Vidyashankara Nanda Saraswati Swamiji: ನಟ ದರ್ಶನ್ ಬಿಡುಗಡೆ ಯಾವಾಗ, ಸ್ವಾಮೀಜಿಯಿಂದ ಸ್ಪೋಟಕ ಭವಿಷ್ಯ.

ನಟ ದರ್ಶನ್ ಬಿಡುಗಡೆ ಬಗ್ಗೆ ಸ್ವಾಮೀಜಿಯಿಂದ ಸ್ಪೋಟಕ ಭವಿಷ್ಯ

Vidyashankara Nanda Saraswati Swamiji About Darshan: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಾರಿ ತಿರುವು ಪಡೆಯುತ್ತಿದೆ. ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಜುಲೈ 4 ರಂದು ನ್ಯಾಯಾಲಯ ತನಿಖೆ ನಡೆಸಿ ಮತ್ತೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶಿಸಿದೆ.

ಜುಲೈ 18 ರವರೆಗೆ ದರ್ಶನ್ ಸೇರಿದಂತೆ 17 ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಆದೇಶಿಸಿದೆ. ಸದ್ಯ ದರ್ಶನ್ ಮತ್ತೆ ಜೈಲುವಾಸ ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಎನ್ನಬಹುದು. ಸದ್ಯ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರ ಬಗ್ಗೆ ಖ್ಯಾತ ಜ್ಯೋತಿಷಿಗಳಾದ Vidyashankara Nanda Saraswati Swamiji ಅವರು ಭವಿಷ್ಯವಾಣಿ ನುಡಿದ್ದಾರೆ. 

Vidyashankara Nanda Saraswati Swamiji About Darshan
Image Credit: Oneindia

ನಟ ದರ್ಶನ್ ಬಿಡುಗಡೆ ಯಾವಾಗ
ಸಾಮಾನ್ಯವಾಗಿ ಯಾವುದೇ ವ್ಯಕ್ತಿಗೆ ಒಳಿತು ಅಥವಾ ಕೆಡುಕಾದರು ಕೂಡ ಆ ವ್ಯಕ್ತಿಯ ಗೃಹಗತಿ, ಜಾತಕದ ಬಗ್ಗೆ ಮಾತುಗಳು ಬರುವುದು ಸಹಜ. ಯಾವುದೇ ವ್ಯಕ್ತಿಯ ಕಷ್ಟದ ಪರಿಸ್ತಿದೆ ಗೃಹಗತಿಗಳೇ ಕಾರಣ ಎನ್ನುವದು ಜ್ಯೋತಿಷಿಗಳ ನಂಬಿಕೆ. ಇನ್ನು ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಬಗ್ಗೆ ವಿವಿಧ ಜ್ಯೋತಿಷಗಳು ಭವಿಷ್ಯವಾಣಿ ನುಡಿದ್ದರು. ಹಾಸನದ ಕೊಡಿ ಮಠದ ಶ್ರೀಗಳು, ಆರ್ಯವರ್ಧನ್ ಗುರೂಜಿ ಕೂಡ ದರ್ಶನ್ ಮುಂದಿನ ಭವಿಷ್ಯದ ಬಗ್ಗೆ ಭವಿಷ್ಯವಾಣಿ ನುಡಿದ್ದರು. ಈ ಎಲ್ಲರ ಭವಿಷ್ಯವಾಣಿ ಬೆನ್ನಲ್ಲೇ ಈ ಖ್ಯಾತ ಜ್ಯೋತಿಷಿ ದರ್ಶನ್ ಬಿಡುಗಡೆಯ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಸ್ವಾಮೀಜಿಯ ಭವಿಷ್ಯವಾಣಿಯ ಪ್ರಕಾರ ನಟ ದರ್ಶನ್ ಯಾವಾಗ ಬಿಡುಗಡೆ ಆಗುತ್ತಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಸ್ವಾಮೀಜಿಯಿಂದ ಸ್ಪೋಟಕ ಭವಿಷ್ಯ
ಇದೀಗ ಖ್ಯಾತ ಸ್ವಾಮಿ ವಿದ್ಯಾಶಂಕರ ನಂದ ಸರಸ್ವತಿ ಸ್ವಾಮೀಜಿ (Vidyashankara Nanda Saraswati Swamiji) ನಟ ದರ್ಶನ್ ಬಂಧನದ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಇವರ ಕುಜ ಭುಕ್ತಿ 2023 ನವೆಂಬರ್ ನಿಂದ 2024 ಅಕ್ಟೋಬರ್ ವರೆಗೆ ಇದೆ. ಅಕ್ಟೋಬರ್ ನಂತರ, ಅವರ ಜೀವನವು ಬದಲಾಗುತ್ತದೆ. ಅಕ್ಟೋಬರ್ 28 ರ ವರೆಗೆ ಅವರಿಗೆ ಜಾಮೀನು ಸಿಗುವುದಿಲ್ಲ.ಆ ನಂತರ ಅವರ ಬದುಕು ಬದಲಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 2011 ರಿಂದ ಗುರುದಶ ಆರಂಭವಾಗಿದೆ.ಅವರು ಸಾಕಷ್ಟು ಅಪವಾದ ಅನುಭವಿಸಿದ್ದಾರೆ. ಒಂದರ ಹಿಂದೆ ಒಂದರಂತೆ ವಿವಾದಗಳಿಗೆ ಸಿಲುಕುತ್ತಿದ್ದಾರೆ. ಕೆಲ ದಿನ ಜೈಲಿನಲ್ಲೂ ಇದ್ದರು ಎಂದು ಸ್ವಾಮೀಜಿ ಭವಿಷ್ಯವಾಣಿ ನುಡಿದಿದ್ದಾರೆ.

Darshan Release Prediction
Image Credit: Oneindia

Join Nadunudi News WhatsApp Group

Join Nadunudi News WhatsApp Group