UPI Update: 4 ಘಂಟೆಗಳ ಕಾಲ UPI ಪೇಮೆಂಟ್ ಮಾಡಲು ಸಾಧ್ಯವಿಲ್ಲ, ಇಂತಹ UPI ಖಾತೆ ನಿಷೇಧಿಸಲು RBI ನಿರ್ಧಾರ.
ಇಂತಹ UPI ಖಾತೆಗಳನ್ನ ಕ್ಲೋಸ್ ಮಾಡಲು ಮುಂದಾದ RBI
UPI Payment Rule: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರು ಡಿಜಿಟಲ್ ಮೂಲಕ ಎಲ್ಲ ವ್ಯವಹಾರಗಳನ್ನು ನಡೆಸುತ್ತಾರೆ. ಕೈಯಲ್ಲಿ ನಗದು ಹಣವಿಲ್ಲದಿದ್ದರೂ ಕೂಡ ಮೊಬೈಲ್ ನಲ್ಲಿ ಗೂಗಲ್ ಪೆ, ಫೋನ್ ಪೆ (Phone Pay), ಪೆಟಿಎಂ ನ (Paytm) ಮೂಲಕ ಹಣವನ್ನು ಪಾವತಿಮಾಡುತ್ತಿದ್ದಾರೆ. UPI ನ ಮೂಲಕ ಬ್ಯಾಂಕ್ ನ ವ್ಯವಹಾರಗಳನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ.
National Payments Corporation of India 2016 ರಲ್ಲಿ ದೇಶದಾದ್ಯಂತ UPI Payment ಅನ್ನು ಪರಿಚಯಿಸಿದೆ. ಸದ್ಯ ಎಲ್ಲೆಡೆ UPI ಟ್ರೆಂಡ್ ನಲ್ಲಿದೆ. ಎಲ್ಲಾ ರೀತಿಯ ಪಾವತಿ ಸೌಲಭ್ಯಗಳು UPI ಮೂಲಕ ಸಿಗುತ್ತಿರುವ ಕಾರಣ UPI ಒಂದು ರೀತಿಯಲ್ಲಿ ಜನಸ್ನೇಹಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು UPI ಅನ್ನು ಬಳಸುತ್ತಿದ್ದಾರೆ. ಸದ್ಯ UPI ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಹರಬಿದ್ದಿದೆ. UPI ಹೊಸ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ.
UPI ಬಳಕೆದಾರರಿಗೆ RBI ಹೊಸ ನಿಯಮ
NPCI ನಿರ್ದಿಷ್ಟ ವ್ಯಾಪಾರಿ ವರ್ಗಕ್ಕೆ ವಹಿವಾಟು ಮಿತಿಯನ್ನು ಹೆಚ್ಚಿಸಲು ಬ್ಯಾಂಕುಗಳು, ಪಾವತಿ ಸೇವಾ ಪೂರೈಕೆದಾರರು (PSP ಗಳು) ಮತ್ತು UPI ಅಪ್ಲಿಕೇಶನ್ ಗಳಿಗೆ ನಿರ್ದೇಶನ ನೀಡಿದೆ. ಇನ್ನುಮುಂದೆ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಬಿಲ್ ಗಳು ಅಥವಾ ಶೈಕ್ಷಣಿಕ ಸೇವೆಗಳ ಶುಲ್ಕದಂತಹ ವೆಚ್ಚಗಳಿಗಾಗಿ UPI ಮೂಲಕ 5 ಲಕ್ಷದವರೆಗೆ ಪಾವತಿಸಬಹುದು.
UPI ಮೂಲಕ ಪಾವತಿ ಮಾಡಿದ ಹಣವನ್ನು 4 ಗಂಟೆಗಳಲ್ಲಿ ಹಿಂಪಡೆಯಲು RBI ಹೊಸ ನಿಯಮವನ್ನು ರೂಪಿಸುತ್ತಿದೆ. ಈ ಮೂಲಕ ಹೆಚ್ಚುತ್ತಿರುವ ವಂಚನೆಗೆ ಬ್ರೇಕ್ ಹಾಕಲು RBI ನಿರ್ಧರಿಸಿದೆ. ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಮೊದಲ ವಹಿವಾಟಿನಲ್ಲಿ ಸರ್ಕಾರವು ಕೆಲವು ಬದಲಾವಣೆ ತರಲು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ ನಿರ್ಧಿಷ್ಟ ಮೊತ್ತಕ್ಕಿಂತ ಹೆಚ್ಚಿನ ವಹಿವಾಟುಗಳು ಕನಿಷ್ಠ ಕಾಲಮಿತಿ ವಿಧಿಸುವ ಯೋಜನೆ ಹೂಡಲಾಗಿದೆ.
4 ಘಂಟೆಗಳ ಕಾಲ UPI ಪೇಮೆಂಟ್ ಮಾಡಲು ಸಾಧ್ಯವಿಲ್ಲ
ಕೇಂದ್ರ ಸರ್ಕಾರ UPI ಪಾವತಿಗೆ ಕನಿಷ್ಠ ಸಮಯ ಮಿತಿಯನ್ನು ಅಳವಡಿಸಲು ನಿರ್ಧರಿಸಿದೆ. 2,000 ಕ್ಕೂ ಹೆಚ್ಚು ವಹಿವಾಟುಗಳು ಇದ್ದಾಗ, ಇಬ್ಬರು ಬಳಕೆದಾರರ ನಡುವಿನ ಮೊದಲ ವಹಿವಾಟು ಪೂರ್ಣಗೊಳ್ಳಲು 4-ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಮೊದಲ ಬಾರಿಗೆ 2,000 ರೂ. ಗಿಂತ ಹೆಚ್ಚಿನ ವರ್ಗಾವಣೆಯನ್ನು ಸ್ವೀಕರಿಸುವವರ ಖಾತೆಗೆ ತಕ್ಷಣವೇ ಕಳುಹಿಸಲಾಗುವುದಿಲ್ಲ. ಇದಕ್ಕಾಗಿ 4 ಗಂಟೆಗಳ ಕಾಲಾವಕಾಶ ನೀಡಲಾಗುವುದು. ಬಳಕೆದಾರರು ಆನ್ ಲೈನ್ ವಹಿವಾಟುಗಳಿಗಾಗಿ ಹೊಸ UPI ಖಾತೆಯನ್ನು ರಚಿಸಿದರೆ ಅವರು 24 ಗಂಟೆಗಳ ಒಳಗೆ ಗರಿಷ್ಠ 5,000 ರೂ. ವರೆಗೆ ಮೊದಲ ವಹಿವಾಟು ಮಾಡಬಹುದು.