Education Loan: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ, ವಿದ್ಯಾಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ.

ವಿದ್ಯಾರ್ಥಿಗಳ ಶಿಕ್ಷಣ ಶುಲ್ಕಕ್ಕಾಗಿ ಕೇಂದ್ರ ಸರಕಾರ ವಿದ್ಯಾಲಕ್ಷ್ಮಿ ಎಜುಕೇಷನ್ ಲೋನ್ ಅನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಶಿಕ್ಷಣ ಸಾಲವನ್ನು ಸಹ ನೀಡಲಾಗುತ್ತಿದೆ.

Vidya Lakshmi Education Loan: ಸಾಮಾನ್ಯ ವರ್ಗದ ಕುಟುಂಬದ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಎಜುಕೇಷನ್ ಲೋನ್ (Education Loan) ಮಾಡುತ್ತಾರೆ. ಇದೀಗ ಸುಲಭವಾಗಿ ಎಜುಕೇಷನ್ ಲೋನ್ ಸಿಗುವ ಬಗ್ಗೆ ಮಾಹಿತಿ ಒಂದು ಹೊರ ಬಿದ್ದಿದೆ.

ಇದೀಗ ಕಾಲದಲ್ಲಿ ಎಲ್ಲವೂ ಸಹ ಹೆಚ್ಚು ದುಬಾರಿಯಾಗಿದೆ. ಹಾಗೆ ಶಿಕ್ಷಣ ವೆಚ್ಚವು ಸಹ ದುಬಾರಿಯಾಗಿದೆ. ಅದರಲ್ಲೂ ವೃತ್ತಿಪರ ಉನ್ನತ ಶಿಕ್ಷಣ ಪಡೆಯಲು ಬಹಳ ಹಣ ವ್ಯಯವಾಗುತ್ತದೆ. ವಿದೇಶಗಳಲ್ಲಿ ಕಲಿಯಬೇಕಾದರಂತು ಲಕ್ಷ ಲಕ್ಷ ಹಣ ನೀರಿನಂತೆ ಖರ್ಚಾಗಿ ಹೋಗುತ್ತದೆ. ವಿದ್ಯಾಲಕ್ಷ್ಮಿ ಎಜುಕೇಷನ್ ಲೋನ್ ಬಗ್ಗೆ ಮಾಹಿತಿ ತಿಳಿಯೋಣ.

Vidya Lakshmi Education Loan
Image Source: Mint

ವಿದ್ಯಾಲಕ್ಷ್ಮಿ ಎಜುಕೇಷನ್ ಲೋನ್
ವಿದ್ಯಾಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಅನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣ ಶುಲ್ಕಕ್ಕಾಗಿ ಕೇಂದ್ರ ಸರಕಾರ ವಿದ್ಯಾಲಕ್ಷ್ಮಿ ಎಜುಕೇಷನ್ ಲೋನ್ ಅನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಶಿಕ್ಷಣ ಸಾಲವನ್ನು ಸಹ ನೀಡಲಾಗುತ್ತಿದೆ. ವಿವಿಧ ಬ್ಯಾಂಕ್ ಗಳ ಮೂಲಕ ಸಾಲಗಳನ್ನು ಸಹ ಪಡೆಯಬಹುದು.

ವಿದ್ಯಾಲಕ್ಷ್ಮಿ ಯೋಜನೆ ಅಡಿ ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 5 ಲಕ್ಷ ರೂಗಿಂತ ಕಡಿಮೆ ಇರಬೇಕು ಎನ್ನುವ ಷರುತ್ತು ಇದೆ. ಅಂದರೆ ಕೆಳಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಈ ಯೋಜನೆಯಲ್ಲಿ ಎಜುಕೇಶನ್ ಲೋನ್ ಸಿಗುತ್ತದೆ.

Vidya Lakshmi Education Loan
Image Source: Vistara News

ವಿದ್ಯಾಲಕ್ಷ್ಮಿ ಎಜುಕೇಷನ್ ಲೋನ್ ನಲ್ಲಿ ಎಷ್ಟು ರೂಪಾಯಿಯವರೆಗೆ ಲೋನ್ ಪಡೆಯಬಹುದು
ವಿದ್ಯಾಲಕ್ಷ್ಮಿ ಯೋಜನೆಯಡಿ ಶಿಕ್ಷಣ ಸಾಲ ಪಡೆಯಲು 7.5 ಲಕ್ಷ ರೂಪಾಯಿವರೆಗೆ ಹಣಕ್ಕೆ ಯಾವುದೇ ಅಡಮಾನ ಇಡುವ ಅಗತ್ಯವಿಲ್ಲ. ಅದಕ್ಕೂ ಹೆಚ್ಚಿನ ಮೊತ್ತಕ್ಕೆ ಏನಾದರೂ ಗಿರವಿ ಇಡಬೇಕು. ಜೊತೆಗೆ ಒಬ್ಬ ಗ್ಯಾರಂಟರ್ ಕೂಡ ಸಹಿ ಹಾಕಬೇಕಾಗುತ್ತದೆ. ಇನ್ನು ಬಡ್ಡಿ ದರ ವಿಚಾರಕ್ಕೆ ವಿವಿಧ ಬ್ಯಾಂಕುಗಳ ಕನಿಷ್ಠ ಬಡ್ಡಿದರ ಅನ್ವಯ ಆಗುತ್ತದೆ. ಈಗಿನ ಸಂದರ್ಭದಲ್ಲಿ ಶಿಕ್ಷಣ ಸಾಲಗಳಿಗೆ ವಾರ್ಷಿಕ ಶೇ. 8.4ರಿಂದ ಬಡ್ಡಿ ಆರಂಭವಾಗುತ್ತದೆ.

Join Nadunudi News WhatsApp Group

Vidya Lakshmi Education Loan
Image Source: Gyandhan

Join Nadunudi News WhatsApp Group