Vehicle Insurance: ಈ ರೀತಿಯಲ್ಲಿ ವಾಹನಗಳಿಗೆ ಹಾನಿಯಾದರೆ ಕ್ಲೈಮ್ ಮಾಡುವಂತಿಲ್ಲ, ಜಾರಿಗೆ ಬಂತು ಹೊಸ ವಿಮಾ ನಿಯಮ.

ಇದೀಗ ವಿಮಾ ಪಾಲಿಸಿಲಿಗಳು ಯಾವ ಸಮಯದಲ್ಲಿ ಕ್ಲೈಮ್ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Vehicle Insurance Claim In Riots: ಸಾಮಾನ್ಯವಾಗಿ ವಾಹನ ಖರೀದಿಯ ಸಮಯದಲ್ಲಿ ವಾಹನಗಳಿಗೆ ವಿಮಾ ಪಾಲಿಸಿಯನ್ನು (Vehicle Insurance) ಮಾಡಿಸಿಕೊಳ್ಳುವುದು ಸಹಜ. ವಾಹನಗಳು ಯಾವುದೇ ಅಪಘಾತದಲ್ಲಿ ಹಾಳಾದ ಸಂಧರ್ಭದಲ್ಲಿ ವಾಹನದ ವಿಮಾ ಪಾಲಿಸಿಯೂ ಸಹಾಯವಾಗುತ್ತದೆ.

ಯಾವುದೇ ರೀತಿಯ ರಸ್ತೆ ಅಪಘಾತ, ಬೆಂಕಿ ಅವಘಡ ಅಥವಾ ಇನ್ನಾವುದೇ ರೀತಿಯಲ್ಲಿ ಖರೀದಿಸಿದ ವಾಹನವು ಹಾಳಾದ ಸಂಧರ್ಭದಲ್ಲಿ ವಾಹನದ ವಿಮಾ ಪಾಲಿಸಿ ಅಗತ್ಯವಾಗುತ್ತದೆ. ವಾಹನಗಳು ಹಾಳಾದ ಸಮಯದಲ್ಲಿ ವಿಮಾ ಪಾಲಿಸಿಯ ಮೂಲಕ ಹಣವನ್ನು ಪಡೆಯಬಹುದು.

Vehicle Insurance Claim In Riots
Image Credit: Haribhoomi

ವಾಹನಗಳ ವಿಮಾ ಪಾಲಿಸಿ
ಇನ್ನು ನಿಮ್ಮ ವಾಹನದ ವಿಮೆಯು ಕೆಲ ಸಂದರ್ಭದಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತವೆ. ಕೆಲವೊಂದು ಕಾರಣಕ್ಕೆ ನಿಮ್ಮ ವಾಹನ ಹಾನಿಗೊಳಗಾದರೆ ವಿಮಾ ಪಾಲಿಸಿ ಕ್ಲೈಮ್ ಆಗುವುದಿಲ್ಲ. ಇನ್ನು ದೇಶದದಲ್ಲಿ ಆಗಾಗ ಗಲಭೆಗಳು ಉಂಟಾಗುತ್ತದೆ. ಈ ವೇಳೆ ವಾಹನಗಳು ಸಾಕಷ್ಟು ಹಾನಿಗೆ ಒಳಗಾಗುತ್ತದೆ.

ಗಲಭೆಯ ಸಮಯದಲ್ಲಿ ರಸ್ತೆ ಬದಿಯಲ್ಲಿ ಹೊರಗೆ ವಾಹನಗಳನ್ನು ನಿಲ್ಲಿಸುವವರಿಗೆ ಹೆಚ್ಚಿನ ನಷ್ಟವಾಗುತ್ತದೆ. ಈ ಸಮಯದಲ್ಲಿ ವಾಹನಗಳಿಗೆ ಹಾನಿಯಾದರೆ ವಿಮೆ ಕ್ಲೈಮ್ ಆಗುತ್ತದೆಯಾ? ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಇದೀಗ ವಿಮಾ ಪಾಲಿಸಿಲಿಗಳು ಯಾವ ಯಾವ ಸಮಯದಲ್ಲಿ ಕ್ಲೈಮ್ ಆಗುತ್ತದೆ ಎನ್ನುವ ಬಗ್ಗೆ ಒಂದಿಷ್ಟು ವಿವರ ತಿಳಿಯೋಣ.

