Ticket Booking: ರೈಲು ಪ್ರಯಾಣಿಕರಿಗೆ ಹೊಸ ಸೇವೆ ಆರಂಭ, ಜನರಲ್ ಟಿಕೆಟ್ ನಿಯಮದಲ್ಲಿ ದೊಡ್ಡ ಬದಲಾವಣೆ.
ಈ ಸುಲಭ ವಿಧಾನದ ಮೂಲಕ ಮನೆಯಲ್ಲಿಯೇ ಕುಳಿತು ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.
UTS App For Online Ticket Booking: ಸಾಮಾನ್ಯವಾಗಿ ಹೆಚ್ಚಿನ ಜನರು ರೈಲು ಪ್ರಯಾಣಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ರೈಲುಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣಕ್ಕಾಗಿ ರೈಲು ಪ್ರಯಾಣ ಉತ್ತಮ ಆಯ್ಕೆ ಎನ್ನಬಹುದು. ಸಾಧ್ಯ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯವನ್ನು ಒದಗಿಸುತ್ತದೆ.ಮುಖ್ಯವಾಗಿ ರೈಲ್ವೆ ಪ್ರಯಾಣ ಮಾಡಲು ಪ್ರಯಾಣಿಕರಿಗೆ Railway Ticket ಮುಖ್ಯ.
ಹೀಗಾಗಿ ಪ್ರಯಾಣಿಕರಿಗೆ ಟಿಕೆಟ್ ಅನ್ನು ಪಡೆಯುವುದು ಒಂದು ರೀತಿಯ ತಲೆನೋವು ಎನ್ನಬಹುದು. ಏಕೆಂದ್ರೆ ಪ್ರತಿನಿತ್ಯ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುವುದರಿಂದ ಎಲ್ಲರು ಟಿಕೆಟ್ ಪಡೆಯಬೇಕಿರುವ ಕಾರಣ ಟಿಕೆಟ್ ಕೌಂಟರ್ ನಲ್ಲಿ ಜನ ಸಂದಣಿ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಹೀಗಾಗಿ ಸದ್ಯ ರೈಲ್ವೆ ಇಲಾಖೆ ಜನರ ಈ ತಲೆನೋವನ್ನು ನಿವಾರಿಸಲು ಹೊಸ ಸೌಲಭ್ಯವನ್ನು ಕಂಡು ಹಿಡಿದಿದೆ. ಇನ್ನುಮುಂದೆ ನೀವು ಸುಲಭವಾಗಿ ಜನರಲ್ ಟಿಕೆಟ್ ಅನ್ನು ಪಡೆಯಬಹುದು.
ರೈಲು ಪ್ರಯಾಣಿಕರಿಗೆ ಹೊಸ ಸೇವೆ ಆರಂಭ
ರೈಲು ಪ್ರಯಾಣಿಕರಿಗೆ ಸಹಾಯವಾಗಲು ರೈಲ್ವೆ ಇಲಾಖೆ UTS Mobile Application ಅನ್ನು ಪರಿಚಯಿಸಲು ನಿರ್ಧರಿಸಿದೆ. ರೈಲು ಪ್ರಯಾಣಿಕರು UTS Mobile Application ನ ಮೂಲಕ ಸುಲಭವಾಗಿ ಮನೆಯಲ್ಲಿಯೇ ಕುಳಿತು ನಿಮ್ಮ Ticket ಅನ್ನು Book ಮಾಡಿಕೊಳ್ಳಬಹುದು. QR Code Scan ಮಾಡುವ ಮೂಲಕ ಕ್ಷಣಾರ್ಧದಲ್ಲಿ Ticket ಅನ್ನು ಪಡೆಯಬಹುದು.
ರೈಲ್ವೆ ನಿಲ್ದಾಣದಲ್ಲಿರುವ QR Code ಅನ್ನು UTS Mobile Application ನ ಮೂಲಕ Scan ಮಾಡಿ, ಸಾಮಾನ್ಯ ಟಿಕೆಟ್, ಫ್ಲಾಟ್ ಫಾರ್ಮ್ ಟಿಕೆಟ್, ಸೀಸನ್ ಟಿಕೆಟ್ ಗಳನ್ನು ಪಡೆದುಕೊಳ್ಳಬಹುದು. ಇನ್ನು ಈ App ನ ವಿಶೇಷವೆಂದರೆ ನೀವು ಸ್ಕ್ಯಾನ್ ಮಾಡಲು ಇಂಟರ್ನೆಟ್ ನ ಅವಶ್ಯಕತೆ ಇರುವುದಿಲ್ಲ. ಹಾಗೆಯೆ UTS Mobile Application ನ ಮೂಲಕ Reserve Ticket ಪಡೆಯಲು ಸಾಧ್ಯವಾಗುವುದಿಲ್ಲ.
ಈ ರೀತಿಯಾಗಿ ನಿಮ್ಮ ಟಿಕೆಟ್ ಬುಕ್ ಮಾಡಿಕೊಳ್ಳಿ
*ಮೊದಲನೆಯದಾಗಿ ನೀವು Google Pay store ಗೆ ಹೋಗಿ UTS Application ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
*ಡೌನ್ಲೋಡ್ ಆದ ಬಳಿಕ ನಿಮಗೆ ಒಂದು OTP ಬರುತ್ತದೆ ಈ OTP ಸಹಾಯದಿಂದ ನೀವು ಆಪ್ ಗೆ ನೊಂದಾಯಿಸಿಕೊಳ್ಳಿ.
*UTS ಅಪ್ಲಿಕೇಶನ್ ನಲ್ಲಿ ನೋಂದಾಯಿಸಿದ ನಂತರ, ಲಾಗಿನ್ ಮಾಡಿ ಮತ್ತು ಪ್ಲಾಟ್ ಫಾರ್ಮ್ ಟಿಕೆಟ್, ಮಾಸಿಕ ಟಿಕೆಟ್ ಮತ್ತು ಕಾಯ್ದಿರಿಸದ ಪ್ರಯಾಣದ ಟಿಕೆಟ್ ಅನ್ನು ಅಪ್ಲಿಕೇಶನ್ ಮೂಲಕ ಬುಕ್ ಮಾಡಿ.
*ನಿಲ್ದಾಣದ ಆವರಣದಿಂದ ನೂರು ಮೀಟರ್ ದೂರದಲ್ಲಿ ಟಿಕೆಟ್ ಮಾಡಿ.
*ಟಿಕೆಟ್ ಮಾಡುವಲ್ಲಿ ನಿಮಗೆ ಯಾವುದೇ ಸಮಸ್ಯೆ ಇದ್ದರೆ, ಅಪ್ಲಿಕೇಶನ್ ನಲ್ಲಿ ನೀಡಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.