UPI Offline: ಈಗ ಇಂಟರ್ನೆಟ್ ಇಲ್ಲದೆ UPI ಲೈಟ್ ಮೂಲಕ ಪೇಮೆಂಟ್ ಮಾಡಬಹುದು, RBI ನಿಂದ ಹೊಸ ಸೇವೆ ಆರಂಭ.

ಈಗ ಇಂಟರ್ನೆಟ್ ಇಲ್ಲದೆ UPI ಲೈಟ್ ಮೂಲಕ ಪೇಮೆಂಟ್ ಮಾಡಬಹುದು.

UPI By Without Internet: ಯುಪಿಐ ದಿನದಿಂದ ದಿನಕ್ಕೆ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇತ್ತೀಚೆಗಂತೂ ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ನಲ್ಲಿಹೊಸ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪಾವತಿಯ (Online Payment) ವಹಿವಾಟು ಹೆಚ್ಚುತ್ತಿದೆ.

ಗೂಗಲ್ ಪೇ, ಫೋನ್ ಪೇ,ಪೆಟಿಎಂ ಸೇರಿದಂತೆ ಇನ್ನಿತರ ಆನ್ಲೈನ್ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳು ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಈ ಆನ್ಲೈನ್ ಪಾವತಿಯ ಬಳಕೆಯ ಕಾರಣ ಗ್ರಾಹಕರು ಸಣ್ಣ ಪುಟ್ಟ ವಿಚಾರಗಳಿಗೆ ಬ್ಯಾಂಕ್ ಗಳಿಗೆ ಭೇಟಿ ನೀಡುವುದು ಕಡಿಮೆಯಾಗಿದೆ.

How to make UPI payment offline
Image Credit: Cleartax

ನಗದು ರಹಿತ ವಹಿವಾಟುಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ ಆನ್ಲೈನ್ ಮೂಲಕ ಪಾವತಿ ಹೆಚ್ಚಾಗಿದೆ. ಇನ್ನು ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲು ಯುಪಿಐ (UPI) ವಹಿವಾಟುಗಳು ತನ್ನ ಸೇವೆಯನ್ನು ವಿಸ್ತರಿಸುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತಿದೆ.

ಇನ್ನುಮುಂದೆ ಆಫ್ ಲೈನ್ ನಲ್ಲಿ ಕೂಡ ಯುಪಿಐ ಪಾವತಿಗೆ ಅವಕಾಶ
ಇನ್ನು ಸಾಮಾನ್ಯವಾಗಿ ಯುಪಿಐ ವಹಿವಾಟುಗಳನ್ನು ನಡೆಸಲು ಇಂಟರ್ನೆಟ್ ನ ಅಗತ್ಯವಿರಬೇಕಾಗುತ್ತದೆ. ಇನ್ನುಮುಂದೆ ಆಫ್ ಲೈನ್ ನಲ್ಲಿ ಕೂಡ ಯುಪಿಐ ವಹಿವಾಟನ್ನು ಮಾಡಬಹುದಾಗಿದೆ. ಆಫ್ ಲೈನ್ ನಲ್ಲಿ ಯುಪಿಐ ವಹಿವಾಟಿಗೆ ಅವಿಕ್ಸಶ ನೀಡುವ ಜೊತೆಗೆ ಆರ್ ಬಿಐ ಇನ್ನಿತರ ಹೊಸ ಹೊಸ ಆಯ್ಕೆಯನ್ನು ಕೂಡ ಗ್ರಾಹಕರಿಗೆ ನೀಡುತ್ತಿದೆ.

ಆಫ್ ಲೈನ್ ನಲ್ಲಿ ಯುಪಿಐ ಪಾವತಿ ಹೇಗೆ ಸಾಧ್ಯ
*ಬಳಕೆದಾರರು ಡಯಲ್ ಕೋಡ್ ಸೇವೆಯನ್ನು ಬಳಸಿಕೊಂಡು ಹಣವನ್ನು ಸುಲಭವಾಗಿ ಕಳುಹಿಸಬಹುದು. ಡಯಲ್  ಕೋಡ್ (USSD) ಸೇವೆಗಳನ್ನು ಬಳಸುವುದು ಬ್ಯಾಂಕ್ ಒದಗಿಸಿದ USSD ಸೇವೆಗಳನ್ನು ಅಥವಾ ನೀವು ಬಳಸುವ ಪಾವತಿ ಸೇವೆಗಳನ್ನು ಬಳಸಿಕೊಂಡು ಫೋನ್ ನ ಡಯಲರ್ ನಲ್ಲಿ ವಿಶೇಷ ಕೋಡ್ ಅನ್ನು ಡಯಲ್ ಮಾಡುವ ಮೂಲಕ ಹಣವನ್ನು ಕಳುಹಿಸಬಹುದು. ನಿಮ್ಮ ಫೋನ್ ಡಯಲರ್ ನಲ್ಲಿ *99# ಬಳಸಿ ಹಣವನ್ನು ಕಳುಹಿಸಬಹುದು.

Join Nadunudi News WhatsApp Group

UPI Lite Payment Limit
Image Credit: Economictimes

*ವಿವಿಧ ಯುಪಿಐ ಅಪ್ಲಿಕೇಶನ್ ಗಳು ಮೊಬೈಲ್ ವ್ಯಾಲೆಟ್ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒದಗಿಸುತ್ತದೆ. ನೀವು ಮೊಬೈಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಬಳಸಿ ಇಂಟರ್ನೆಟ್ ಇಲ್ಲದೆ ಯುಪಿಐ ಮೂಲಕ ಹಣದ ವಹಿವಾಟನ್ನು ನಡೆಸಬಹುದು.

ಯುಪಿಐ ಲೈಟ್ ಪಾವತಿಯ ಮಿತಿ
ಇನ್ನು ಯುಪಿಐ ಲೈಟ್ ಪಾವತಿಯ ಮಿತಿಯ ಬಗ್ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಮಹತ್ವದ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಕೇಂದ್ರೀಯ ಬ್ಯಾಂಕ್ ಯುಪಿಐ ಲೈಟ್ ಮೂಲಕ ಪ್ರತಿ ಪಾವತಿ ಸಾಧನಕ್ಕೆ 2000 ರೂ. ಗಳ ಒಟ್ಟಾರೆ ಮಿತಿಯೊಳಗೆ ಆಫ್ ಲೈನ್ ಮೋಡ್ ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳ ವಹಿವಾಟಿನ ಮಿತಿಯನ್ನು 200 ರೂ. ನಿಂದ 500 ರೂ. ಗೆ ಏರಿಕೆ ಮಾಡಿದೆ. ಇನ್ನುಮುಂದೆ ಇಂಟರ್ನೆಟ್ ಇಲ್ಲದೆಯೂ ನೀವು ಯುಪಿಐ ಮೂಲಕ 500 ರೂ. ಹಣವನ್ನು ಕ್ಯೂ ಆರ್ ಕೋಡ್ ಸ್ಕಾನ್ ಮಾಡಿ ಪಾವತಿ ಮಾಡಬಹುದಾಗಿದೆ.

Join Nadunudi News WhatsApp Group