UPI Scanner For Bus Ticket: ಇನ್ಮುಂದೆ ಪುರುಷರು ಕೂಡ ಹಣ ಕೊಡುವ ಅಗತ್ಯ ಇಲ್ಲ, KSRTC ಯಿಂದ ಅಧಿಕೃತ ಘೋಷಣೆ.

ಇನ್ಮುಂದೆ ಪುರುಷರು ಕೂಡ ಹಣ ಕೊಡುವ ಅಗತ್ಯ ಇಲ್ಲ

UPI Scanner In KSRTC Bus: ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಯಾಗುತ್ತಿದೆ. ರಾಜ್ಯದ ಜನತೆ ಕರ್ನಾಟಕ ಸರ್ಕಾರ ನೀಡುತ್ತಿರುವ ಎಲ್ಲ ರೀತಿಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇನ್ನು ಬಸ್ ಪ್ರಯಾಣದಲ್ಲಿ ತೊಂದರೆ ಆಗದಿರಲು ಸರ್ಕಾರ ಹೆಚ್ಚಿನ ನಿಗಾ ವಹಿಸುತ್ತಿದೆ. ಸದ್ಯ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಜಾರಿಯಲ್ಲಿರುವ ಕಾರಣ ಹೆಚ್ಚಿನ ಜನರು ಬಸ್ಸುಗಳಲ್ಲಿಯೇ ಪ್ರಯಾಣ ಮಾಡುತ್ತಿರುವುದನ್ನ ನಾವು ನೋಡಬಹುದಾಗಿದೆ.

ಮೊದಲೆಲ್ಲ ಬಸ್ ಗಳಲ್ಲಿ ಚಿಲ್ಲರೆಗಾಗಿ ಬಾರಿ ಜಗಳಗಳು ಉಂಟಾಗುತ್ತಿದ್ದವು. ಇನ್ನು ಉಚಿತ ಪ್ರಯಾಣ ಜಾರಿಗೆ ಬಂದಾಗಿನಿಂದ ಮಹಿಳೆಯರು ಯಾವುದೇ ಹಣವನ್ನು ನೀಡದೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಪುರುಷ ಪ್ರಯಾಣಿಕರು ಬಸ್ ಗಳಲ್ಲಿ ಪ್ರಯಾಣಿಸುವ ಹಣವನ್ನು ನೀಡಬೇಕಾಗಿದೆ. ಪುರುಷರಿಗೆ ಉಚಿತ ಬಸ್ ಪ್ರಯಾಣದ ಅನುಕೂಲ ಇರಲ್ಲಿಲ. ಆದರೆ ಇನ್ನುಮುಂದೆ ಪುರುಷರು ಕೊಡ ಹಣವನ್ನು ನೀಡದೆ ಬಸ್ ನಲ್ಲಿ ಪ್ರಯಾಣ ಮಾಡಬಹುದು. ಅದು ಹೇಗೆ ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Online Payment In KSRTC Bus
Image Credit: Vijayatimes

ಇನ್ಮುಂದೆ ಪುರುಷರು ಕೂಡ ಹಣ ಕೊಡುವ ಅಗತ್ಯ ಇಲ್ಲ
ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿಯಲ್ಲಿರುವ ಕಾರಣ ಟಿಕೆಟ್ ಪಡೆಯುವಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಪುರುಷರು ಇಂದಿಗೂ ಕೂಡ ಬಸ್ ನಲ್ಲಿ ಚಿಲ್ಲರೆಗಾಗಿ ಕಂಡಕ್ಟರ್ ಜೊತೆ ಜಗಳವಾಡುವುದನ್ನ ನಾವು ಹಲವು ಬಾರಿ ನೋಡಿದ್ದೇವೆ. ಇದೀಗ ಕರ್ನಾಟಕ ಸರ್ಕಾರ ಬಸ್ ಪ್ರಯಾಣದಲ್ಲಿ ಚಿಲ್ಲರೆಗಾಗಿ ಉಂಟಾಗುವ ಸಮಸ್ಯೆಗೆ ಹೊಸ ರೀತಿಯಾ ಪರಿಹಾರವನ್ನು ಕಂಡು ಹಿಡಿದಿದೆ. ಕರ್ನಾಟಕ ಸರ್ಕಾರದ ಈ ಹೊಸ ಸೌಲಭ್ಯದಿಂದ ಜನರು ಹೆಚ್ಚಿನ ಅನುಕೂಲವನ್ನು ಪಡೆಯಬಹುದಾಗಿದೆ. ಇನ್ನುಮುಂದೆ ಬಸ್ ನಲ್ಲಿ ಪ್ರಯಾಣಿಸುವಾಗಲು ನಗದನ್ನು ಕೈಯಲ್ಲಿ ಇಟ್ಟುಕೊಳ್ಳುವ ಅನಿವಾರ್ಯತೆ ಇರುವುದಿಲ್ಲ.

