Varaha Roopam Song Controversy: ಸುಪ್ರೀಂ ಕೋರ್ಟ್ ಮೆಟ್ಟಿಲಲ್ಲಿ ಗೆದ್ದ ಕಾಂತಾರ, ರಿಷಬ್ ಶೆಟ್ಟಿಗೆ ಇನ್ನೊಂದು ಗೆಲುವು.

Supreme Court Verdict On Kantara Varaha Roopam Song: ರಿಷಬ್ ಶೆಟ್ಟಿ (Rishabh Shetty) ಅವರ ಕಾಂತಾರ (Kantara) ದೇಶದೆಲ್ಲೆಡೆ ಸಾಕಷ್ಟು ಸದ್ದು ಮಾಡಿದೆ. ಕಾಂತಾರ ಚಿತ್ರ ಯಶಸ್ಸು ಕಂಡ ಬೆನ್ನಲೇ ಒಂದಿಷ್ಟು ವಿವಾದಗಳಿಗೆ ಸಿಲುಕಿತ್ತು.

ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಚಿತ್ರದಿಂದ ತೆಗೆದು ಹಾಕುವಂತೆ ಆದೇಶಿಸಿತ್ತು. ಇದೀಗ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರ್ (Vijay Kirgandoor) ಅವರಿಗೆ ಜಯ ದೊರಕಿದೆ.

Another victory for Kantara, Rishabh Shetty who won at the Supreme Court.
Image Credit: instagram

ಕಾಂತಾರ ವರಾಹ ರೂಪಂ ಕಾಪಿರೈಟ್ ಪ್ರಕರಣ
ನವರಸಂ ಗೀತೆಯಿಂದ ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಕಾಪಿರೈಟ್ (Varaha Roopam Song Copyright) ಮಾಡಲಾಗಿದೆ ಎಂದು ಥೈಕುಂಡಂ ಕಾಂತಾರ ಚಿತ್ರದಿಂದ ವರಾಹ ರೂಪಂ ಹಾಡನ್ನು ತೆಗೆಯುವಂತೆ ಕೋರ್ಟ್ ಗೆ ದೂರು ದಾಖಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೆ ಜಯ ದೊರಕಿದೆ.

Now the Supreme Court has stayed the Kerala High Court's order to remove Varaha Rupam song from the movie
Image Credit: instagram

ಸುಪ್ರೀಂ ಕೋರ್ಟ್ ಮೆಟ್ಟಿಲಲ್ಲಿ ಗೆದ್ದ ವರಾಹ ರೂಪಂ
ಕಾಂತಾರ ವರಾಹ ರೂಪಂ ಕಾಪಿರೈಟ್ ಪ್ರಕರಣವನ್ನು ವಿಚಾರಿಸಿ ಕೇರಳ ಹೈಕೋರ್ಟ್ ವರಾಹ ರೂಪಂ ಹಾಡನ್ನು ಚಿತ್ರದಿಂದ ತೆಗೆದು ಹಾಕುವಂತೆ ಆದೇಶಿಸಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ ಕಿರಂಗದೂರ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

Varaha Rupam song won in Supreme Court
Image Credit: Instagram

ಇದೀಗ ಸುಪ್ರೀಂ ಕೋರ್ಟ್ ವರಾಹ ರೂಪಂ ಹಾಡನ್ನು ಸಿನಿಮಾದಿಂದ ತೆಗೆಯುವ ಕೇರಳ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಕೊಟ್ಟಿದೆ. ಇಬ್ಬರನ್ನು ಬಂಧಿಸದಂತೆ ರಕ್ಷಣೆ ನೀಡಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

Join Nadunudi News WhatsApp Group

ಇದೀಗ ಕೇರಳ ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ನು ಸಡಿಲಗೊಳಿಸಿದೆ. ಹಾಡಿನ ಕಾಪಿರೈಟ್ ಪ್ರಕರಣದಲ್ಲಿ ಫೆಬ್ರವರಿ 12 ಮತ್ತು 13 ರಂದು ವಿಚಾರಣೆಗೆ ಹಾಜರಾಗುವಂತೆ ರಿಷಬ್ ಶೆಟ್ಟಿ ಹಾಗೂ ವಿಜಯ ಕಿರಂಗದೂರ್ ಅವರಿಗೆ ಸೂಚಿಸಿದೆ.

Join Nadunudi News WhatsApp Group