ಈ ಭೂಮಿಯ ಮೇಲೆ ನಡೆಯುವ ಕೆಲವು ಘಟನೆಗಳು ನಮಗೆ ಶಾಕ್ ಆಗುವ ರೀತಿಯ ಮಾಡುತ್ತದೆ ಎಂದು ಹೇಳಬಹುದು. ಈಗಿನ ಕಾಲದಲ್ಲಿ ಮುತ್ತು ಕೊಡುವುದು ಸರ್ವೇ ಸಾಮಾನ್ಯವಾಗಿದೆ ಎಂದು ಹೇಳಬಹುದು. ಕೆಲವು ಪ್ರೇಮಿಗಳು ಎಲ್ಲೆಂದರಲ್ಲಿ ಮುತ್ತು ಕೊಡುವುದನ್ನ ನಾವು ನೀವೆಲ್ಲ ನೋಡಿದ್ದೇವೆ ಎಂದು ಹೇಳಬಹುದು, ಆದರೆ ಮುತ್ತಿನ ವಿಷಯದಲ್ಲಿ ನಡೆದ ಈ ಘಟನೆ ಸಾಮಾನ್ಯವಾಗಿ ಎಲ್ಲರಿಗೂ ಶಾಕ್ ಆಗುವಂತೆ ಆಗಿದೆ. ಮುತ್ತು ಕೊಡಲಿಲ್ಲ ಅನ್ನುವ ಕಾರಣ ಈ ಯುವತಿ ಮಾಡಿರುವ ಕೆಲಸವನ್ನ ನೋಡಿ ಇಡೀ ಪ್ರಪಂಚವೇ ಶಾಕ್ ಆಗಿದ್ದು ಈ ಘಟನೆ ಯುವಕರನ್ನ ಬೆಚ್ಚಿ ಬೀಳಿಸಿದೆ ಎಂದು ಹೇಳಬಹುದು. ಮುತ್ತು ಕೊಡಲಿಲ್ಲ ಅನ್ನುವ ಕಾರಣಕ್ಕೆ ಈ ಯುವತಿ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಕುಡಿತದ ರಾತ್ರಿಯೊಂದರ ಬಳಿಕ ತನಗೆ ಮುತ್ತು ಕೊಡೆಂದು ಕೇಳಿದಾಗ ಒಲ್ಲೆನೆಂದ ವ್ಯಕ್ತಿಯೊಬ್ಬನನ್ನು 28 ವರ್ಷ ವಯಸ್ಸಿನ ಮಹಿಳೆ ಗುಂಡಿಟ್ಟು ಪ್ರಾಣ ತೆಗೆದ ಘಟನೆ ಅಮೆರಿಕದ ಇಲಿನೋಯಿಯಲ್ಲಿ ಜರುಗಿದೆ. ಹೌದು ಕ್ಲಾಡಿಯಾ ರೆಸೆಂಡಿಜ ಮತ್ತು ಫ್ಲೋರೆಸ್ ಹೆಸರಿನ ಈ ಯುವತಿ ತನ್ನಿಬ್ಬರು ಗೆಳೆಯರೊಂದಿಗೆ ನೈಟ್‌ಔಟ್‌ನಲ್ಲಿ ಭಾಗಿಯಾಗಿದ್ದಳು. ತಾನು ಆಗ ತಾನೇ ವಾಸಿಸಲು ಬಂದಿದ್ದ ಆಪಾರ್ಟ್ಮೆಂಟ್‌ನಲ್ಲಿದ್ದ ಜೋಡಿ ಈಕೆಯೊಂದಿಗೆ ಪಾರ್ಟಿ ಮಾಡಲು ಮುಂದೆ ಬಂದಿದೆ. ಕುಡಿದ ಮತ್ತಿನಲ್ಲಿ ಇದ್ದ ರೆಸೆಂಡಿಜ ಜೇಮ್ಸ್ ಜೋನ್ಸ್ ತನಗೊಂದು ಮುತ್ತು ಕೊಡುವಂತೆ ಹೇಳಿದ್ದಾಳೆ.
ಇನ್ನು ಇದಕ್ಕೆ ಒಲ್ಲೇ ಎಂದ ಜೇಮ್ಸ್ ಜೋನ್ಸ್ ಅವಳ ಎದುರೇ ತನ್ನ ಪ್ರೇಯಸಿಗೆ ಮುತ್ತನ್ನ ಕೊಟ್ಟಿದ್ದಾನೆ. ಇನ್ನು ಹೊಟ್ಟೆ ಕಿಚ್ಚಿಗೆ ಗುರಿಯಾಗಿ ಅವಮಾನ ಎದುರಿಸಿಸ ರೆಸೆಂಡಿಜ ಕೋಪದಿಂದ ಇನ್ನೊಂದು ಬಾರಿ ನಮಗೆ ಮುತ್ತು ಕೊಡುವಂತೆ ಜೇಮ್ಸ್ ಜೋನ್ಸ್ ಬಳಿ ಕೇಳಿಕೊಂಡಿದ್ದಾಳೆ. ಈಕೆಯ ವರ್ತಿನೆಯನ್ನ ನೋಡಿ ಕೋಪಗೊಂಡ ಜೇಮ್ಸ್ ಜೋನ್ಸ್ ಇನ್ನೊಂದು ಬಾರಿ ನಾನು ನಿಮಗೆ ಮುತ್ತು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇನ್ನು ಇದರಿಂದ ತುಂಬಾ ಕೋಪಗೊಂಡ ರೆಸೆಂಡಿಜ ಕೂಡಲೇ ಕೌಚ್ ಕುಶನ್‌ಗಳ ನಡುವೆ ಇದ್ದ ಆತನ ಪಿಸ್ತೂಲ್ ಪಡೆದುಕೊಂಡು ಆತನಿಗೇ ಗುರಿಯಿಟ್ಟು ಶೂಟ್ ಮಾಡಿದ್ದಾಳೆ.
ಇನ್ನು ಜೇಮ್ಸ್ ತೀವ್ರವಾದ ಗಾಯವಾದ ಕಾರಣ ಆತ ಅಲ್ಲೇ ಅಸುನೀಗಿದ್ದಾನೆ. ಇನ್ನು ಇದರಿಂದ ಏನು ಮಾಡಬೇಕು ಎಂದು ತೋಚದ ಜೇಮ್ಸ್ ಪ್ರಿಯತಮೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾಳೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ರೆಸೆಂಡಿಜ ಅನ್ನು ಬಂಧಿಸಿದ್ದಾರೆ. ಮುತ್ತಿನ ಕಾರಣಕ್ಕೆ ಜೇಮ್ಸ್ ತನ್ನ ಪ್ರಾಣವನ್ನ ಕಳೆದುಕೊಂಡಿದ್ದಾನೆ ಎಂದು ಹೇಳಬಹುದು. ಇತ್ತ ಪ್ರಿಯತಮನನ್ನ ಕಳೆದುಕೊಂಡ ಪ್ರೇಯಸಿ ಸದ್ಯ ಮಾನಸಿಕವಾಗಿ ಬಹಳ ನೊಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾಳೆ. ಸ್ನೇಹಿತರೆ ಸ್ನೇಹಿತರೆ ಈ ಮುತ್ತಿನ ಘಾಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.