UPI Update: UPI ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಹೊಸ ಸೇವೆ ಆರಂಭ, RBI ಅಧಿಕೃತ ಘೋಷಣೆ.
ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು UPI ಬಳಕೆದಾರರಿಗೆ ಕ್ರೆಡಿಟ್ ಲೈನ್ ಸೇವೆ.
UPI Now Pay Later Facility: ದೇಶದಲ್ಲಿ UPI ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. UPI ಬಳಕೆದಾರರಿಗೆ ವಾರಕ್ಕೆ ವೊಂದಾದರೂ ಹೊಸ ಹೊಸ Update ಪರಿಚಯವಾಗುತ್ತಿದೆ. UPI ಬಳಕೆದಾರರು ಇತ್ತೀಚಿಗೆ ಹೆಚ್ಚಿನ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಜನರು ಹೆಚ್ಚಾಗಿ ನಗದು ರಹಿತ ವಹಿವಾಟನ್ನು ಬಳಸುತ್ತಿದ್ದಾರೆ ಎನ್ನಬಹುದು.
ದೇಶದ ಕೋಟ್ಯಂತರ ಜನರ ಸ್ನೇಹಿಯಾಗಿರುವ UPI ಸದ್ಯ ಮತ್ತೊಂದು ಹೊಸ ಸೇವೆಯನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಹೌದು ಈಗ ನೀವು ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ ಸಹ ನೀವು ಯುಪಿಐ ಪಾವತಿ ಮಾಡಬಹುದು. ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು UPI ಬಳಕೆದಾರರಿಗೆ ಕ್ರೆಡಿಟ್ ಲೈನ್ ಸೇವೆಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅನುಮೋದನೆಯನ್ನು ನೀಡಿದೆ.
UPI ಪೇ ಲೇಟರ್ ಸೌಲಭ್ಯ ಎಂದರೆ…
UPI Now Pay Later Facility ಒಂದು ರೀತಿಯ ಕ್ರೆಡಿಟ್ ಲೈನ್ ಆಗಿದೆ ಇದರ ಮೂಲಕ ಖಾತೆಯಲ್ಲಿ ಹಣವಿಲ್ಲದೆಯೂ UPI ಪಾವತಿ ಮಾಡಬಹುದು, ನಂತರ ಇದನ್ನು ಪಾವತಿ ಮಾಡಬಹುದು. ಈ ಸೌಲಭ್ಯವು ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. UPI ಮೂಲಕ ನಿಮ್ಮ ಉಳಿತಾಯ ಖಾತೆಯ ಹೊರತಾಗಿ ನೀವು ಈಗ ಕ್ರೆಡಿಟ್ ಕಾರ್ಡ್, ಪ್ರಿಪೇಯ್ಡ್ ವಾಲೆಟ್, ಓವರ್ ಡ್ರಾಫ್ಟ್ ಖಾತೆ ಮತ್ತು UPI Credit Line ಅನ್ನು ಲಿಂಕ್ ಮಾಡಬಹುದು. ICICI ನಂತಹ ಅನೇಕ ಬ್ಯಾಂಕುಗಳು UPI ನೌ ಪೇ ಲೇಟರ್ ಸೌಲಭ್ಯವನ್ನು ಸಹ ಪ್ರಾರಂಭಿಸಿವೆ.
ಯುಪಿಐ ನೌ ಪೇ ಲೇಟರ್ ಅನ್ನು ಎಷ್ಟು ದಿನಗಳಲ್ಲಿ ಪಾವತಿಸಬೇಕು…?
ಯುಪಿಐ ನೌ ಪೇ ಲೇಟರ್ ಮೂಲಕ, ನೀವು ರೂ 7,500 ರಿಂದ ರೂ 50,000 ವರೆಗಿನ ಕ್ರೆಡಿಟ್ ಲೈನ್ ಅನ್ನು ಬಳಸಬಹುದು. ಗ್ರಾಹಕರು ಈ ಹಣವನ್ನು 45 ದಿನಗಳಲ್ಲಿ ಪಾವತಿಸಬೇಕಾಗುತ್ತದೆ. ತಡವಾಗಿ ಪಾವತಿಸಿದರೆ 42.8 ಪ್ರತಿಶತದವರೆಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಈ ಪಾವತಿಯ ಮೇಲೆ ನೀವು GST ಅನ್ನು ಸಹ ಪಾವತಿಸಬೇಕಾಗುತ್ತದೆ.
ಯುಪಿಐ ನೌ ಪೇ ಲೇಟರ್ ಬಳಕೆ
ಈ ವೈಶಿಷ್ಟ್ಯವನ್ನು ಬಳಸಿಕೊಳ್ಳಲು ನೀವು ಬ್ಯಾಂಕ್ ನ ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಅನ್ನು ತೆರೆಯಬೇಕಾಗುತ್ತದೆ. ತದನಂತರ ಪೂರ್ವ ಅನುಮೋದಿತ ಸಾಲ ವಿಭಾಗಕ್ಕೆ ಹೋಗಿ UPI ನೌ ಪೇ ಲೇಟರ್ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯವು ವಿವಿಧ ಬ್ಯಾಂಕ್ ಗಳಿಗೆ ಅನುಗುಣವಾಗಿ ಬದಲಾಗುತ್ತದೆ.