Vida V1 Plus: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ 27 ಸಾವಿರ ರೂ ಡಿಸ್ಕೌಂಟ್, ಆಫರ್ ಮಿಸ್ ಮಾಡಿದ್ರೆ ಸಿಗಲ್ಲ

ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ 27 ಸಾವಿರ ರೂ ಡಿಸ್ಕೌಂಟ್

Vida V1 Plus Electric Scooter Offer: ದೇಶಿಯ ಮಾರುಕಟ್ಟೆಯಲ್ಲಿ Hero MotoCorp ವಿಭಿನ್ನ ಮಾದರಿಯಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಬೇಡಿಕೆ ಹೆಚ್ಚುತ್ತಿದೆ.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂಧನ ಚಾಲಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುತ್ತಿದ್ದಾರೆ. ಇದೀಗ ನಾವು Hero ಬಿಡುಗಡೆ ಮಾಡಿರುವ Vida V1 Plus Electric Scooter ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Vida V1 Plus Electric Scooter Offer
Image Credit: Jagran

ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ 27 ಸಾವಿರ ರೂ ಡಿಸ್ಕೌಂಟ್
ಸದ್ಯ ಪ್ರಮುಖ ಈ ಕಾಮರ್ಸ್ ಕಂಪೆನಿಗಳಲ್ಲಿ ಒಂದಾದ ಫ್ಲಿಪ್ ಕಾರ್ಟ್ ಹೀರೋ ಕಂಪನಿಯ Vida V1 Plus Electric Scooter ಮೇಲೆ ಭರ್ಜರಿ ರಿಯಾಯಿತಿಯನ್ನ ಘೋಷಣೆ ಮಾಡಿದೆ. ಹೌದು ಇದೀಗ ನೀವು ಈ ಸ್ಕೂಟರ್ ಮೇಲೆ 27 ಸಾವಿರ ರೂ. ವರೆಗೆ ರಿಯಾಯಿತಿಯನ್ನ ಪಡೆದುಕೊಳ್ಳಬಹುದು. Vida V1 Plus Electric Scooter ನ ಮಾರುಕಟ್ಟೆ ಬೆಲೆ 1,19,900 ಆಗಿದೆ. ಆದರೆ ಇದೀಗ ನೀವು ಫ್ಲಿಪ್ ಕಾರ್ಟ್ ನ ಈ ಆಫರ್ ಮೂಲಕ ಕೇವಲ 92,450 ರೂಪಾಯಿಗೆ ಖರೀದಿಸಬಹುದು. SBI Credit Card ಮೂಲಕ ಖರೀದಿಸಿದಾಗ ಮಾತ್ರ ಈ ಕೊಡುಗೆ ಲಭ್ಯವಿದೆ.

Vida V1 Plus Electric Scooter
Vida V1 Plus Electric Scooter ಐದು ವರ್ಷಗಳವರೆಗೆ ವಾರಂಟಿಯೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್ ಚಾರ್ಜ್ ನಲ್ಲಿ 100 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 80 ಕಿಲೋಮೀಟರ್ ಆಗಿದೆ. ಈ ಸ್ಕೂಟರ್ ವಿವಿಧ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸ್ಕೂಟರ್‌ ಅನ್ನು ನೀವು EMI ಮೂಲಕವೂ ಸಹ ಖರೀದಿಸಬಹುದು.

Vida V1 Plus Electric Scooter
Image Credit: Techlusive

Join Nadunudi News WhatsApp Group

Join Nadunudi News WhatsApp Group