Soundarya: ಪ್ರೀತಿ ಮಾಡುತ್ತಿದ್ದ ವೆಂಕಟೇಶ್ ಗೆ ನಟಿ ಸೌಂದರ್ಯ ದಿಡೀರ್ ರಾಖಿ ಕಟ್ಟಿದ್ದು ಯಾಕೆ…? ಅಗಲಿದ ಸೌಂದರ್ಯ ಪ್ರೇಮಕತೆ.

ಪ್ರೀತಿ ಮಾಡುತ್ತಿದ್ದ ವೆಂಕಟೇಶ್ ಗೆ ರಾಖಿ ಕಟ್ಟಿದ ನಟಿ ಸೌಂದರ್ಯ.

Venkatesh And Soundarya Love Story: ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟ ನಟಿಯರ ಲವ್ ಗಾಸಿಪ್ ಹರಿದಾಡುವುದು ಸಾಮಾನ್ಯ ವಿಚಾರ. ತೆರೆ ಮೇಲೆ ಕಾಣಿಸಿಕೊಳ್ಳುವ ಸಾಕಷ್ಟು ಜೋಡಿಗಳು ನಿಜ ಜೀವನದಲ್ಲಿ ಜೀವನ ಹಂಚಿಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಒಂದಲ್ಲ ಒಂದು ವೈರಲ್ ಆಗುತ್ತದೆ.

ತೆಲುಗು ಚಿತ್ರರಂಗದಲ್ಲಿ ಈಗಿನ ಕಾಲದ ನಟ ನಟಿಯರ ಲವ್ ಸ್ಟೋರಿಯಿಂದ ಹಿಡಿದು ಹಿಂದಿನ ಕಾಲದ ಖ್ಯಾತ ನಟ ನಟಿಯರ ಲವ್ ಸ್ಟೋರಿಗಳು ಆಗಾಗ ಸುದ್ದಿಯಾಗುತ್ತದೆ. ಇದೀಗ ಟಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಪ್ರೀತಿಯ ವಿಚಾರವಾಗಿ ಸುದ್ದಿಯಾಗುತ್ತಿದ್ದ ವಿಕ್ಟರಿ ವೆಂಕಟೇಶ್ (Venkatesh) ಹಾಗು ನಟಿ ಸೌಂದರ್ಯ (Soundarya) ಅವರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದು ವೈರಲ್ ಆಗಿದೆ.

Venkatesh And Soundarya latest news update
Image Credit: Twitter

ಟಾಲಿವುಡ್ ನಲ್ಲಿ ವೈರಲ್ ಆಗಿತ್ತು ನಟಿ ಸೌಂದರ್ಯ ಹಾಗೂ ವಿಕ್ಟರಿ ವೆಂಕಟೇಶ್ ಲವ್ ಸ್ಟೋರಿ
ನಟಿ ಸೌಂದರ್ಯ ಅವರು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು. ಕನ್ನಡ ಜೊತೆಗೆ ತೆಲುಗು, ಹಿಂದಿ, ಮಲಯಾಳಂ ಸಿನಿಮಯಗಲ್ಲಿ ನಟಿಸಿದ್ದಾರೆ. ಟಾಲಿವುಡ್ ನಲ್ಲಿ ಚಿರಂಜೀವಿ, ನಾಗಾರ್ಜುನ್, ಬಾಲಕೃಷ್ಣ, ವೆಂಕಟೇಶ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ನಟಿ ತೆರೆ ಹಂಚಿಕೊಂಡಿದ್ದಾರೆ. ಇನ್ನು ನಟಿ ಸೌಂದಯ ಹಾಗೂ ವಿಕ್ಟರಿ ವೆಂಕಟೇಶ್ ಕಾಂಬಿನೇಷನ್ ಚಿತ್ರಗಳು ಬಾರಿ ಹಿಟ್ ಕಂಡಿದ್ದವು. ಚಿತ್ರಗಳು ಹಿಟ್ ಆಗುವುದರ ಜೊತೆಗೆ ಈ ಜೋಡಿಯ ಲವ್ ಸ್ಟೋರಿ ಕೂಡ ಆಗುವ ಹೈಲೈಟ್ ಆಗುತ್ತಿತ್ತು.

