VI Data Plan Free Smartphone Insurance: ಇದೆ ಮೊದಲ ಬಾರಿಗೆ ವೊಡಾಫೋನ್ ಐಡಿಯಾ ಕಂಪನಿ ತನ್ನ ಗ್ರಾಹಕರಿಗೆ ಉತ್ತಮ ಆಫರ್ ಬಿಡುಗಡೆ ಮಾಡಿದೆ. ರಿಚಾರ್ಜ್ ಜೊತೆಗೆ ಇನ್ನೊಂದು ಆಫರ್ ಬಿಡುಗಡೆ ಮಾಡುವುದರ ಮೂಲಕ ವೊಡಾಫೋನ್ ಐಡಿಯಾ ಕಂಪನಿ ಇತರೆ ಟೆಲಿಕಾಂ ಕಂಪನಿಗೆಳಿಗೆ ಪೈಪೋಟಿ ಕೊಡಲು ಸಿದ್ಧವಾಗಿದೆ. ಈಗ ವೊಡಾಫೋನ್ ಐಡಿಯಾ ಕಂಪನಿ ಸಿಮ್ ಬಳಕೆ ಮಾಡುವವರು 61 ರೂಪಾಯಿ ರಿಚಾರ್ಜ್ ನಲ್ಲಿ 25,000 ಸಾವಿರ ಬೆನಿಫಿಟ್ ಪಡೆದುಕೊಳ್ಳಬಹುದು. ಹಾಗಾದರೆ ವೊಡಾಫೋನ್ ಐಡಿಯಾ ಕಂಪನಿ ಬಿಡುಗಡೆ ಮಾಡಿರುವ ಹೊಸ ಆಫರ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಚಿತ Smartphone ವಿಮೆ ನೀಡಿದ ವೊಡಾಫೋನ್ ಐಡಿಯಾ ಕಂಪನಿ
ಉಚಿತ ಸ್ಮಾರ್ಟ್ ಫೋನ್ ವಿಮೆ ಎಂದರೆ, ಕೆಲವು ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳೊಂದಿಗೆ ನೀಡುವ ಒಂದು ಪ್ರಯೋಜನವಾಗಿದ್ದು, ಇದು ಫೋನ್ ಕಳ್ಳತನ, ಆಕಸ್ಮಿಕ ಹಾನಿ ಮತ್ತು ವಾಟರ್ ಡ್ಯಾಮೇಜ್ ರಕ್ಷಣೆ ನೀಡುತ್ತದೆ. ಇದನ್ನು ಕೆಲವೊಮ್ಮೆ ಫೋನ್ ರೀಚಾರ್ಜ್ ನೊಂದಿಗೆ ಉಚಿತವಾಗಿ ಪಡೆಯಬಹುದು, ಆದರೆ ನಿಯಮಗಳು ಮತ್ತು ಷರತ್ತುಗಳಿರುತ್ತವೆ.
ಕೇವಲ 61 ರೂಪಾಯಿ ರಿಚಾರ್ಜ್ ಗೆ 25,000 ವಿಮೆ ಸೌಲಭ್ಯ
ಇದೀಗ ವೊಡಾಫೋನ್ ಐಡಿಯಾ ಕಂಪನಿ ತನ್ನ ಗ್ರಾಹಕರಿಗೆ ಉಚಿತ ಸ್ಮಾರ್ಟ್ ಫೋನ್ ವಿಮೆ ಜಾರಿಗೆ ತಂದಿದೆ. ಗ್ರಾಹಕರು ಡೇಟಾ ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಉಚಿತ ಸ್ಮಾರ್ಟ್ ಫೋನ್ ವಿಮೆ ಪಡೆದುಕೊಳ್ಳಬಹುದಾಗಿದೆ. ಇದೀಗ Vi ಹೊಸ 3 ಪ್ರಿಪೇಯ್ಡ್ ಡೇಟಾ ಪ್ಯಾಕ್ ನೀಡುತ್ತಿದೆ. ಈ 3 ಪ್ರಿಪೇಯ್ಡ್ ಡೇಟಾ ಪ್ಯಾಕ್ ನೊಂದಿಗೆ ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಸಹಯೋಗದಲ್ಲಿ 25,000 ರೂಪಾಯಿವರೆಗಿನ ಸ್ಮಾರ್ಟ್ ಫೋನ್ ನಷ್ಟ ವಿಮೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಹೊಸ 3 ಪ್ರಿಪೇಯ್ಡ್ ಡೇಟಾ ಪ್ಯಾಕ್ ಗಳ ವಿಮ ರಕ್ಷಣೆ
* ಮೊದಲನೆಯ ಪ್ರಿಪೇಯ್ಡ್ ಯೋಜನೆಯಲ್ಲಿ ನೀವು 251 ರೂಪಾಯಿಯ ರಿಚಾರ್ಜ್ ಮಾಡಿಕೊಂಡರೆ, 30 ದಿನಗಳಿಗೆ 10GB ಡೇಟಾ ಹಾಗೆ 365 ದಿನಗಳ ವರೆಗೆ ಸ್ಮಾರ್ಟ್ ಫೋನ್ ವಿಮೆಯನ್ನು ನೀಡಲಾಗುತ್ತದೆ. ವರ್ಷಕ್ಕೆ ಒಮ್ಮೆ 251 ರೂಪಾಯಿ ರಿಚಾರ್ಜ್ ಮಾಡಿದರೆ ನಿಮ್ಮ ಫೋನ್ ಇಡೀ ವರ್ಷ ಸುರಕ್ಷಿತವಾಗಿರುತ್ತದೆ.
* ಎರಡನೇ ಪ್ರಿಪೇಯ್ಡ್ ಯೋಜನೆಯಲ್ಲಿ ನೀವು 201 ರೂಪಾಯಿಯ ರಿಚಾರ್ಜ್ ಮಾಡಿಕೊಂಡರೆ, 30 ದಿನಗಳಿಗೆ 10GB ಡೇಟಾ ಆದರೆ, 180 ದಿನಗಳ ವರೆಗೆ ಮಾತ್ರ ಸ್ಮಾರ್ಟ್ ಫೋನ್ ವಿಮೆಯನ್ನು ನೀಡಲಾಗುತ್ತದೆ.
* ಇನ್ನು ಮೂರನೇ ಪ್ರಿಪೇಯ್ಡ್ ಯೋಜನೆಯಲ್ಲಿ ನೀವು 61 ರೂಪಾಯಿಯ ರಿಚಾರ್ಜ್ ಮಾಡಿಕೊಂಡರೆ, 15 ದಿನಗಳಿಗೆ 2GB ಡೇಟಾ ಆದರೆ, 30 ದಿನಗಳ ವರೆಗೆ ಮಾತ್ರ ಸ್ಮಾರ್ಟ್ ಫೋನ್ ವಿಮೆಯನ್ನು ನೀಡಲಾಗುತ್ತದೆ.
ಯೋಜನೆಯ ಷರತ್ತುಗಳು
* ನಿಮ್ಮ ಫೋನ್ Vi ನಂಬರ್ ಗೆ ಲಿಂಕ್ ಆಗಿರಬೇಕು
* ಸ್ಮಾರ್ಟ್ ಫೋನ್ 3 ವರ್ಷಕ್ಕಿಂತ ಹಳೆಯದಾಗಿರಬಾರದು
* ರಿಚಾರ್ಜ್ ಮಾಡಿದ 48 ಗಂಟೆಯ ಒಳಗೆ ABHICL ನಿಂದ SMS ಬರುತ್ತದೆ. ಅದನ್ನು ಪೂರ್ಣಗೊಳಿಸಿದರೆ ವಿಮೆ ಸಕ್ರಿಯಗೊಳ್ಳುತ್ತದೆ.
* ನಿಮ್ಮ ಸ್ಮಾರ್ಟ್ ಫೋನ್ ಕಳೆದುಹೋದರೆ, Display Damage, ನೀರು ಹಾನಿ, ಮದರ್ ಬೋರ್ಡ್ ವೈಫಲ್ಯ, ಕ್ಯಾಮೆರಾ, ಸ್ಪೀಕರ್ ಸಮಸ್ಯೆಗಳಿಗೆ 25,000 ರೂಪಾಯಿ ಪರಿಹಾರ ಸಿಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

