UPI Plugin: ಇನ್ನುಮುಂದೆ ಈ ಪೇಮೆಂಟ್ ಗಳಿಗೆ ಬೇಕಾಗಿಲ್ಲ ಗೂಗಲ್ ಪೆ ಮತ್ತು ಫೋನ್ ಪೆ, ಬಂತು ಹೊಸ UPI ಪ್ಲಗ್ಗಿನ್.

ಗ್ರಾಹಕರಿಗಾಗಿ ಮತ್ತೊಂದು ಉಪಯುಕ್ತ ಸೌಲಭ್ಯವನ್ನು ನೀಡಲು ಮುಂದಾದ ಯುಪಿಐ.

UPI Plugin Service Update: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪಾವತಿಯ (Online Payment) ವಹಿವಾಟು ಹೆಚ್ಚುತ್ತಿದೆ. ಗೂಗಲ್ ಪೇ, ಫೋನ್ ಪೇ, ಪೆಟಿಎಂ ಸೇರಿದಂತೆ ಇನ್ನಿತರ ಆನ್ಲೈನ್ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳು ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಈ ಆನ್ಲೈನ್ ಪಾವತಿಯ ಬಳಕೆಯ ಕಾರಣ ಗ್ರಾಹಕರು ಸಣ್ಣ ಪುಟ್ಟ ವಿಚಾರಗಳಿಗೆ ಬ್ಯಾಂಕ್ ಗಳಿಗೆ ಭೇಟಿ ನೀಡುವುದು ಕಡಿಮೆಯಾಗಿದೆ.

ನಗದು ರಹಿತ ವಹಿವಾಟುಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ ಆನ್ಲೈನ್ ಮೂಲಕ ಪಾವತಿ ಹೆಚ್ಚಾಗಿದೆ. ಆನ್ಲೈನ್ ಪಾವತಿ ಬಂದಾಗಿನಿಂದ ಜನರು ಹೆಚ್ಚಾಗಿ ಕೈಯಲ್ಲಿ ಹಣವನ್ನು ಇಟ್ಟುಕೊಳ್ಳುತ್ತಿಲ್ಲ. ಎಲ್ಲ ರೀತಿಯ ಹಣಕಾಸಿನ ವಹಿವಾಟನ್ನು ಯುಪಿಐ (UPI) ಮೂಲಕವೇ ಪಾವತಿಸುತ್ತಿದ್ದಾರೆ.

New facility for UPI payers
Image Credit: Indiatimes

ಯುಪಿಐ ಪಾವತಿದಾರರಿಗೆ ಹೊಸ ಸೌಲಭ್ಯ
ಇನ್ನು ಯುಪಿಐ ಕೂಡ ದಿನದಿಂದ ದಿನಕ್ಕೆ ತನ್ನ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿದೆ. ಹೊಸ ಹೊಸ ಸೌಲಭ್ಯವನ್ನು ನೀಡುವ ಮೂಲಕ ಜನರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ. ಇದರಿಂದಾಗಿ ಯುಪಿಐ ಬಳಕೆ ದೇಶದಲ್ಲಿ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಯುಪಿಐನಿಂದಾಗಿ ಚಿಲ್ಲರೆ ಪಡೆಯಲು ಜಗಳ ಮಾಡಬೇಕಾಗಿಲ್ಲ. ಯುಪಿಐ ಚಿಲ್ಲೆರೆಯ ಸಲುವಾಗಿ ಉಂಟಾಗುವ ಜಗಳವನ್ನು ತಪ್ಪಿಸಿದೆ. ಇದೀಗ ಯುಪಿಐ ಗ್ರಾಹಕರಿಗಾಗಿ ಮತ್ತೊಂದು ಉಪಯುಕ್ತ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಯುಪಿಐನಲ್ಲಿ ಹೊಸ ಆವಿಷ್ಕಾರ
ಇದೀಗ ಯುಪಿಐ ಬಳಕೆದಾರರಿಗಾಗಿ ಇನ್ನೊಂದು ಹೊಸ ಸೇವೆ ಲಭ್ಯವಾಗಲಿದೆ. ನೀವು ಯುಪಿಐ ಬಳಕೆದಾರರಾಗಿದ್ದರೆ ಈ ಸೇವೆಯ ಉಪಯೋಗ ಪಡೆಯಬಹುದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI ) ಸಂಸ್ಥೆ ಯುಪಿಐನಲ್ಲಿ ಹೊಸ ಸೌಲಭ್ಯ ನೀಡಲು ಮುಂದಾಗಿದೆ.

ಸ್ವೀಗ್ಗಿ, ಜೊಮೆಟೋ, ಮಿಂತ್ರಾ, ಮೀಶೂ, ಫ್ಲಿಪ್ ಕಾರ್ಟ್, ಅಮೆಜಾನ್ ಸೇರಿದಂತೆ ಇನ್ನಿತರ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಗಳಿಗೆ ಪೇಮೆಂಟ್ ಮಾಡಲು ಸಹಾಯವಾಗಲು ಯುಪಿಐ ಪ್ಲಗ್ಗಿನ್ ಸೌಲಭ್ಯವನ್ನು ನೀಡಲು ಮುಂದಾಗಿದೆ.

Join Nadunudi News WhatsApp Group

UPI Plugin Service Update
Image Credit: Cleartax

ಮರ್ಚೆಂಟ್ ಸಾಫ್ಟ್ ವೆರ್ ಡೆವಲಪ್ಮೆಂಟ್ ಕಿಟ್ ಅಥವಾ ಯುಪಿಐ ಪ್ಲಗ್ಗಿನ್
ಇ- ಕಾಮರ್ಸ್ ಕಂಪನಿಗಳಿಗೆ ಪೇಮೆಂಟ್ ಆಪ್ ಮೂಲಕ ಹಣವನ್ನು ಕಳುಹಿಸುವ ಬದಲಾಗಿ ನೇರವಾದ ಹಣಪಾವತಿಗೆ ಅವಕಾಶ ನೀಡಲು ಈ ಮರ್ಚೆಂಟ್ ಸಾಫ್ಟ್ ವೆರ್ ಡೆವಲಪ್ಮೆಂಟ್ ಕಿಟ್ ಅಥವಾ ಯುಪಿಐ ಪ್ಲಗ್ಗಿನ್ ಸಹಾಯವಾಗಲಿದೆ. ಈ ಹೊಸ ಸೌಲಭ್ಯವು ಇ- ಕಾಮರ್ಸ್ ಕಂಪನಿಗಳಿಗೆ ತಮ್ಮದೇ ಪ್ರತ್ಯೇಕ ವರ್ಚುವಲ್ ಪೇಮೆಂಟ್ ವಿಳಾಸ (virtual Payment Address) ನೀಡಲಿದೆ. ಇದನ್ನು ಬಳಸಿ ಆಯಾ ಇ ಕಾಮರ್ಸ್ ಫ್ಲಾಟ್ ಫಾರ್ಮ್ ನಿಂದ ಪೇಮೆಂಟ್ ಪಡೆದುಕೊಳ್ಳಬಹುದು.

Join Nadunudi News WhatsApp Group