Vehicle Registration Cess: ಹೊಸ ವಾಹನ ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ವಾಹನದ ತೆರಿಗೆಯಲ್ಲಿ ಮತ್ತೆ ಇಷ್ಟು ಹೆಚ್ಚಳ

ವಾಹನಗಳ ತೆರಿಗೆ ಹೆಚ್ಚಿಸಿದ ರಾಜ್ಯ ಸರಕಾರ, ಕರ್ನಾಟಕದಲ್ಲಿ ವಾಹನ ಖರೀದಿ ಇನ್ನುಮುಂದೆ ದುಬಾರಿ.

Vehicle Registration Cess Hike: ರಾಜ್ಯದಲ್ಲಿ ಹಣದುಬ್ಬರತೆ ಪರಿಸ್ಥಿತಿ ಒಂದೊಂದೇ ಹೆಜ್ಜೆಯಲ್ಲಿ ಹೆಚ್ಚಾಗುತ್ತಾ ಹೋಗುತ್ತಿದೆ. ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ದುಬಾರಿಯಾಗುತ್ತ ಜನಸಾಮಾನ್ಯರಿಗೆ ಹೆಚ್ಚಿನ ಆರ್ಥಿಕ ಹೊರೆಯನ್ನು ನೀಡುತ್ತಿದೆ ಎನ್ನಬಹುದು. ಇದೀಗ ರಾಜ್ಯ ಸರ್ಕಾರ ವಾಹನಗಳ ಖರೀದಿಯನ್ನು ಇನ್ನಷ್ಟು ಕ್ಲಿಷ್ಟಕರಗೊಳಿಸಿದೆ.

ಇನ್ನು ಕರ್ನಾಟಕದಲ್ಲಿ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ರಸ್ತೆ ತೆರಿಗೆ (Road Tax ) ಅನ್ನು ವಿಧಿಸಲಾಗುತ್ತಿದೆ. ಇದರಿಂದ ವಾಹನ ಮಾಲೀಕರು ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿದ್ದರೆ. ಇದೀಗ ಹೊಸ ವಾಹನ ಖರೀದಿಸುವ ಯೋಜನೆ ಹಾಕಿಕೊಂಡವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Vehicle Registration Cess Hike
Image Credit: Wikipedia

ವಾಹನಗಳ ತೆರಿಗೆ ಹೆಚ್ಚಿಸಿದ ರಾಜ್ಯ ಸರಕಾರ
ಸದ್ಯ ಕರ್ನಾಟಕ ಸರ್ಕಾರ ಹೊಸ ವಾಹನ Registration ಗೆ ಹೆಚ್ಚುವರಿ 3 % ಸೆಸ್ ವಿಧಿಸಿದೆ. ಇದರ ಜೊತೆಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಯು ದುಬಾರಿಯಾಗಿದೆ. ರಾಜ್ಯ ಸರ್ಕಾರದ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯಿದೆ 2024 ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಹೊಸ ಕಾಯಿದೆ ಪ್ರಕಾರ, ಹೊಸ ವಾಣಿಜ್ಯ ವಾಹನ ನೋಂದಣಿಗೆ ಹೆಚ್ಚುವರಿ 3% ಸೆಸ್ ಪಾವತಿಸಬೇಕು ಮತ್ತು 25 ಲಕ್ಷಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಮೇಲೆ Life Time ತೆರಿಗೆ ಎಂದು ವಾಹನದ ಒಟ್ಟು ಮೊತ್ತದ 10 % ಪಾವತಿಸಬೇಕಾಗಿದೆ.

ಕರ್ನಾಟಕದಲ್ಲಿ ವಾಹನ ಖರೀದಿ ಇನ್ನುಮುಂದೆ ದುಬಾರಿ
ಈಗಾಗಲೇ ರಾಜ್ಯದಲ್ಲಿ ಶೇ.10 ಮೂಲಸೌಕರ್ಯ ಸೆಸ್, ಶೇ.1 ನಗರ ಸಾರಿಗೆ ಸೆಸ್ ವಿಧಿಸಲಾಗುತ್ತಿದ್ದು, ಒಟ್ಟು ಶೇ.11 ಸೆಸ್ ವಿಧಿಸಲಾಗುತ್ತಿದ್ದು, ಇದೀಗ ಹೆಚ್ಚುವರಿ ಸೆಸ್ ಕೂಡ ಜಾರಿಗೆ ಬಂದಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಾಹನ ಖರೀದಿ ದುಬಾರಿಯಾಗುತ್ತಿದೆ. ತೆರಿಗೆ ಹೆಚ್ಚಾದರೆ ವಾಹನ ಖರೀದಿಸುವವರು ಇನ್ನಷ್ಟು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

Road Tax Hike In Karnataka
Image Credit: The Hindu Business Line

Join Nadunudi News WhatsApp Group

Join Nadunudi News WhatsApp Group