UPI Money Transfer: UPI ಮೂಲಕ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿದರೆ ಈ ಸುಲಭ ವಿಧಾನದಿಂದ ಮರಳಿ ಪಡೆದುಕೊಳ್ಳಿ.

UPI ಮೂಲಕ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿದರೆ ಮರಳಿ ಪಡೆಯುವ ಸುಲಭ ವಿಧಾನ.

UPI Payment: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದೆ. ಯುಪಿಐ (UPI Payment) ಮೂಲಕ ವಹಿವಾಟುಗಳು ಜನರಿಗೆ ಅಭ್ಯಾಸವಾಗಿದೆ. ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಅನೇಕ ರೀತಿಯಾ ಆನ್ಲೈನ್ ಪಾವತಿ ಪ್ಲಾಟ್ ಫಾರ್ಮ್ ಗಳು ಜನರಿಗೆ ಸಹಾಯವಾಗಲಿದೆ. ಇತ್ತೀಚಿಗೆ ಯುಪಿಐ ವಹಿವಾಟುಗಳು ತನ್ನ ಸೇವೆಯನ್ನು ವಿಸ್ತರಿಸಿದೆ.

UPI Money Transfer
Image Credit: dailypioneer

ಇನ್ನು ಯುಪಿಐ ನ ಮೂಲಕ ಅನೇಕ ರೀತಿಯಾ ಹಣಕಾಸಿನ ವಹಿವಾಟುಗಳು ನಡೆಯುತ್ತದೆ. ಹೆಚ್ಚಿನ ರೀತಿಯ ಹಣ ವರ್ಗಾವಣೆಯ ಪ್ರಕ್ರಿಯೆಗಳು ಯುಪಿಐ ನ ಮೂಲಕ ನಡೆಯುತ್ತದೆ. ಇನ್ನು ನೀವು ಯುಪಿಐ ಬಳಕೆದಾರರಾಗಿದ್ದರೆ , ನೀವು ಯಾರಿಗಾದರೂ ತಪ್ಪಾಗಿ ಹಣವನ್ನು ಪಾವತಿಸಿದ್ದರೆ ಅದನ್ನು ಮರಳಿ ಪಡೆಯುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

UPI ಮೂಲಕ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿದರೆ ಮರಳಿ ಪಡೆಯುವ ಸುಲಭ ವಿಧಾನ
*ನೀವು ಯಾವ ಯುಪಿಐ ಪ್ಲಾಟ್ ಫಾರ್ಮ್ ನಿಂದ ಹಣವನ್ನು ಪಾವತಿ ಮಾಡಿದ್ದೀರಿ ಆ ಪ್ಲಾಟ್ ಫಾರ್ಮ್ ಗ್ರಾಹಕ ಸೇವೆಗೆ ಕರೆ ಮಾಡಿ ಮತ್ತು ನೀವು ಮಾಡಿದ ಪಾವತಿಯ ವಿವರಗಳ ಬಗ್ಗೆ ಮಾಹಿತಿ ನೀಡಿ ದೂರನ್ನು ಸಲ್ಲಿಸಬೇಕು.
* ಹಣ ತಪ್ಪಾಗಿ ಪಾವತಿಸಿದ ಮೂರು ದಿನಗಳಲ್ಲಿ ದೂರನ್ನು ದಾಖಲಿಸಬೇಕು. ದೂರು ದಾಖಲಾದ 48 ಗಂಟೆಗಳವಳಗೆ ಹಣವನ್ನು ಹಿಂದಿರುಗಿಸಲಾಗುತ್ತದೆ.

Easy way to recover money transferred to wrong person through UPI
Image Credit: instanews

*ಅಥವಾ bankingombudsman.rbi.org.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ದೂರನ್ನು ದಾಖಲಿಸಬಹುದು.
*ಪಾವತಿ ಮಾಡಿದ ಸಂದೇಶಗಳನ್ನು ಡಿಲೀಟ್ ಮಾಡಬಾರದು, ಏಕೆಂದರೆ ದೂರನ್ನು ನೀಡುವಾಗ PPBL ಸಂಖ್ಯೆ ಮುಖ್ಯವಾಗಿರುತ್ತದೆ. ದೂರು ನೀಡಿದ ನಂತರ ತಪ್ಪಾದ ಮಾಹಿತಿಯ ವಿವರಗಳ ಗೊತೆಗೆ PPBL ಸಂಖ್ಯೆಯನ್ನು ನೀಡಬೇಕು.
*ಇನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವೆಬ್ ಸೈಟ್ ನ ಮೂಲಕ ಕೂಡ ತಪ್ಪಾದ ಪಾವತಿಯ ಬಗ್ಗೆ ದೂರನ್ನು ಧಾಖಲಿಸಬಹುದು.

Join Nadunudi News WhatsApp Group

Join Nadunudi News WhatsApp Group