ಕರೋನ ಲಸಿಕೆ ಹಾಕಿಸಿಕೊಂಡರೆ ಟಿವಿ, ಫ್ರಿಡ್ಜ್ ಮತ್ತು ವಾಷಿಂಗ್ ಮಷೀನ್ ಉಚಿತ, ಜನರಿಗೆ ಬಂಪರ್ ಆಫರ್, ಮಾಹಿತಿ ಪೂರ್ತಿ ಓದಿ.
ಪ್ರಸ್ತುತ ದಿನಗಳಲ್ಲಿ ಜನರು ಕರೋನ ಸೋಂಕಿನ ಬಗ್ಗೆ ಅಷ್ಟೇನು ಲಕ್ಷ್ಯ ಕೊಡುತ್ತಿಲ್ಲ ಎಂದು ಹೇಳಬಹುದು. ಹೌದು ಕರೋನ ಸೋಂಕು ದೇಶದಲ್ಲಿ ಕಡಿಮೆಯಾಗಿದ್ದು ಜನರು ಕರೋನ ಮಾರ್ಗಸೂಚಿಯನ್ನ ಪಾಲನೆ ಮಾಡದೆ ತಮ್ಮ ಪಾಡಿಗೆ ತಾವು ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕರೋನ ಮಹಾಮಾರಿಗೆ ಬಹಳ ವೇಗವಾಗಿ ಲಸಿಕೆಯನ್ನ ನೀಡಲಾಗತ್ತಿದ್ದು ನೂರು ಕೋಟಿಗೂ ಅಧಿಕ ಜನರು ಕರೋನ ಲಸಿಕೆಯನ್ನ ಲಸಿಕೆಯನ್ನ ಪಡೆದುಕೊಂಡಿದ್ದಾರೆ. ಇನ್ನು ದೇಶದಲ್ಲಿ ಇನ್ನೇನು ಕೋಟ್ಯಾಂತರ ಜನರು ಕರೋನ ಲಸಿಕೆಯ ಪ್ರಥಮ ಡೋಸ್ ಮತ್ತು ಎರಡನೆಯ ಡೋಸ್ ಪಡೆದುಕೊಳ್ಳುವುದು ಬಾಕಿ ಇದ್ದು ಜನರು ಅದೆಷ್ಟೋ ಜನರು ಕರೋನ ಲಸಿಕೆ ಪಡೆದುಕೊಳ್ಳುವುದು ಎಂದು ಹೇಳುತ್ತಿರುವುದನ್ನ ಕೂಡ ನಾವು ನೀವು ನೋಡಬಹುದಾಗಿದೆ.
ಇನ್ನು ಇದರ ನಡುವೆ ಈಗ ಕರೋನ ಲಸಿಕೆಯನ್ನ ಪಡೆದುಕೊಳ್ಳದೇ ಇರುವವರಿಗೆ ದೊಡ್ಡ ಆಫರ್ ಬಂದಿದ್ದು ಕರೋನ ಲಸಿಕೆ ಪಡೆದುಕೊಂಡವರಿಗೆ ಲಸಿಕೆ ಪಡೆದ ವ್ಯಕ್ತಿಗೆ ವಾಷಿಂಗ್ ಮಷೀನ್, ಟಿವಿ ಮತ್ತು ಫ್ರಿಡ್ಜ್ ಗಳನ್ನ ಬಹುಮಾನದ ರೂಪದಲ್ಲಿ ನೀಡಲಾಗುತ್ತಿದೆ. ಹಾಗಾದರೆ ಈ ಆಫರ್ ಪಡೆದುಕೊಳ್ಳುವುದು ಹೇಗೆ ಮತ್ತು ಏನಿದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಯ್ಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಕೋವಿಡ್ ಲಸಿಕೆ ಪಡದುಕೊಳ್ಳುವಂತೆ ಜನರನ್ನು ಉತ್ತೇಜಿಸಲು ಮಹಾರಾಷ್ಟ್ರದ ಚಂದ್ರಾಪುರ ನಗರಸಭೆ ಲಕ್ಕಿ ಡ್ರಾ ಬಹುಮಾನವನ್ನು ಘೋಷಿಸಿದೆ.
ಕರೋನ ಲಸಿಕೆ ಪಡೆದುಕೊಳ್ಳುವವರಿಗೆ ಎಲ್‍ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಶೀನ್ ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಿದೆ. ಇನ್ನು ನವೆಂಬರ್ 12 ರಿಂದ 24 ರ ವರೆಗೆ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುವವರು ಈ ಉಡುಗೊರೆ ಪಡೆಯಬಹುದಾದಿದೆ. ಮೇಲೆ ಹೇಳಿರುವ ಅವಧಿಯಲ್ಲಿ ಲಸಿಕೆಯನ್ನ ಪಡೆದುಕೊಳ್ಳುವವರು ಈ ಲಕ್ಕಿ ಡ್ರಾ ನಲ್ಲಿ ಭಾಗವಹಿಸಬಹುದಾಗಿದೆ.
ಇನ್ನು ವಿನ್ ಆದವರಿಗೆ ಮೊದಲ ಬಹುಮಾನವಾಗಿ ರೆಫ್ರಿಜರೇಟರ್, 2ನೇ ಬಹುಮಾನವಾಗಿ ವಾಷಿಂಗ್ ಮಶೀನ್ ಮತ್ತು ಮೂರನೇ ಬಹುಮಾನವಾಗಿ ಎಲ್‍ಇಡಿ ಟಿವಿಗಳನ್ನು ಗೆಲ್ಲಬಹುದು. ಇನ್ನು ಇದ್ರ ಜೊತೆಗೆ ಸಮಾಧಾನಕರ ಬಹುಮಾನಗಳು ಇದ್ದು ಹತ್ತು ಜನರಿಗೆ ಮಿಕ್ಸರ್ ಮತ್ತು ಗ್ರೈಂಡರ್ ನೀಡಲಾಗುವುದು ಎಂದು ಹೇಳಲಾಗಿದೆ. ಚಂದ್ರಾಪುರದಲ್ಲಿ 1.93ಲಕ್ಷ ಜನ ಮೊದಲ ಡೋಸ್ ಮತ್ತು 99000 ಜನ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನು ಈ ಆಫರ್ ಘೋಷಣೆ ಆದನಂತರ ಅದೆಷ್ಟೋ ಜನರು ಕರೋನ ಲಸಿಕೆಯನ್ನ ಪಡೆದುಕೊಳ್ಳಲು ಬರುತ್ತಿದ್ದು ಲಸಿಕೆಯನ್ನ ಪಡೆದುಕೊಳ್ಳುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ ಎಂದು ತಿಳಿದು ಬಂದಿದೆ. ಸ್ನೇಹಿತರೆ ಈ ಆಫರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.