ನಟಿ ವಿಜಯಲಕ್ಷ್ಮಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಅಂದರೆ ಅದೂ ನಟಿ ವಿಜಯಲಕ್ಷ್ಮಿ ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡದ ಹಲವು ನಾಯಕ ನಟರ ಜೊತೆ ಅಭಿನಯ ಮಾಡಿದ ವಿಜಯಲಕ್ಷ್ಮಿ ಅವರು ಅಂದಿನ ಕಾಲದಲ್ಲಿ ಎವರ್ ಗ್ರೀನ್ ನಟಿಯಾಗಿದ್ದರು ಎಂದು ಹೇಳಬಹುದು. ಸ್ವಸ್ತಿಕ್, ಕನಕಾಂಬರಿ ಮತ್ತು ಹೀಗೆ ಹತ್ತು ಹಲವು ಚಿತ್ರಗಳಲ್ಲಿ ನಾಯಕ ನಟಿಯಾಗಿ ಮಿಂಚಿ ದೊಡ್ಡ ಸಾಧನೆಯನ್ನ ಮಾಡಿದ ನಟಿಯರಲ್ಲಿ ನಟಿ ವಿಜಯಲಕ್ಷ್ಮಿ ಕೂಡ ಒಬ್ಬರು ಎಂದು ಹೇಳಬಹುದು. ಇನ್ನು ಬರಿ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರ ಮತ್ತು ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಸೈ ಎನಿಸಿಕೊಂಡ ನಟಿಯರು ನಟಿ ವಿಜಯಲಕ್ಷ್ಮಿ ಹೆಸರು ಕೂಡ ಇದೆ ಎಂದು ಹೇಳಬಹುದು. ಇನ್ನು ನಟಿ ವಿಜಯಲಕ್ಷ್ಮಿ ಅವರು ಅನಿವಾರ್ಯ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದರು ಎಂದು ಹೇಳಬಹುದು.
ಇನ್ನು ಚಿತ್ರರಂಗದಿಂದ ಈಗ ದೂರ ಉಳಿದಿರುವ ವಿಜಯಲಕ್ಷ್ಮಿ ಅವರು ಮಾನಸಿಕ ಬಹಳ ನೊಂದು ಹೋಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜೀವನದಲ್ಲಿ ಬಹಳ ನೋವನ್ನ ಅನುಭವಿಸಿರುವ ವಿಜಯಲಕ್ಷ್ಮಿ ಅವರು ತಮ್ಮ ಪ್ರಾಣವನ್ನ ಕೂಡ ಕಳೆದುಕೊಳ್ಳಲು ನಿರ್ಧಾರವನ್ನ ಮಾಡಿದ್ದರು ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ, ನಟಿ ವಿಜಯಲಕ್ಷ್ಮಿ ಅವರು ಈಗ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶಿವರಾಜ್ ಕುಮಾರ್ ಅವರ ಬಳಿ ಸಹಾಯಸ್ತವನ್ನ ಚಾಚಿದ್ದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ನಟಿ ವಿಜಯಲಕ್ಷ್ಮಿ ಅವರು ಶಿವರಾಜ್ ಕುಮಾರ್ ಅವರ ಬಳಿ ಸಹಾಯಸ್ತವನ್ನ ಚಾಚಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸಹೋದರಿ ಉಷಾದೇವಿ ಆರೋಗ್ಯದಲ್ಲಿ ಬಹಳ ಏರುಪೇರು ಆದಕಾರಣ ಚಿತ್ರರಂಗದ ಗಣ್ಯರು ವಿಶೇಷವಾಗಿ ಶಿವರಾಜ್ ಕುಮಾರ್ ಬಳಿ ಸಹಾಯ ಮಾಡಿ ಎಂದು ನಟಿ ವಿಜಯಲಕ್ಷ್ಮಿ ವೀಡಿಯೋ ಮಾಡಿ ಮನವಿ ಮಾಡಿದ್ದಾರೆ. ಸಹೋದರಿ ಉಷಾದೇವಿ ಆರೋಗ್ಯದಲ್ಲಿ ಬಹಳ ಏರುಪೇರು ಆಗಿದೆ, ಗರ್ಭಾಶಯದ ತೊಂದರೆಯಿಂದ ಚೆನ್ನೈ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಆದರೆ ಆ ಚಿಕಿತ್ಸೆ ಫಲಕಾರಿಯಾಗದೇ ಉಷಾರನ್ನ ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಹಣವೆಲ್ಲ ಈಗಾಗಲೇ ಚಿಕಿತ್ಸೆಗಾಗಿ ಖರ್ಚಾಗಿದೆ, ಜೊತೆಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಸದ್ಯ ನಾನು ಚನೈ ನಲ್ಲಿ ಇದ್ದೇನೆ ಮತ್ತು ಲಾಕ್ ಡೌನ್ ಮುಗಿದ ಮೇಲೆ ನಾವು ಬೆಂಗಳೂರಿಗೆ ಬರುತ್ತೇವೆ, ಮುಂದೆ ಏನು ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ, ಶಿವಣ್ಣನವರು ನನಗೆ ಸಹಾಯ ಮಾಡಿ, ಉಷಾ ಅವರ ಸ್ಥಿತಿ ಗಂಭಿರವಾಗಿದೆ ಎಂದು ಈ ಬಗ್ಗೆ ವಿಡಿಯೋ ಮಾಡಿರುವ ನಟಿ ವಿಜಯಲಕ್ಷ್ಮಿ ಶಿವರಾಜ್ ಕುಮಾರ್ ಸಹಾಯ ಕೇಳಿಕೊಂಡಿದ್ದಾರೆ. ಏನೇ ಆಗಲಿ ನಟಿ ವಿಜಯಲಕ್ಷ್ಮಿ ಸಹೋದರಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.