Number Plate: ಎಲ್ಲಾ ವಾಹನಗಳ ನಂಬರ್ ಪ್ಲೇಟ್ ಮೇಲೆ ಹೀಗೆ IND ಎಂದು ಬರೆಯುವುದು ಕಡ್ಡಾಯ ಏಕೆ…? ನಿಮಗಿದು ತಿಳಿದಿರಲಿ.

ವಾಹನಗಳ ನಂಬರ್ ಪ್ಲೇಟ್ ನಲ್ಲಿ IND ಎಂದು ಬರೆಯುವುದರ ಅರ್ಥ.

IND Word On Vehicle Number Plate: ದೇಶದಲ್ಲಿ ವಾಹನಗಳಿಗೆ ಸಾಕಷ್ಟು ನಿಯಮಗಳಿವೆ. ವಾಹನ ಚಲಾವಣೆಯಿಂದ ಹಿಡಿದು ವಾಹನಗಳಲ್ಲಿ ಅಳವಡಿಸಲಾಗುವ ಪ್ರತಿ ವಸ್ತುವಿಗೂ ಕೂಡ ಅದರದ್ದೇ ಆದ ನಿಯವಿರುತ್ತದೆ. ಸಾಮಾನ್ಯವಾಗಿ ವಾಹನಗಳಲ್ಲಿ Number Plate ವಿಶೇಷವಾಗಿರುತ್ತದೆ.

ಈ Number Plate ಇಲ್ಲದೆ ಯಾವ ವಾಹನ ಕೂಡ ರಸ್ತೆಗಿಳಿಯುವಂತಿಲ್ಲ. ಹೊಸ ವಾಹನ ಖರೀದಿಸಿದವರು ಮೊದಲು ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಾರೆ. ಇನ್ನು ಪ್ರತಿನಿತ್ಯ ರಸ್ತೆಗಳಲ್ಲಿ ಲಕ್ಷಾಂತರ ವಾಹನಗಳು ಓಡಾಡುತ್ತವೆ.

Vehicle Number Plate
Image Credit: Gomechanic

ವಾಹನಗಳ ನಂಬರ್ ಪ್ಲೇಟ್ ನಲ್ಲಿ IND ಎಂದು ಏಕೆ ಬರೆಯುತ್ತಾರೆ..?
ಎಲ್ಲ ವಾಹನಗಳನ್ನು ವಿಭಿನ್ನ ರೀತಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿರುತ್ತಾರೆ. ಇನ್ನು ವಾಹನಗಳಲ್ಲಿ ನಂಬರ್ ಪ್ಲೇಟ್ ಅನ್ನು ಸುಮ್ಮನೆ ಅಳವಡಿಸಿರುವುದಿಲ್ಲ. ಅದರಲ್ಲಿ ನಮೂದಿಸಲಾದ ಪ್ರತಿ ಸಂಖ್ಯೆಯು ವಾಹನದ ಬಗ್ಗೆ ಮಾಹಿತಿ ನೀಡುತ್ತದೆ.

ಸಾಮಾನ್ಯವಾಗಿ ಎಲ್ಲಾ ವಾಹನಗಳ ನಂಬರ್ ಪ್ಲೇಟ್ ಮೇಲೆ IND ಎಂದು ಬರೆದಿರುವುದನ್ನು ನೀವು ನೋಡಿದ್ದೀರಾ? ಹೆಚ್ಚಿನ ವಾಹನದ ನಂಬರ್ ಪ್ಲೇಟ್ ನಲ್ಲಿ IND ಎಂದು ಬರೆದಿರುವುದನ್ನು ನೀವು ಗಮನಿಸಿರುತ್ತೀರಿ. ಇದೀಗ ವಾಹನಗಳ ನಂಬರ್ ಪ್ಲೇಟ್ ನಲ್ಲಿ IND ಎಂದು ಏಕೆ ಬರೆಯುತ್ತಾರೆ..? ಎನ್ನುವ ಬಗ್ಗೆ ವಿವರ ತಿಳಿಯೋಣ.

Vehicle Number Plate Latest Update
Image Credit: Timesofindia

ಎಲ್ಲಾ ವಾಹನಗಳ ನಂಬರ್ ಪ್ಲೇಟ್ ಮೇಲೆ ಹೀಗೆ IND ಎಂದು ಬರೆಯುವುದು ಕಡ್ಡಾಯ ಏಕೆ…?
ವಾಹನಗಳ ನಂಬರ್ ಪ್ಲೇಟ್ ನಲ್ಲಿ IND ಎಂದು ಬರೆಯುವುದರ ಅರ್ಥ ಭಾರತ ಎಂದರ್ಥ. ಹಾಗೆಯೆ IND ಎಂದರೆ ಹೊಲೊಗ್ರಾಮ್ ಕೂಡ ಆಗಿದೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ಗೆ 2005 ರ ತಿದ್ದುಪಡಿಯ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ.

Join Nadunudi News WhatsApp Group

ಇದು RTO ಒದಗಿಸಿದ ನಂಬರ್ ಪ್ಲೇಟ್‌ ನಲ್ಲಿ ಮಾತ್ರ ಈ IND ಅಕ್ಷರವನ್ನ ಬರೆಯಲಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಈ ನಂಬರ್ ಪ್ಲೇಟ್ ಅನ್ನು ಹೆಚ್ಚಿನ ಭದ್ರತಾ ಸಂಖ್ಯೆ ಎಂದು ಕರೆಯಲಾಗುತ್ತದೆ. ಇದು ಅಪಘಾತಗಳು ಮತ್ತು ಕಳ್ಳತನದಂತಹ ಸಂದರ್ಭಗಳನ್ನು ಎದುರಿಸಲು ವಾಹನದ ಮಾಲೀಕರನ್ನು ತಲುಪಲು ಇದು ಸಹಾಯವಾಗುತ್ತದೆ. ವಾಹನದ ನಂಬರ್ ಪ್ಲೇಟ್ ನಲ್ಲಿ IND ಬಳಸುವುದರಿಂದ ಹೆಚ್ಚಿನ ಅನುಕೂಲವಿದೆ.

Join Nadunudi News WhatsApp Group