keypad Mobiles: ಕೀ ಪ್ಯಾಡ್ ಮೊಬೈಲ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್, ಹೊಸ ಯೋಜನೆ ಆರಂಭ.

ಕೀ ಪ್ಯಾಡ್ ಮೊಬೈಲ್ ಬಳಸುವವರಿಗೆ ಇನ್ನೊಂದು ಹೊಸ ಸೇವೆ ಆರಂಭ ಮಾಡಲು ಮುಂದಾದ RBI

UPI Payment Using Feature Phone: ಈಗಿನ Digital ಯುಗದಲ್ಲಿ ಹಲವು ರೀತಿಯ ಹಣದ ವ್ಯವಹಾರಗಳ್ಳನ್ನು ಕಾಣುತ್ತೇವೆ. ಅದರಲ್ಲಿ UPI Payment ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಎಂದು ಗುರುತಿಸಲಾಗಿದೆ.

ಆ ಬಗ್ಗೆ ಸ್ಮಾರ್ಟ್ ಫೋನ್ ಇದ್ದವರಿಗೆ ಮಾತ್ರ UPI ಬಳಕೆ ಮಾಡಲು ಸಾಧ್ಯವಾಗಿರುತ್ತದೆ. ಆದರೆ ಈಗ ಕೀಪ್ಯಾಡ್ ಫೋನ್ ಇದ್ದವರು ಕೂಡ UPI ಪಾವತಿ ವಿಧಾನವನ್ನು ಅನುಸರಿಸಬಹುದಾಗಿದೆ ಎಂದು Reserve Bank Of India Governor ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಹೇಳಿದ್ದಾರೆ.

UPI Payment Using Feature Phone
Image Credit: Cashify

UPI ಬಗ್ಗೆ ಮಾತನಾಡಿದ RBI ಗವರ್ನರ್ ಶಕ್ತಿಕಾಂತ್ ದಾಸ್
UPI ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿ ವ್ಯವಹಾರದಲ್ಲೂ ಹಣ ಪಾವತಿಗಿಂತ UPI ಬಳಕೆದಾರರೆ ಹೆಚ್ಚು. ಆಗಸ್ಟ್ ತಿಂಗಳಲ್ಲಿ UPIನಲ್ಲಿ ತಿಂಗಳ ವಹಿವಾಟುಗಳ ಸಂಖ್ಯೆ 10 ಬಿಲಿಯನ್ ಮೀರಿದೆ ಎಂದು ಶುಕ್ರವಾರ ನಡೆದ ಕೇಂದ್ರ ಮಂಡಳಿ ಸಭೆಯಲ್ಲಿ ಗವರ್ನರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದು ಸರ್ಕಾರದ ಬೆಂಬಲದೊಂದಿಗೆ RBI UPI ಅನ್ನು ವಿಶ್ವದ ಅತಿದೊಡ್ಡ ಪಾವತಿ ವ್ಯವಸ್ಥೆಯನ್ನಾಗಿ ಮಾಡಲು ಸಾಧ್ಯವಾಗಿದೆ ಎಂದು ಆರ್ಬಿಐ ಗವರ್ನರ್ ಹೇಳಿದರು. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ UPI ನಲ್ಲಿ ದೊಡ್ಡ ಆವಿಷ್ಕಾರ ಜಾರಿಗೆ ತರುವುದರ ಬಗ್ಗೆ RBI ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

UPI ನಲ್ಲಿ ಹೊಸ ಆವಿಸ್ಕಾರಕ್ಕೆ ಮುಂದಾದ RBI
ದೇಶದಲ್ಲಿ ಹಣ ಈಗ ನೋಡ ಸಿಗುವುದು ಕಷ್ಟವಾಗಿದೆ ಏಕೆಂದರೆ ಪ್ರತಿಯೊಬ್ಬರು UPI  ಬಳಕೆದಾರರಾಗಿರುತ್ತಾರೆ. ಈ ನಿಟ್ಟಿನಲ್ಲಿ Digital Payments ಪ್ರೋತ್ಸಾಹಿಸಿದ್ದೇವೆ ಆದರೆ UPI ನಲ್ಲಿನ ಮುಖ್ಯ ಸವಾಲು ಎಂದರೆ ಅದಕ್ಕೆ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಬೇಕು, ಆದರೆ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಫೀಚರ್ ಫೋನ್ ಗಳನ್ನೂ ಬಳಸುತ್ತಿದ್ದಾರೆ. UPI ವ್ಯವಸ್ಥೆಯನ್ನು ನಿರ್ವಹಿಸಲು ಫೀಚರ್ ಫೋನ್ ಗಳನ್ನು ತಯಾರಿಸಲು ನಾವು ಕೆಲವು ಉತ್ಪನ್ನಗಳನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Join Nadunudi News WhatsApp Group

RBI implements new service for UPI users.
Image Credit: Businessinsider

ಕಳಪೆ ಸಂಪರ್ಕವಿರುವ ಪ್ರದೇಶಗಳಲ್ಲಿ ವ್ಯಾಲೆಟ್ ರೀತಿಯ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ, ಅದರ ಮೂಲಕ UPI ನಲ್ಲಿ ವಹಿವಾಟು ನಡೆಸಬಹುದು ಎಂದು ಅವರು ಹೇಳಿದರು. ಕೇವಲ UPI ಅಂದರೆ ಸುಲಭ ಎಂದು ಬಳಸುತ್ತೇವೆ, ಆದರೆ UPI ಬಳಕೆಯಲ್ಲಿ ಅಷ್ಟೇ ಜಾಗರೂಕತೆ ಕೊಡ ಮುಖ್ಯವಾಗಿರುತ್ತದೆ. ಒಮ್ಮೆ ಕೆಳೆದುಕೊಂಡ ಹಣ ಈಗಿನ ಕಾಲದಲ್ಲಿ ಮತ್ತೆ ಸಿಗುವುದು ಕಷ್ಟ ಹಾಗಾಗಿ ನಾವು ಹಣ ಪಾವತಿ ಕ್ರಮದಲ್ಲಿ ಜಾಗರೂಕರಾಗಿರಬೇಕು.

Join Nadunudi News WhatsApp Group