Vehicle Insurance Latest Update
Image Credit: Isure

ಗಲಭೆಯಿಂದ ವಾಹನಗಳಿಗೆ ಹಾನಿಯಾದರೆ ವಿಮೆ ಕ್ಲೈಮ್ ಆಗುತ್ತದೆಯಾ..?
ಗಲಭೆಯ ಸಮಯದಲ್ಲಿ ನಿಮ್ಮ ಕಾರು ಅಥವಾ ಬೈಕು ಹಾನಿಗೊಳಗಾದರೆ ನೀವು ಸುಲಭವಾಗಿ ವಿಮಾ ಕಂಪನಿಯಿಂದ ಪರಿಹಾರವನ್ನು ಪಡೆಯಬಹುದು. ಇದಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ನೀವು ಅನುಸರಿಸಬೇಕಾಗುತ್ತದೆ.

Join Nadunudi News WhatsApp Group

ಗಲಭೆಗಳಿಂದ ಉಂಟಾಗುವ ಹಾನಿಯನ್ನು ಸಮಗ್ರ ಮೋಟಾರು ವಿಮಾ ಪಾಲಿಸಿಯ ಅಡಿಯಲ್ಲಿ ಒಳಗೊಂಡಿದೆ. ನಿಮ್ಮ ವಾಹನಕ್ಕೆ ನೀವು ಮೂರನೇ ವ್ಯಕ್ತಿಯ ವಿಮಾ ರಕ್ಷಣೆಯನ್ನು ಹೊಂದಿದ್ದರೆ ಅದು ನಿಮ್ಮ ವಾಹನಕ್ಕೆ ಉಂಟಾಗುವ ಯಾವುದೇ ಹಾನಿಯನ್ನು ಒಳಗೊಂಡಿರುವುದಿಲ್ಲ.

Vehicle Insurance Claim
Image Credit: Karnatakafinancial

ವಿಮಾ ಹಕ್ಕನ್ನು ಪಡೆಯುವ ವಿಧಾನ ಹೇಗೆ..?
*ವಿಮಾ ಹಕ್ಕನ್ನು ಪಡೆಯಲು ನೀವು ಮೊದಲು ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ತಿಳಿಸಬೇಕು ಮತ್ತು FIR ದಾಖಲಿಸಬೇಕು.

*ವಿಮಾ ಕ್ಲೈಮ್ ಮಾಡುವಾಗ ನೀವು ಕಂಪನಿಗೆ FIR ಪ್ರತಿಯನ್ನು ನೀಡಬೇಕು.

*ನೀವು ಬೈಕ್ ಅಥವಾ ಕಾರಿನ ಕೀಗಳನ್ನು ಹೊಂದಿದ್ದರೆ, ಅದನ್ನು ಸಹ ಠೇವಣಿ ಮಾಡಬೇಕಾಗುತ್ತದೆ.

*ಗಲಭೆಗಳು, ನೈಸರ್ಗಿಕ ವಿಕೋಪಗಳು ಮತ್ತು ಬೆಂಕಿಯಿಂದ ಉಂಟಾದ ಹಾನಿಯ ಸಂದರ್ಭದಲ್ಲಿ ಕಂಪನಿಯು ವಾಹನದ ವಿಮಾದಾರ ಘೋಷಿತ ಮೌಲ್ಯವನ್ನು ಪಾವತಿಸುತ್ತದೆ.

Join Nadunudi News WhatsApp Group