Ads By Google

Rashmika Marriage: ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆ ಫಿಕ್ಸ್, ಮುಹೂರ್ತ ಫಿಕ್ಸ್ ಗೆ ಕ್ಷಣಗಣನೆ.

Vijay Devarakonda And Rashmika Mandanna Marriage

Image Credit: navbharattimes

Ads By Google

Vijay Devarakonda And Rashmika Mandanna Marriage: ಸದ್ಯ ಟಾಲಿವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರುಕೊಂಡ (Vijay Devarakonda) ಲವ್ ಗಾಸಿಪ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸದ್ಯ ವಿಜಯ್ ದೇವರುಕೊಂಡ ಹಾಗೂ ಸಮಂತಾ ನಟನೆಯಾ ಖುಷಿ ಚಿತ್ರ ಸದ್ಯದಲ್ಲೇ ತೆರೆ ಮೇಲೆ ಬರಲಿದ್ದು ವಿಜಯ್ ದೇವರುಕೊಂಡ ಹಾಗೂ ಸಮಂತಾ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರುಕೊಂಡ ನಡುವಿನ ಡೇಟಿಂಗ್ ವಿಚಾರ ಎಲ್ಲರಿಗು ತಿಳಿದಿರುವುದೇ. ಇತ್ತೀಚಿಗೆ ರಶ್ಮಿಕಾ ಬದಲಾಗಿ ಸಮಂತಾ ವಿಚಾರವಾಗಿ ವಿಜಯ್ ದೇವರುಕೊಂಡ ಸುದ್ದಿಯಾಗುತ್ತಿದ್ದರು. ಇತ್ತೀಚೆಗಷ್ಟೇ ಸಮಂತಾ ಹಾಗೂ ವಿಜಯ್ ದೇವರುಕೊಂಡ ವಿಡಿಯೋ ಕಾಲ್ ವೈರಲ್ ಆಗಿತ್ತು.

ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರುಕೊಂಡ ಲವ್ ಸ್ಟೋರಿಗೆ ಫುಲ್ ಸ್ಟಾಪ್ ಬೀಳಲಿದೆ ಎನ್ನುವಷ್ಟರಲ್ಲಿ ಮತ್ತೆ ಹೊಸ ಗಾಸಿಪ್ ಹರಿದಾಡುತ್ತಿದೆ. ವಿಜಯ್ ದೇವರುಕೊಂಡ ರಶ್ಮಿಕಾ ಜೊತೆ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

Image Credit: News18

ರಶ್ಮಿಕಾ ಜೊತೆ ಮದುವೆಗೆ ರೆಡಿಯಾದ ವಿಜಯ್ ದೇವರುಕೊಂಡ
ಸದ್ಯ ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರುಕೊಂಡ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ. ವಿಜಯ್ ದೇವರುಕೊಂಡ ಕೈಹಿಡಿಯುವ ಹುಡುಗಿ ಯಾರು ಎನ್ನುವ ಬಗ್ಗೆ ಅಭಿಮಾನಿಗಳು ಬಾರಿ ಕುತೂಹಲರಗಿದ್ದಾರೆ. ಇದೀಗ ವಿಜಯ್ ದೇವರುಕೊಂಡ ಅವರ ಪೋಸ್ಟ್ ಅವರ ಮದುವೆಯ ಸುದ್ದಿಗೆ ಹೊಸ ಟ್ವಿಸ್ಟ್ ನೀಡಿದೆ. ಸದ್ಯದಲ್ಲೇ ವಿಜಯ್ ದೇವರುಕೊಂಡ ತಾವು ಮದುವೆಯಾಗುವ ಹುಡುಗಿಯನ್ನು ಪರಿಚಯಿಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಕುತೂಹಲ ಮೂಡಿಸುತ್ತಿದೆ ವಿಜಯ್ ದೇವರುಕೊಂಡ ಪೋಸ್ಟ್
ವಿಜಯ್ ದೇವರುಕೊಂಡ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹುಡುಗಿಯ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಜಯ್ ದೇವರುಕೊಂಡ ಅವರ ಕೈ ಸ್ಪಷ್ಟವಾಗಿ ಕಾಣಿಸುತ್ತಿದ್ದರು ಹುಡುಗಿ ಯಾರೆನ್ನುವ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಹೀಗೆ ಫೋಟೋ ಹಂಚಿಕೊಳ್ಳುವುದರ ಜೊತೆಗೆ ನಟ, ಜೀವನದಲ್ಲಿ ಬಹಳಷ್ಟು ನಡೆಯುತ್ತಿದೆ. ಆದರೆ ಇದು ತುಂಬಾ ವಿಶೇಷ! ಶೀಘ್ರವೇ ಪ್ರಕಟಿಸಲಾಗುವುದು ಎಂದು ಕ್ಯಾಪ್ಷನ್ ನೀಡಿದ್ದಾರೆ.

Image Credit: Tollywood

ಫಿಕ್ಸ್ ಆಯ್ತಾ ರಶ್ಮಿಕಾ ಹಾಗೂ ವಿಜಯ್ ದೇವರುಕೊಂಡ ಮದುವೆ
ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರುಕೊಂಡ ಲವ್ ಸ್ಟೋರಿ ವೈರಲ್ ಆಗುತ್ತಿರುವ ಕಾರಣ ಆ ಯುವತಿಯ ಕೈ ರಶ್ಮಿಕಾ ಅವರದ್ದೇ ಇರಬಹುದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರುಕೊಂಡ ಮದುವೆ ಶೀಘ್ರದಲ್ಲೇ ಫಿಕ್ಸ್ ಆಗಲಿದೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಸದ್ಯ ವಿಜಯ್ ದೇವರುಕೊಂಡ ಅವರ ಪೋಸ್ಟ್ ಬಾರಿ ಸಂಚಲನ ಮೂಡಿಸಿತ್ತು ಅವರೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field