಿಗೆ ಸಾಕಷ್ಟು ಫೀಚರ್ ಅನ್ನು ನೀಡುತ್ತಾ ಬಂದಿದೆ. ಅನೇಕ ಫೀಚರ್ ನೀಡಿರುವ NPCI ಇದೀಗ UPI Payment ನಲ್ಲಿ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ. UPI ಬಳಸುವ ಪ್ರತಿ ಬಳಕೆದಾರರು ಕೂಡ NPCI ನ ಹೊಸ ನಿಯಮವನ್ನು ತಿಳಿಯುವುದು ಉತ್ತಮ. ಇಲ್ಲವಾದರೆ ನೀವು UPI ಸೇವೆಯಿಂದ ವಂಚಿತರಾಗಬೇಕಾಗುತ್ತದೆ.

UPI ID ಯನ್ನು ರದ್ದುಗೊಳಿಸಲು ಮುಂದಾದ NPCI
ಸದ್ಯ National Payment Corporation Of India ಇದೀಗ UPI ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ವರ್ಷಗಳಿಂದ ಬಳಸದೆ ಇರುವ UPI ID ಗಳನ್ನೂ ಸ್ಥಗಿತಗೊಳಿಸಲು NPCI ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ID ಗಳನ್ನೂ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ NPCI, Google Pay, PhoneP , Paytm, Amazon Pay, Airtel Pay ಸೇರಿದಂತೆ ಇತರ UPI Application ಗಳಿಗೆ ಸೂಚನೆ ನೀಡಿದೆ.

UPI ID Deactivation In India
Image Credit: Entertales

ಡಿಸೆಂಬರ್ 31 ರೊಳಗೆ ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ನಿಮ್ಮ UPI
ಸದ್ಯ NPCI ಹೊಸ ನಿಯಮದ ಪ್ರಕಾರ ಬಳಕೆದಾರರು ತಮ್ಮ UPI ID ಯನ್ನು ಉಳಿಸಿಕೊಳ್ಳಲು ಒಂದು ವರ್ಷದವರೆಗೂ ಬಳಸದೆ ಇರುವ UPI ID ಯಲ್ಲಿ ತಕ್ಷಣ ವಹಿವಾಟು ನಡೆಸಬೇಕಿದೆ. ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ, ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ.

ಎಲ್ಲ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ ಗಳು ಮತ್ತು PSP ಬ್ಯಾಂಕ್‌ ಗಳು UPI ಐಡಿ ಮತ್ತು ನಿಷ್ಕ್ರಿಯ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸುತ್ತವೆ. ಒಂದು ವರ್ಷದವರೆಗೆ ಈ ಐಡಿಯಿಂದ ಯಾವುದೇ ರೀತಿಯ ಕ್ರೆಡಿಟ್ ಅಥವಾ ಡೆಬಿಟ್ ವಹಿವಾಟು ನಡೆಯದಿದ್ದರೆ ಅಂತಹ UPI ಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. NPCI ಒಮ್ಮೆ UPI ID ಯನ್ನು ನಿಷ್ಕ್ರಿಯಗೊಳಿಸಿದರೆ ಮುಂದಿನ ವರ್ಷದಿಂದ ಅವರು ಯಾವುದೇ ವಹಿವಾಟನ್ನು ಮಾಡಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group