UPI Delete: UPI ಬಳಸುವವರೇ ಎಚ್ಚರ, ಈ ತಪ್ಪು ಮಾಡಿದರೆ ಖಾಲಿಯಾಗಲಿದೆ ನಿಮ್ಮ ಬ್ಯಾಂಕ್ ಖಾತೆ.
UPI ಐಡಿಯನ್ನು ಅಳಿಸುವುದು ಹೇಗೆ...?
UPI ID Delete Process: ದೇಶದಲ್ಲಿ ಡಿಜಿಟಲ್ ವಹಿವಾಟುಗಳು ಗಣನೀಯವಾಗಿ ಹೆಚ್ಚಿವೆ. ಇದರೊಂದಿಗೆ ವಂಚನೆಯೂ ಹೆಚ್ಚಿದೆ. ಸರ್ಕಾರದಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಿದ್ದರೂ ಜನರು ವಂಚನೆಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಜಾಗರೂಕರಾಗಿರಬೇಕು ಎಂದು ಆರ್‌ಬಿಐ ಸೂಚಿಸಿದೆ. ಹಾಗೆಯೆ ಬ್ಯಾಂಕ್ ಗಳು ತಮ್ಮ ಗ್ರಾಹಕರೊಂದಿಗೆ ಸಲಹೆಗಳನ್ನು ಹಂಚಿಕೊಳ್ಳುತ್ತಿವೆ.
ವಂಚಕರು ಜನರಿಗೆ ಆಫರ್ ಗಳನ್ನು ನೀಡುವ ಮೂಲಕ ಮತ್ತು ಅವರ UPI ಪಿನ್ ಅನ್ನು ನಮೂದಿಸುವ ಮೂಲಕ ಹಣವನ್ನು ಗಳಿಸುತ್ತಾರೆ ಎಂದು ನೀವು ಆಗಾಗ್ಗೆ ಕೇಳುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಒಂದು ಸಣ್ಣ ತಪ್ಪು ನಿಮ್ಮನ್ನು ಬಾರಿ ನಷ್ಟಕ್ಕೆ ದೂಡಬಹುದು. ಆದ್ದರಿಂದ ಎಚ್ಚರಿಕೆಯಿಂದ ವ್ಯವಹಾರ ಮಾಡುವುದು ಅಗತ್ಯ. ಈ ಲೇಖನದಲ್ಲಿ ನಾವು ನಿಮಗೆ UPI ಬಳಸುವಾಗ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎನ್ನುವ ಕೆಲವು ವಿಶೇಷ ವಿಧಾನಗಳ ಬಗ್ಗೆ ಹೇಳಲಿದ್ದೇವೆ.
UPI ಬಳಸುವವರೇ ಎಚ್ಚರ, ಈ ತಪ್ಪು ಮಾಡಿದರೆ ಖಾಲಿಯಾಗಲಿದೆ ನಿಮ್ಮ ಬ್ಯಾಂಕ್ ಖಾತೆ
UPI ಅನ್ನು ನಿಯಂತ್ರಿಸುವ ಸಂಸ್ಥೆಯಾದ NPCI ಸಹ ನೀವು ಯಾರೊಬ್ಬರಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದರೆ, ನೀವು PIN ಅನ್ನು ನಮೂದಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡುತ್ತದೆ. ಪಾವತಿಯ ಸಮಯದಲ್ಲಿ ಮಾತ್ರ ಪಿನ್ ಅನ್ನು ನಮೂದಿಸಲಾಗುತ್ತದೆ. ಇದಲ್ಲದೆ, NPCI ಪ್ರಕಾರ, ನಿಮ್ಮ ಸ್ಮಾರ್ಟ್ ಫೋನ್ ಎಲ್ಲಾದರೂ ಕಳೆದುಹೋದರೆ ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ UPI ಐಡಿಯನ್ನು ನಿರ್ಬಂಧಿಸಬೇಕು ಅಥವಾ ಅಳಿಸಬೇಕು. ಏಕೆಂದರೆ ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ಖಾಸಗಿ ಡೇಟಾವನ್ನು ಒಳಗೊಂಡಿರುತ್ತದೆ ಮತ್ತು ಒಮ್ಮೆ ಅದು ವಂಚಕರ ಕೈಗೆ ಬಿದ್ದರೆ, ನೀವು ವಂಚನೆಗೆ ಬಲಿಯಾಗುತ್ತೀರಿ ಎನ್ನುವುದು ನಿಮಗೆ ತಿಳಿದಿರಲಿ.
UPI ಐಡಿಯನ್ನು ಅಳಿಸುವುದು ಹೇಗೆ…?
UPI ಐಡಿಯನ್ನು ಅಳಿಸಲು ನೀವು ನೀವು ಬೇರೆ ಕೆಲವು ಪಾವತಿ ಅಪ್ಲಿಕೇಶನ್ ನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಲಾಗಿನ್ ಇಲ್ಲದೆ ನೀವು ID ಅನ್ನು ಅಳಿಸಲು ಸಾಧ್ಯವಾಗುವುದಿಲ್ಲ. ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಗಳು Paytm, ಫೋನ್ ಪೇ ಮತ್ತು Google Pay ಇತ್ಯಾದಿಗಳನ್ನೂ ಬಳಸಿಕೊಂಡು ಈ ಕೆಲಸವನ್ನು ಮಾಡಬಹುದು. ಮತ್ತೊಂದು ಫೋನ್ ಗೆ ಲಾಗ್ ಇನ್ ಮಾಡಿದ ನಂತರ ನೀವು ಸುಲಭವಾಗಿ UPI ಐಡಿಯನ್ನು ಅಳಿಸಬಹುದು. ನೀವು ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಕಳೆದುಕೊಂಡಾಗ ನಿರ್ಲಕ್ಷಿಸಬಾರದು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯೂಆವುದಂತೂ ಖಂಡಿತ.