Vijay And Spandana: ಸ್ಪಂದನ ಹಾಗೂ ವಿಜಯ್ ನಡುವಿನ ವಯಸ್ಸಿನ ಅಂತರ ಎಷ್ಟು, ದೇವರ ಆಟಕ್ಕೆ ಬಲಿಯಾದ ಪ್ರೀತಿ.

ಪ್ರೀತಿಸಿ ಮದುವೆಯಾದ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಅವರ ವಯಸ್ಸಿನ ಅಂತರಎಷ್ಟು..?

Vijay And Spandana Age Difference: ಸ್ಪಂದನ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಅಕಾಲಿಕ ಮರಣ ಎಲ್ಲರಲ್ಲೂ ಬೇಸರ ಮೂಡಿಸಿದೆ. ಸ್ಪಂದನ ಅವರ ಕುಟುಂಬ ಇದೀಗ ದುಃಖದಲ್ಲಿದೆ. ನಟ ವಿಜಯ್ ರಾಘವೇಂದ್ರ (Vijay Raghavendra)  ಅವರು ತಮ್ಮ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ.

ಬೆಸ್ಟ್ ಜೋಡಿಯಾಗಿ ಗುರಿತಿಸಿಕೊಂಡಿದ್ದ ಸ್ಪಂದನ ಹಾಗೂ ವಿಜಯ್ ಇತರ ಜೋಡಿಗೆ ಮಾದರಿಯಾಗಿದ್ದರು. ಆದರೆ ಸ್ಪಂದನ ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ನಿಧನ ಹೊಂದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

Vijay And Spandana Age Difference
Image Credit: Newsbugz

ವಿಜಯ್ ಪತ್ನಿ ಸ್ಪಂದನ ಅಕಾಲಿಕ ಮರಣ
ಇನ್ನು ಸ್ಪಂದನ ಅವರು ಬ್ಯಾಂಕಾಕ್ ಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಕೆಲಸದ ನಿಮಿತ್ತ ತೆರಳಿದ್ದರು. ಈ ವೇಳೆ ಆಗಸ್ಟ್ 6 ರ ಸಂಜೆ ಸ್ಪಂದನ ತೀವ್ರ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಗಿದ್ದರು. ಮರು ದಿನ ಮುಂಜಾನೆ ಸ್ಪಂದನ ಅವರು ಹೃದಯಾಘಾತದಿಂದ ಮೃತ ಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ.

ಲೋ ಬಿಪಿಯಿಂದಾಗಿ ಸ್ಪಂದನ ನಿಧನ ಹೊಂದಿರುವುದಾಗಿ ಮಾಹಿತಿ ಲಭಿಸಿದೆ. ನಿಜಕ್ಕೂ ಸ್ಪಂದನ ಅವರದ್ದು ಸಾಯುವ ವಯಸ್ಸಲ್ಲ. ಬದುಕಿ ಬಾಳಬೇಕಾದವರು ಚಿಕ್ಕ ವಯಸ್ಸಿನಲ್ಲೇ ಹೃಯದಯಾಘಾತದಿಂದ ಮೃತಪಟ್ಟಿದ್ದಾರೆ.

ವಿಜಯ್ ಹಾಗೂ ಸ್ಪಂದನ ದಾಂಪತ್ಯ ಜೀವನ
ವಿಜಯ್ ಹಾಗೂ ಸ್ಪಂದನ 2016 ಆಗಸ್ಟ್ 26 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸ್ಪಂದನ ಹಾಗೂ ವಿಜಯ್ ದಾಂಪತ್ಯ ಜೀವನ 15 ವರ್ಷ ಪೂರೈಸಿದೆ. ಇನ್ನು ವಿಜಯ್ ಸ್ಪಂದನ ಅವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಲವ್ ಕಮ್ ಅರೇಂಜ್ ಮ್ಯಾರಿಯೇಜ್ ಆಗಿದ್ದಾರೆ. ಈ ದಂಪತಿಗೆ ಮುದ್ದಾದ ಶೌರ್ಯ ಹೆಸರಿನ ಮಗ ಇದ್ದಾನೆ. ಇನ್ನು ಸ್ಪಂದನ ಹಾಗು ವಿಜಯ್ ಪ್ರೇಮ ಕಹಾನಿ ಕಾಫಿ ಡೇ ನಲ್ಲಿ ಪ್ರಾರಂಭವಾಗಿದೆ.

