UPI Transaction: ಈಗ ಖಾತೆಯಲ್ಲಿ ಹಣ ಇಲ್ಲದಿದ್ದರೂ UPI ಮಾಡಬಹುದು, UPI ಬಳಕೆದಾರರಿಗೆ RBI ಮಹತ್ವದ ಘೋಷಣೆ.
ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರವನ್ನು ಘೋಷಿಸಿದೆ.
UPI Payment New Facility: ಡಿಜಿಟಲ್ ಯುಗದಲ್ಲಿ ಇದೀಗ UPI ಬಹು ಮುಖ್ಯ ಸ್ಥಾನವನ್ನು ಪಡೆದಿದೆ. ದಿನದಿಂದ ದಿನಕ್ಕೆ UPI ಮೂಲಕ ವಹಿವಾಟು ಹೆಚ್ಚುತ್ತಲೇ ಇದೆ. ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಈಗಾಗಲೇ UPI ವಹಿವಾಟಿನಲ್ಲಿ (UPI Payment) ಅನೇಕ ಬದಲಾವಣೆಯನ್ನು ತಂದಿದೆ.
UPI ವಹಿವಾಟಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಇನ್ನುಮುಂದೆ ನೀವು ನಿಮ್ಮ ಬ್ಯಾಂಕ್ ನಲ್ಲಿ ಹಣ ಇಲ್ಲದಿದ್ದರೂ ಕೂಡ ಯುಪಿಐ RBI ಅವಕಾಶ ನೀಡಲಿದೆ. RBI ಈಗ UPI ನಲ್ಲಿ ಹೊಸ ಸೇವೆಯನ್ನ ಜಾರಿಗೆ ತರಲು ಮುಂದಾಗಿದ್ದು ಇನ್ನುಮುಂದೆ UPI ಬಳಸುವ ಜನರು ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಪೇಮೆಂಟ್ ಮಾಡಬಹುದಾಗಿದೆ.
UPI ಬಳಕೆದಾರರಿಗೆ RBI ಮಹತ್ವದ ಘೋಷಣೆ
ಇನ್ನು ಯಾವುದೇ ಬ್ಯಾಂಕ್ ಗ್ರಾಹಕರು ಬ್ಯಾಂಕ್ ನಲ್ಲಿ ಹಣ ಇಲ್ಲದಿದ್ದರೂ ಕೂಡ UPI ಮಾಡಬಹುದು. UPI Network ನ ಮೂಲಕ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಗಳನ್ನೂ ವರ್ಗಾಯಿಸಲು RBI ಬ್ಯಾಂಕ್ ಗಳಿಗೆ ಅವಕಾಶ ನೀಡುತ್ತಿದೆ. ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿಲ್ಲದಿದ್ದರು ಖಾತೆದಾರರು ಮಿತಿಯ ವರೆಗೆ UPI ಮೂಲಕ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ.
Account ನಲ್ಲಿ ಹಣ ಇಲ್ಲದಿದ್ದರೂ ಇನ್ನುಮುಂದೆ UPI ಸಾಧ್ಯ
ಈಗಾಗಲೇ UPI ವಹಿವಾಟುಗಳಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರಗಳು ನಡೆಯುತ್ತವೆ. ಪ್ರಸ್ತುತ UPI ತನ್ನ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಇನ್ನುಮುಂದೆ UPI ಸೇವೆಗಳು ಬ್ಯಾಂಕ್ ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಗಳಿಗೂ ಅನ್ವಯಿಸುತ್ತದೆ. UPI ಲಿಂಕ್ ಮಾಡುವ ಸೇವೆಗಳನ್ನು ಬ್ಯಾಂಕ್ ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಗಳಿಗೂ ತರಲಾಗಿದೆ ಎಂದು ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ಬಹಿರಂಗಪಡಿಸಿದ್ದಾರೆ.
ಕ್ರೆಡಿಟ್ ಕಾರ್ಡ್ ಗಳಿಗೆ ಯುಪಿಐ ಲಿಂಕ್
ಗ್ರಾಹಕರಿಗೆ Overdraft ಸೌಲಭ್ಯವನ್ನು ನೀಡಲು RBI ಈಗಾಗಲೇ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಹಾಗೆಯೆ ಕ್ರೆಡಿಟ್ ಕಾರ್ಡ್ ಗಳನ್ನೂ UPI ಗೆ ಲಿಂಕ್ (Credit Card Link To UPI) ಮಾಡಲು ಸೂಚಿಸಿದೆ. ಬ್ಯಾಂಕ್ ಗಳಲ್ಲಿನ ಠೇವಣಿ ಖಾತೆಗಳ ನಡುವೆ UPI ವಹಿವಾಟುಗಳನ್ನು ಸಕ್ರಿಯಗೊಳಿಸಬಹುದು.
ಕ್ರೆಡಿಟ್ ಕಾರ್ಡುಗಳನ್ನ UPI ಗೆ ಲಿಂಕ್ ಮಾಡುವುದರಿಂದ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇರುವ ಸಮಯದಲ್ಲಿ UPI ಪೇಮೆಂಟ್ ಮಾಡಿದರೆ ನಿಮ್ಮ ಕ್ರೆಡಿಟ್ ಕಾರ್ಡಿನಿಂದ ಹಣ ಕಡಿತ ಆಗುತ್ತದೆ. ಕ್ರೆಡಿಟ್ ಕಾರ್ಡ್ ಗಳಿಗೆ UPI ಲಿಂಕ್ ಮಾಡುದರಿಂದ ಬ್ಯಾಂಕ್ ಗಳು ಹೊಸ ಬಳಕೆದಾರರಿಗೆ ಸೈನ್ ಅಪ್ ಮಾಡುವ ಅವಶ್ಯಕತೆ ಇರುವುದಿಲ್ಲ. ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಇದರ ಮೂಲಕ ಕ್ರೆಡಿಟ್ ನೀಡಬಹುದಾಗಿದೆ.