UPI Rule: ಇಂದಿನಿಂದ UPI ಬಳಸುವವರಿಗೆ 5 ಹೊಸ ರೂಲ್ಸ್, 2024 ರ ಆರಂಭದಲ್ಲೇ ಬದಲಾಗಿದೆ UPI ನಿಯಮ
2024 ರ ಆರಂಭದಲ್ಲೇ ಮತ್ತೆ UPI ನಿಯಮದಲ್ಲಿ ಬದಲಾವಣೆ
UPI Rule Change From January 2024: ದೇಶದಾದ್ಯಂತ UPI ಬಳಕೆದಾರರ ಸಂಖ್ಯೆ ದಿನದಿನ ದಿನಕ್ಕೆ ಹೆಚ್ಚುತ್ತಿದೆ. UPI ಪಾವತಿದಾರರು UPI ಪಾವತಿಯಲ್ಲಿ ಹೊಸ ಹೊಸ ಅಪ್ಡೇಟ್ ಅನ್ನು ಪಡೆಯುತ್ತಿದ್ದಾರೆ. ಎಲ್ಲೆಡೆ UPI ಪಾವತಿ ಆವರಿಸಿಕೊಂಡಿದೆ. ಜನರು ದೊಡ್ಡ ಮೊತ್ತದ ವಹಿವಾಟಿನಿಂದ ಹಿಡಿದು 1 ರೂ. ವಹಿವಾಟನ್ನು ಕೂಡ UPI ಮೂಲಕ ಪಾವತಿಸುತ್ತಿದ್ದಾರೆ.
2024 ರ ಆರಂಭದಲ್ಲೇ ಬದಲಾಗಿದೆ UPI ನಿಯಮ
ಸದ್ಯ ಹೊಸ ವರ್ಷ ಆರಂಭವಾಗಿದ್ದು, ಈ ಹೊಸ ವರ್ಷದಲ್ಲಿ UPI ನಿಯಮದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. UPI ಬಳಕೆದಾರರು ಹೊಸ ವರ್ಷದಿಂದ UPI ವಹಿವಾಟಿನಲ್ಲಿ ಈ ಐದು ರೀತಿಯ ಬದಲಾವಣೆಯನ್ನು ಕಾಣಲಿದ್ದಾರೆ. ಇನ್ನುಮುಂದೆ UPI ವಹಿವಾಟು ಒಂದಿಷ್ಟು ಬದಲಾಗಲಿದೆ. UPI ಬಳಕೆದಾರರ ಜನವರಿಯಿಂದ ಬದಲಾಗಿರುವ UPI ನಿಯಮಗಳ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಓದುವುದು ಉತ್ತಮ.
ಇಂದಿನಿಂದ UPI ಬಳಸುವವರಿಗೆ 5 ಹೊಸ ರೂಲ್ಸ್
1. ವಹಿವಾಟಿನ ಮಿತಿ ಹೆಚ್ಚಳ
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಪಾವತಿ ಮಿತಿಯನ್ನು ಯುಪಿಐ ಹೆಚ್ಚಿಸಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಬಂಧಿತ ಪಾವತಿಗಳ ವಹಿವಾಟಿನ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
2. ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಸೌಲಭ್ಯ
UPI ಬಳಕೆದಾರರು ಈಗ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅಂದರೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಪಾವತಿಸಲು ಸಾಧ್ಯವಾಗುತ್ತದೆ. ಪೂರ್ವ-ಅನುಮೋದಿತ ಸಾಲವು ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಸಾಲದ ಲಭ್ಯತೆಯನ್ನು ನೀಡುತ್ತದೆ.
3. ಸೆಕೆಂಡರಿ ಮಾರ್ಕೆಟ್ ಗಾಗಿ UPI
ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ‘UPI ಫಾರ್ ಸೆಕೆಂಡರಿ ಮಾರ್ಕೆಟ್’ ಅನ್ನು ಪರಿಚಯಿಸಿದೆ. ಇದು ಬಿಟ ಹಂತದಲ್ಲಿದೆ. ಸೀಮಿತ ಗ್ರಾಹಕರಿಗೆ ವ್ಯಾಪಾರ ದೃಢೀಕರಣದ ನಂತರ ಹಣವನ್ನು ನಿರ್ಬಂಧಿಸಲು ಮತ್ತು ಕ್ಲಿಯರಿಂಗ್ ಕಾರ್ಪೊರೇಷನ್ ಗಳ ಮೂಲಕ T1 ಆಧಾರದ ಮೇಲೆ ಪಾವತಿಗಳನ್ನು ಹೊಂದಿಸಲು ಅವಕಾಶ ನೀಡುತ್ತದೆ.
4. ಡೆಬಿಟ್ ಕಾರ್ಡ್ ಇಲ್ಲದೆಯೇ ಹಣ ಹಿಂಪಡೆಯುವಿಕೆ
ಮುಂದಿನ ದಿನಗಳಲ್ಲಿ UPI ಬಳಕೆದಾರರು Debit Card ಇಲ್ಲದೆಯೂ ಹಣವನ್ನು ಹಿಂಪಡೆಯಬಹುದು. ಇದಕ್ಕಾಗಿ ATM ನಲ್ಲಿ QR Code Scanner ಅನ್ನು ಇಡಲಾಗುತ್ತದೆ. ಡಿಸ್ಪ್ಲೇಯಲ್ಲಿ ತೋರಿಸಲಾದ QR Code ಅನ್ನು ಸ್ಕಾನ್ ಮಾಡುವ ಮೂಲಕ ಡೆಬಿಟ್ ಕಾರ್ಡ್ ಇಲ್ಲದೆಯೇ ಹಣವನ್ನು ಹಿಂಪಡೆಯಬಹುದು.
5. UPI ಪಾವತಿಗೆ ಕನಿಷ್ಠ ಸಮಯ ಮಿತಿ
ಕೇಂದ್ರ ಸರ್ಕಾರ UPI ಪಾವತಿಗೆ ಕನಿಷ್ಠ ಸಮಯ ಮಿತಿಯನ್ನು ಅಳವಡಿಸಲು ನಿರ್ಧರಿಸಿದೆ. 2,000 ಕ್ಕೂ ಹೆಚ್ಚು ವಹಿವಾಟುಗಳು ಇದ್ದಾಗ, ಇಬ್ಬರು ಬಳಕೆದಾರರ ನಡುವಿನ ಮೊದಲ ವಹಿವಾಟು ಪೂರ್ಣಗೊಳ್ಳಲು 4-ಗಂಟೆಗಳನ್ನು ತೆಗೆದುಕೊಳ್ಳುತ್ತದೆ.