ಪ್ರೀತಿಸುತ್ತಿದ್ದ ಸೌಂದರ್ಯ ಅವರಿಂದಲೇ ರಾಖಿ ಕಟ್ಟಿಸಿಕೊಂಡಿದ್ದರಂತೆ ವಿಕ್ಟರಿ ವೆಂಕಟೇಶ್
ನಟ ವೆಂಕಟೇಶ್ ಅವರಿಗೆ ಮದುವೆಯಾಗಿದ್ದರು ಕೂಡ ನಟಿ ಸೌಂದರ್ಯ ಅವರ ಜೊತೆ ಹಲವು ವರ್ಷ ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದರು ಎನ್ನುವ ಬಗ್ಗೆಬಹಳ ಸುದ್ದಿಯಾಗಿತ್ತು. ನಿರಾಜ ಎನ್ನುವವರ ಜೊತೆ ವೆಂಕಟೇಶ್ ಮದುವೆಯಾಗಿದ್ದು ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಮದುವೆಯಾಗಿ ಮಕ್ಕಳಿದ್ರು ಕೂಡ ವೆಂಕಟೇಶ ಅವರು ಸೌಂದರ್ಯ ಅವರನ್ನು ಪ್ರೀತಿಸುತ್ತಿದ್ದರು ಅನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಹಳ ಚರ್ಚೆಗೆ ಕೂಡ ಕಾರಣವಾಗಿತ್ತು.

Venkatesh And Soundarya Love Story
Image Credit: Vistaranews

ಇನ್ನು ಸೌಂದಯ ಹಾಗೂ ವಿಕ್ಟರಿ ವೆಂಕಟೇಶ್ ಅವರ ಪ್ರೀತಿಯ ವಿಚಾರ ವೆಂಕಟೇಶ್ ಅವರ ತಂದೆ ತೆಲುಗಿನ ಖ್ಯಾತ ನಿರ್ಮಾಪಕರಾದ ರಾಮ ನಾಯ್ಡು ಅವರಿಗೆ ತಿಳಿಯಿತು. ರಾಮನಾಯ್ಡು ಅವರು ಸೌಂದರ್ಯ ಅವರ ಬಳಿ ವಾಸ್ತವದ ಸ್ಥಿತಿಯ ಮನವರಿಕೆ ಮಾಡಿದ್ದರಂತೆ.

Join Nadunudi News WhatsApp Group

ನಟಿ ಸೌಂದರ್ಯ ಅವರು ವೆಂಕಟೇಶ್ ಅವರಿಗೆ ರಾಖಿ ಕಟ್ಟುವಂತೆ ಮಾಡಿ ಇವರ ನಡುವೆ ಅಣ್ಣ ತಂಗಿ ಸಂಬಂಧ ಬೆಸೆಯುವಂತೆ ರಾಮ ನಾಯ್ಡು ಅವರು ಮಾಡಿದ್ದರು ಎನ್ನುವ ಬಗ್ಗೆ ಈ ಹಿಂದಿನ ಸಂದರ್ಶನದಲ್ಲಿ ವರದಿಯಾಗಿದೆ. ಇನ್ನು ಸೌಂದರ್ಯ ಅವರು ರಾಖಿ ಕಟ್ಟಿದ ಬಳಿಕ ಇಬ್ಬರು ಜೊತೆಯಾಗಿ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ ಎನ್ನುವ ಬಗ್ಗೆ ವರದಿಗಳಿಂದ ತಿಳಿದು ಬಂದಿದೆ.

Join Nadunudi News WhatsApp Group