Sowjanya: ಸೌಜನ್ಯ ವಿಷಯವಾಗಿ ಕೊನೆಗೂ ಮೌನಮುರಿದ ವೀರೇಂದ್ರ ಹೆಗ್ಗಡೆಯವರು, ಹೆಗ್ಗಡೆಯವರು ಹೇಳಿದ್ದೇನು.

ಸೌಜನ್ಯ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು.

Veerendra Heggade About Sowjanya Case: ಸುಮಾರು ಹತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಜ್ಜಿರೆ ಮತ್ತು ಧರ್ಮಸ್ಥಳದ ದೇವಾಲಯದ ಪಟ್ಟಣಗಳಲ್ಲಿ 17 ವರ್ಷದ ಸೌಜನ್ಯಳ ಹತ್ಯೆಯ ಪ್ರಕರಣ (Sowjanya Case) ಸಂಭವಿಸಿದೆ.

ಸೌಜನ್ಯಳ ಹತ್ಯೆ ಪ್ರಕರಣದ ಸಲುವಾಗಿ ಸಾಕಷ್ಟು ಪ್ರತಿಭಟನೆ ನಡೆದಿದೆ. ಸೌಜ್ಯನ್ಯಾಳ ಸಾವಿಗೆ ನ್ಯಾಯ ದೊರಕಿಸಲು ಅನೇಕ ವರ್ಷಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಇದೀಗ ಸೌಜ್ಯನ್ಯಾಳ ಸಾವಿನ ಪ್ರಕರಣದ ತನಿಖೆ ವಿಚಾರ ಮತ್ತೆ ಶುರುವಾಗಿದೆ.

Veerendra Heggade About Sowjanya Case
Image Credit: Mysoorunews

ಸೌಜನ್ಯ ಹತ್ಯೆಯ ಪ್ರಕರಣ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನ ಬಂಧಿಸಿ ವಿಚಾರಣೆ ಮಾಡಲಾಗಿದೆ. ಸದ್ಯ ಈಗ ಮತ್ತೆ ಈ ಪ್ರಕಾರ ಹೊಸ ತಿರುವನ್ನ ಪಡೆದುಕೊಂಡಿದ್ದು ತನಿಖೆ ಬಹಳ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಮುಖ್ಯ ಅಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆಯವರು ಇಲ್ಲಿಯತನಕ ಯಾವುದೇ ಹೇಳಿಕೆಯನ್ನ ನೀಡಿರಲಿಲ್ಲ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ವೀರೇಂದ್ರ ಹೆಗ್ಗಡೆಯವರು ಮಾಧ್ಯಮಗಳ ಮುಂದೆ ಮಾತನಾಡಿದ್ದು ಮಾದ್ಯಮಗ ಮುಂದೆ ವೀರೇಂದ್ರ ಹೆಗ್ಗಡೆಯವರು ಬೇಸರವನ್ನ ಹೊರಹಾಕಿದ್ದಾರೆ.

Veerendra Heggade About Sowjanya Case
Image Credit: Wikipedia

ಸೌಜನ್ಯ ವಿಷಯವಾಗಿ ಕೊನೆಗೂ ಮೌನಮುರಿದ ವೀರೇಂದ್ರ ಹೆಗ್ಗಡೆಯವರು
ಶ್ರೀ ಕ್ಷೇತ್ರದ ನೌಕರರ ವಿಭಾಗದ ಮುಖ್ಯಸ್ಥರ ಸಭೆಯಲ್ಲಿ ವೀರೇಂದ್ರ ಹೆಗ್ಗಡೆ ಅವರು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ಕೊನೆಗೂ ಮಾತನಾಡಿದ್ದಾರೆ.

Join Nadunudi News WhatsApp Group

“ಅಮಾಯಕ ಹೆಣ್ಣುಮಗಳ ಹತ್ಯೆಯ ತನಿಖೆಗೆ ಮೊದಲು ಆಗ್ರಹಿಸಿದ್ದೆ ನಾನು, ಸಿಬಿಐಗೆ ಒಪ್ಪಿಸಲು ಮುಖ್ಯಮಂತ್ರಿಗಳಿಗೆ ಹೇಳಿದ್ದೆ ನಾನು” “ಯಾರಿಗೂ ಯಾವುದೇ ಕಾರಣಕ್ಕೂ ಅನ್ಯಾಯವನ್ನು ಮಾಡುವುದಿಲ್ಲ. ಕ್ಷೇತ್ರದ ಹೆಸರನ್ನು ಯಾಕೆ ಎಳೆಯುತ್ತಾರೆ ಎನ್ನುವುದು ಗೊತ್ತಿಲ್ಲ. ಹೇಗಾದರೂ ಕ್ಷೇತ್ರವನ್ನು ಮಲಿನ ಮಾಡಬೇಕೆನ್ನುವುದು ಅವರ ಉದ್ದೇಶ” ಎಂದಿದ್ದಾರೆ.

ಹೆಗ್ಗಡೆಯವರು ಹೇಳಿದ ಮಾತಿನಂತೆ ಆದಷ್ಟು ಬೇಗ ಕುಮಾರ್ ಸೌಜನ್ಯ ಅವರಿಗೆ ನ್ಯಾಯ ಸಿಗಬೇಕು ಎಂದು ಇಡೀ ದೇಶಕ್ಕೆ ದೇಶವೇ ಹೊರಹಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಕೋರ್ಟ್ ತೀರ್ಪಿನ ನಂತರ ಸದ್ಯ ಪ್ರಕರಣವನ್ನ ಮತ್ತೆ ಗಂಭೀರವಾಗಿ ಕೈಗೆ ತಗೆದುಕೊಂಡಿರುವ ಅಧಿಕಾರಿಗಳು ಅಪರಾಧಿಗಳ ಹುಡುಕಾಟವನ್ನ ಮಾಡುತ್ತಿದ್ದು ಆದಷ್ಟು ಬೇಗ ಸೌಜನ್ಯ ಸಾವಿಗೆ ನ್ಯಾಯ ಸಿಗಲಿದೆ ಅನ್ನುವುದು ಜನರ ಅಭಿಪ್ರಾಯ ಆಗಿದೆ.

Join Nadunudi News WhatsApp Group