UPI Scanner In KSRTC Bus
Image Credit: Keralakaumudi

KSRTC ಯಿಂದ ಅಧಿಕೃತ ಘೋಷಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಬಸ್ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಸೇವೆಯನ್ನು ನೀಡಲು ನಿರ್ಧರಿಸಿದೆ. ಸಾರಿಗೆ ಇಲಾಖೆ ಬಸ್ ಗಳಲ್ಲಿ UPI Scanner Code ಗಳನ್ನೂ ನೀಡುತ್ತಿದೆ. ಈ UPI ಸ್ಕ್ಯಾನ್ ಕೋಡ್ ನ ಮೂಲಕ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಅನ್ನು ಪಡೆದುಕೊಳ್ಳಬಹುದು. ಟಿಕೆಟ್ ನ ಹಣ ರೌಂಡ್ ಫಿಗರ್ ಆಗಿಲ್ಲದಿದ್ದಾಗ ಹೆಚ್ಚಾಗಿ ಚಿಲ್ಲರೆಗಾಗಿ ಹೊಡೆದಾದ ಬೇಕಾಗುತ್ತದೆ. ಕಂಡಕ್ಟರ್ ಹೆಚ್ಚಾಗಿ ಚಿಲ್ಲರೆಯನ್ನು ಕೇಳುತ್ತಾರೆ. ಹೀಗಿರುವ ಸಾರಿಗೆ ಇಲಾಖೆ UPI ಸ್ಕ್ಯಾನರ್ ಅನ್ನು ನೀಡಿ ಚಿಲ್ಲರೆಯಿಂದಾಗಿ ಉಂಟಾಗುವ ಜಗಳಕ್ಕೆ ಮುಕ್ತಿ ಹಾಡಲಿದೆ.

ಪ್ರಯಾಣಿಕರು UPI ಸ್ಕ್ಯಾನರ್ ಅನ್ನು ಬಳಸಿ ಟಿಕೆಟ್ ಅನ್ನು ಪಡೆದು ಹಣವನ್ನು ಆನ್ಲೈನ್ ಮೂಲಕ ಪಾವತಿಸಬಹುದು. ಗೂಗಲ್ ಪೆ, ಫೋನ್ ಪೆ, ಪೆಟಿಎಂ ಸೇರಿದಂತೆ ಇನ್ನಿತರ ಯಾವುದೇ UPI ಅಪ್ಲಿಕೇಶನ್ ನ ಮೂಲಕ ನೀವು ಸುಲಭವಾಗಿ ಟಿಕೆಟ್ ಪಡೆಯಬಹುದು. ಖಾಸಗಿ ಕಂಪನಿಯಿಂದ ತಿಂಗಳಿಗೆ 645 ರೂ ಬಾಡಿಗೆ ದರದಲ್ಲಿ 10245 ಸಾವಿರ ಇಟಿಎಂ ಟಿಕೆಟ್ ಯಂತ್ರಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದ್ದು, ಪ್ರಯಾಣಿಕರು ಆದಷ್ಟು ಬೇಗ ಈ ಸೌಲಭ್ಯವನ್ನು ಪಡೆಯಬಹುದು.

Join Nadunudi News WhatsApp Group

UPI Online Payment In KSRTC Bus
Image Credit: Myfinpoint

Join Nadunudi News WhatsApp Group