Google Pay: ಗೂಗಲ್ ಪೆ ನಲ್ಲಿ ಬಿಗ್ ಅಪ್ಡೇಟ್ ಬಿಡುಗಡೆ, ಈ ಸೆಟ್ಟಿಂಗ್ ಮಾಡಿಕೊಂಡು ಪಿನ್ ಹಾಕದೆ ಪೇಮೆಂಟ್ ಮಾಡಿ.

ಗ್ರಾಹಕರು ಗೂಗಲ್ ಪೆ ನಲ್ಲಿ ಯುಪಿಐ ಲೈಟ್ ಅನ್ನು ಬಳಸಬಹುದಾಗಿದೆ.

UPI Lite IN Google Pay: ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳು (UPI Payment) ಹೆಚ್ಚಾಗುತ್ತಿದೆ. ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳಿಗೆ ಯುಪಿಐ ವಹಿವಾಟುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಂತೂ ಯುಪಿಐನಲ್ಲಿ ಅನೇಕ ಅಪ್ಡೇಟ್ ಗಳು ಬಂದಿವೆ.

ಯುಪಿಐ ತನ್ನ ಸೇವೆಯನ್ನು ವಿಸ್ತರಿಸುತ್ತಾ ಹೋಗುತ್ತಿವೆ. ಇತ್ತೀಚಿಗೆ ಯುಪಿಐನ ಮೂಲಕ ಎಟಿಎಂನಲ್ಲಿ ಹಣದ ವಹಿವಾಟುಗಳನ್ನು ಮಾಡಲು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ.

Another new service for Google Pay users
Image Credit: Fisdom

ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಅನೇಕ ಯುಪಿಐ ವಹಿವಾಟುಗಳು ಚಾಲ್ತಿಯಲ್ಲಿವೆ. ಇದೀಗ ಗೂಗಲ್ ಪೇ ಇನ್ನಷ್ಟು ಸೌಲಭ್ಯವನ್ನು ನೀಡಲಿದೆ. ಇನ್ನುಮುಂದೆ ನೀವು ಗೂಗಲ್ ಪೇ (Google Pay) ಮೂಲಕ ಇನ್ನಷ್ಟು ಸೌಲಭ್ಯಗಳನ್ನು ಪಡೆಯಬಹುದು.

ಗೂಗಲ್ ಪೆ ನಲ್ಲಿ ಯುಪಿಐ ಲೈಟ್ ಬಳಕೆ
ಇದೀಗ ಗ್ರಾಹಕರು ಗೂಗಲ್ ಪೆ ನಲ್ಲಿ ಯುಪಿಐ ಲೈಟ್ ಅನ್ನು ಬಳಸಬಹುದಾಗಿದೆ. ಇದರಿಂದ ಸಣ್ಣಪಾವತಿಗಳನ್ನು ಸಿಂಗಲ್ ಟ್ಯಾಪ್ ನಲ್ಲಿ ಮಾಡುವುದಕ್ಕೆ ಸಾಧ್ಯವಾಗಲಿದೆ. ಗೂಗಲ್ ಪೆ UPI ಲೈಟ್ ಅನ್ನು ತನ್ನ ಪ್ಲಾಟ್ ಫಾರ್ಮ್ ನಲ್ಲಿ ಪರಿಚಯಿಸಿದೆ. UPI ಲೈಟ್ ಅನ್ನುವುದು ಸಣ್ಣ ಪಾವತಿಗಳನ್ನು ಸುಲಭವಾಗಿ ಮಾಡುವ ಡಿಜಿಟಲ್ ಪಾವತಿ ಸೇವೆಯಾಗಿದೆ.

ಇದರ ಮೂಲಕ ನೀವು ಸಿಂಗಲ್ ಟ್ಯಾಪ್ ನಲ್ಲಿ 200 ರೂಪಾಯಿಗಳನ್ನು ಪಿನ್ ನಮೂದಿಸದೆ ಸೆಂಡ್ ಮಾಡಲು ಸಾಧ್ಯವಾಗಲಿದೆ. ಇದು ಕ್ಯಾಬ್, ತಿಂಡಿ ತಿನಿಸಿಗಾಗಿ ಪಾವತಿ ಮಾಡುವವರಿಗೆ ಸೂಕ್ತವಾಗಿದೆ. ಹಾಗಾದರೆ ಗೂಗಲ್ ಪೆ ಅಲ್ಲಿ ಲೈಟ್ ಬಳಕೆ ಹೇಗೆ ಅನ್ನುವುದನ್ನು ತಿಳಿಯೋಣ.

Join Nadunudi News WhatsApp Group

Another new service for Google Pay users
Image Credit: Fastread

ಗೂಗಲ್ ಪೆ UPI ಲೈಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ
* ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೆ ಅಪ್ಲಿಕೇಶನ್ ಅನ್ನು ತೆರೆಯಬೇಕು.

* ನಂತರ ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು.

* ನಂತರ ನಿಮ್ಮ ಪ್ರೊಫೈಲ್ ಪೇಜ್ ನಲ್ಲಿ UPI LITE ಆಕ್ಟಿವಿಟಿ ಆಯ್ಕೆಯನ್ನು ಹುಡುಕಲು ಕೆಳಗೆ ಸ್ಕ್ರಾಲ್ ಮಾಡಿ ಇದೀಗ ಅದರ ಮೇಲೆ ಟಪ್ ಮಾಡಿ.

* ಇದರಲ್ಲಿ UPI LITE ಕುರಿತು ಸೂಚನೆಗಳು ಮತ್ತು ವಿವರಗಳ ಹೊಸ ಪರದೆ ಕಾಣಿಸಲಿದೆ.

* ಇದರ ನಂತರ UPI LITE ಅನ್ನು ಸಕ್ರಿಯಗೊಳಿಸಲು ಆಯ್ಕೆಯನ್ನು ಟ್ಯಾಪ್ ಮಾಡಿ.

* ನಂತರ ಅದರಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡುವ ಪ್ರಕ್ತಿಯೇ ಬರಲಿದೆ.

* ನಂತರ ನೀವು ಅಲ್ಲಿ ನೀಡಿದ ಮಾಹಿತಿಯನ್ನು ಭರ್ತಿ ಮಾಡಬೇಕು.

* ನಂತರ UPI LITE ಅನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗಿದೆ ಎಂದು ಸೂಚಿಸುವ ಸಂದೇಶ ಕಾಣಲಿದೆ.

Join Nadunudi News WhatsApp Group