UPI Payment: UPI ಬಳಸುವವರಿಗೆ ಬಂತು ಎಚ್ಚರಿಕೆಯ ಕರೆಘಂಟೆ, ಈ ಸಣ್ಣ ತಪ್ಪು ಮಾಡಿದರೆ ನಿಮ್ಮ ಖಾತೆ ಸಂಪೂರ್ಣ ಖಾಲಿ.
UPI ಬಳಕೆದಾರರಿಗೆ ಎಚ್ಚರಿಕೆಯ ಮಾಹಿತಿ, ಇಂತಹ ತಪ್ಪುಗಳನ್ನ ಮಾಡಿದರೆ ಖಾತೆ ಖಾಲಿ.
UPI Scam: ದಿನಗಳಲ್ಲಿ ಯುಪಿಐ ವಹಿವಾಟುಗಳು (UPI Payment) ಹೆಚ್ಚಾಗುತ್ತಿದೆ. ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳಿಗೆ ಯುಪಿಐ ವಹಿವಾಟುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಂತೂ ಯುಪಿಐನಲ್ಲಿ ಅನೇಕ ಅಪ್ಡೇಟ್ ಗಳು ಬಂದಿವೆ. ಯುಪಿಐ ತನ್ನ ಸೇವೆಯನ್ನು ವಿಸ್ತರಿಸುತ್ತಾ ಹೋಗುತ್ತಿವೆ. ಹತ್ತು ಹಲವು ಆಕರ್ಷಕ ಅಪ್ಡೇಟ್ ಗಳೊಂದಿಗೆ ಯುಪಿಐ ಅಪ್ಲಿಕೇಶನ್ ಗಳು ಗ್ರಾಹಕರನ್ನು ಸೆಳೆಯುತ್ತಿದೆ.
UPI ಬಳಸುವವರಿಗೆ ಬಂತು ಎಚ್ಚರಿಕೆಯ ಕರೆಘಂಟೆ
ಇತ್ತೀಚಿಗೆ ಯುಪಿಐನ ಮೂಲಕ ಎಟಿಎಂನಲ್ಲಿ ಹಣದ ವಹಿವಾಟುಗಳನ್ನು ಮಾಡಲು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಇನ್ನು ದೇಶದಲ್ಲಿ ಯುಪಿಐ ಬಳಕೆ ಹೆಚ್ಚುತ್ತಿದ್ದನಂತೆ ವಂಚನೆಯ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿದೆ. ನೀವು ಯುಪಿಐ ಬಳಸುತ್ತಿದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಯುಪಿಐ ಬಳಸುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಸೂಕ್ತ. ಯುಪಿಏ ಪಾವತಿಯ ಸಮಯದಲ್ಲಿ ಈ ತಪ್ಪಾದರೆ ನಿಮ್ಮ ಖಾತೆ ಸಂಪೂರ್ಣವಾಗಿ ಖಾಲಿಯಾಗಲಿದೆ.
ಯುಪಿಐ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ
*ಯಾವುದೇ ಬ್ಯಾಂಕ್ ಅಥವಾ ಇನ್ನಿತರ ಸಂಸ್ಥೆಗಳು ಹಣಕಾಸಿನ ವಹಿವಾಟನ್ನು ಮಾಡುವಾಗ ಯುಪಿಐ ಪಿನ್ ಅನ್ನು ಕೇಳುವುದಿಲ್ಲ. ಹಾಗಾಗಿ ನಿಮ್ಮ ಯುಪಿಐ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
*ನಿಮ್ಮ ಯುಪಿಐ ಪಿನ್ ಅನ್ನು ಬಳಸಿ ಮೂರನೇ ವ್ಯಕ್ತಿ ನಿಮ್ಮ ಖಾತೆಯಲ್ಲಿನ ಹಣವನ್ನು ಖಾಲಿ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಯುಪಿಐ ಪಿನ್ ಅನ್ನು ಆಗಾಗ ಬದಲಾಯಿಸುವುದು ಸೂಕ್ತ.
*ಬ್ಯಾಂಕ್ ಅಥವಾ ಅಪ್ಲಿಕೇಶನ್ ಖಾತೆಯಲ್ಲಿ ಕೆಲವು ಪ್ರಮುಖ ಸೆಟ್ಟಿಗ್ ಗಳನ್ನೂ ಅಪ್ಡೇಟ್ ಮಾಡಲು ಅಥವಾ ನಿಮ್ಮ ಕೆವೈಸಿ ಅನ್ನು ಅಪ್ಡೇಟ್ ಮಾಡುವುದು ತುಂಬಾ ಅವಶ್ಯಕ. ಇದನ್ನು ಮಾಡಲು ಗ್ರಾಹಕ ಆರೈಕೆ ಪ್ರತಿನಿಧಿಗಳಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಿಯಂತ್ರಣಕ್ಕೆ ಪ್ರವೇಶವನ್ನು ಅನುಮತಿಸಬಾರದು.
*ಯುಪಿಐ ಅಪ್ಲಿಕೇಶನ್ ಗಳಲ್ಲಿ ಕೆಲವು ಕ್ಯಾಶ್ ಬ್ಯಾಕ್ ಗಳು ಅಥವಾ ಬಹುಮಾನಗಳಂತಹ ಆಫರ್ ಸಂದೇಶಗಳ ಬಗ್ಗೆ ಗಮನಹರಿಸದಿರುವುದು ಉತ್ತಮ.
*ಇನ್ನು ನಿಮ್ಮ ಸ್ಮಾರ್ಟ್ ಫೋನ್ ಗಳಿಗೆ ಯಾವುದೇ ರೀತಿಯ ಅಪರಿಚಿತ ಲಿಂಕ್ ಬಂದರು ಕೂಡ ನೀವು ಅದನ್ನು ಕ್ಲಿಕ್ ಮಾಡಬೇಡಿ. ಕೇವಲ ಒಂದು ಲಿಂಕ್ ಕ್ಲಿಕ್ ಮಾಡಿದರೆ ನೀವು ದೊಡ್ಡ ಮೊತ್ತದ ನಷ್ಟ ಅನುಭವಿಸಬೇಕಾಗುತ್ತದೆ.