Join Nadunudi News WhatsApp Group

Vijay Spandana's love story started on Coffee Day
Image Credit: Newsbugz

ಕಾಫಿ ಡೇ ನಲ್ಲಿ ಪ್ರಾರಂಭವಾಗಿದೆ ವಿಜಯ್ ಸ್ಪಂದನ ಲವ್ ಸ್ಟೋರಿ
ಮಲ್ಲೇಶ್ವರಂನ ಕಾಫಿಡೇ ನಲ್ಲಿ ಸ್ಪಂದನ ಅವರನ್ನು ನೋಡಿದ ತಕ್ಷಣ ವಿಜಯ್ ಅವರಿಗೆ ಪ್ರೀತಿ ಹುಟ್ಟಿತ್ತು. ನಂತರ ಕೆಲವು ಬಾರಿ ಭೇಟಿಯಾಗಿ ಸ್ನೇಹಿತರಾಗಿದ್ದರು. ನಂತರ ವಿಜಯ್ ಸ್ಪಂದನಾಗೆ ಪ್ರೀತಿಯನ್ನು ಹೇಳಿಕೊಂಡಾಗ ಸ್ಪಂದನ ವಿಜಯ್ ಪ್ರೀತಿಯನ್ನು ಒಪ್ಪಿಕೊಂಡಿದ್ದರು.

ಇನ್ನು ಸ್ಪಂದನ ನಿವೃತ್ತ ಪೊಲೀಸ್ ಅಧಿಕಾರಿಯ ಮಗಳಾಗಿದ್ದಾರೆ. ಎರಡು ಕುಟುಂಬದವರು ಈ ಇಬ್ಬರ ಪ್ರೀತಿಯನ್ನು ಒಪ್ಪಿ ಅದ್ದೂರಿಯಾಗಿ ಮದುವೆ ನೆರವೇರಿಸಿದ್ದರು. ಇನ್ನು ಈ ಜೋಡಿ ಬಹಳ ಅನ್ಯೋನ್ಯವಾಗಿದ್ದರು. ರಿಯಾಲಿಟಿ ಶೋಗಳಲ್ಲಿ ವಿಜಯ್ ಸ್ಪಂದನ ಅವರನ್ನು ಹೋಗುಳುತ್ತಲೇ ಇರುತ್ತಾರೆ.

Age gap between Spandana and Vijay
Image Credit: Wikimylinks

ಸ್ಪಂದನ ಹಾಗೂ ವಿಜಯ್ ನಡುವಿನ ವಯಸ್ಸಿನ ಅಂತರ
ಇನ್ನು ಸ್ಪಂದನ ಅವರಿಗೆ ಇದೀಗ 36 ವರ್ಷ. ಸ್ಪಂದನ ಅವರು ತಮ್ಮ 36 ವಯಸ್ಸಿನಲ್ಲೇ ಮೃತಪಟ್ಟಿದ್ದಾರೆ. ಇನ್ನು ವಿಜಯ್ ರಾಘವೇಂದ್ರ ಅವರು 1979 ರಲ್ಲಿ ಜನಿಸಿದ್ದು ಇವರಿಗೆ 44 ವರ್ಷವಾಗಿದೆ. ಇನ್ನು ವಿಜಯ್ ಹಾಗೂ ಸ್ಪಂದನ ಅವರ ನಡುವೆ 8 ವರ್ಷಗಳ ವಯಸ್ಸಿನ ಅಂತರವಿದೆ. ಇನ್ನು ಸ್ಪಂದನ ನನಗೆ ತಾಯಿ ಪ್ರೀತಿಯನ್ನು ನೀಡಿದ್ದಾಳೆ ಎಂದು ವಿಜಯ್ ಹೇಳಿಕೊಂಡಿದ್ದರು. ಆದರೆ ವಿಜಯ್ ಹಾಗು ಸ್ಪಂದನ ಬಾಳಲ್ಲಿ ವಿಧಿ ಆಟವಾಡಿದೆ. ಇನ್ನು ಹಲವು ವರ್ಷ ಜೊತೆಯಾಗಿರಬೇಕಾಗಿದ್ದ ಈ ಜೋಡಿ ಮಧ್ಯದಲ್ಲೇ ಬೇರೆಯಾಗಿದ್ದಾರೆ. ವಿಜಯ್ ಅವರಿಗೆ ತಮ್ಮ ಪತ್ನಿಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ.

Join Nadunudi News WhatsApp Group