Vehicle Tax: ದಿಡೀರನೆ ನಿಯಮ ಬದಲಿಸಿದ ರಾಜ್ಯ ಸರ್ಕಾರ, ಈ ವಾಹನಗಳಿಗೆ ಇನ್ನುಮುಂದೆ ದುಪ್ಪಟ್ಟು ಶುಲ್ಕ.

ವಾಹನ ತೆರಿಗೆಗಳ ಮೇಲೆ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು ಜನರು ಇನ್ನುಮುಂದೆ ಹೆಚ್ಚಿನ ಶುಲ್ಕ ಕಟ್ಟಬೇಕು.

Vehicle Tax Hike: ಬಜೆಟ್ ಘೋಷಣೆಯಲ್ಲಿ ಸಿ ಎಂ ಸಿದ್ದರಾಮಯ್ಯ (Siddaramaiah) ಹಲವಾರು ಬದಲಾವಣೆಗಳನ್ನು ಜಾರಿ ಮಾಡಿದ್ದಾರೆ. ಇನ್ನು ಜುಲೈ ತಿಂಗಳು ಮುಗಿಯುತ್ತ ಬಂದಿದೆ. ಮುಂದಿನ ತಿಂಗಳ ಆರಂಭದಲ್ಲಿ ಅನೇಕ ಬದಲಾವಣೆ ಆಗಲಿವೆ. ಅದರಲ್ಲಿ ವಾಹನ ತೆರಿಗೆ ನಿಯಮವು ಸಹ ಒಂದಾಗಿದೆ.

ವಾಹನ ಇರುವವರಿಗೆ ಹೊಸ ಮಾಹಿತಿ
ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಜುಲೈ 7 ರಂದು ಮಂಡಿಸಿದ್ದ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ಮಸೂದೆ 2023 ಕ್ಕೆ ವಿಧಾನ ಮಂಡಲದ ಒಪ್ಪಿಗೆ ಪಡೆಯಲಾಗಿತ್ತು. ಶಾಲೆ ಕಾಲೇಜುಗಳ ವಾಹನಗಳು ಅತಿ ಭಾರದ ಸರಕು ಸಾಗಣೆ ವಾಹನಗಳು ಮೋಟಾರು ಕ್ಯಾಬ್ ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ.

New information for vehicle owners
Image Credit: Telegraphindia

ವಾಹನ ತೆರಿಗೆ ಹೆಚ್ಚಳ ಮಾಡಿದ ಸರ್ಕಾರ
ಶಾಲಾ ವಿದ್ಯಾರ್ಥಿಗಳು ಹಾಗು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್ ಗೆ ತೆರಿಗೆಯನ್ನು ರೂಪಾಯಿ 20 ರಿಂದ 100 ಕ್ಕೆ ಏರಿಕೆ ಮಾಡಲಾಗಿದೆ. ಇತರ ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್ ವಿಸ್ತೀರ್ಣದ ತೆರಿಗೆಯನ್ನು ರೂಪಾಯಿ 80 ರಿಂದ 100 ಹೆಚ್ಚಿಸಲಾಗಿದೆ.

ಹೊರುವ ಭಾರವು ಸೇರಿದಂತೆ ಒಟ್ಟು ತೂಕ 1.5 ಟನ್ ನಿಂದ 5.5 ಟನ್ ಗಳವರೆಗೆ ಮಾತ್ರ ಇರುವ ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪಡೆಯಲಾಗುತ್ತಿತ್ತು. ಅದಕ್ಕಿಂತ ಹೆಚ್ಚಿನ ಭಾರದ ವಾಹನಗಳಿಗೆ ಪ್ರತಿ ಮೂರೂ ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕಿತ್ತು. ಈಗ 1 .5 ಟನ್ ನಿಂದ 12 ಟನ್ ತೂಕದ ವಾಹನಗಳಿಗೂ ಪೂರ್ಣಾವಧಿ ತೆರಿಗೆ ಸಂಗ್ರಹಿಸಲಾಗುತ್ತದೆ.

Govt hiked vehicle tax
Image Credit: Hindustantimes

ರೂಪಾಯಿ 15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್ ಗಳಿಗೆ ಮಾತ್ರ ಆ ವಾಹನದ ಮೌಲ್ಯದ ಶೇಕಡಾ 15 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇನ್ನುಮುಂದೆ ರೂಪಾಯಿ 10 ಲಕ್ಷದಿಂದ ರೂಪಾಯಿ 15 ಲಕ್ಷದ ವರೆಗಿನ ಬೆಲೆಯ ಕ್ಯಾಬ್ ಗಳಿಗೆ ಅವುಗಳ ಮೌಲ್ಯದ ಶೇಕಡಾ 9 ರಷ್ಟು ತೆರಿಗೆ ವಿಷಿಸಲಾಗುತ್ತದೆ. ರೂಪಾಯಿ 15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್ ಗಳಿಗೆ ಈ ಹಿಂದಿನಂತೆಯೇ ಅವುಗಳ ಮೌಲ್ಯದ ಶೇಕಡಾ 15 ರಷ್ಟು ತೆರಿಗೆ ವಿಧಿಸಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group