Samantha Video Call: ಮಧ್ಯರಾತ್ರಿ ಸಮಂತಾಗೆ ವಿಡಿಯೋ ಕಾಲ್ ಮಾಡಿದ ವಿಜಯ್ ದೇವರಕೊಂಡ, ಕಾಲ್ ನಲ್ಲಿ ಹೇಳಿದ್ದೇನು…?

ಮಧ್ಯರಾತ್ರಿ ಸಮಂತಾಗೆ ವಿಡಿಯೋ ಕಾಲ್ ಮಾಡಿದ ವಿಜಯ್ ದೇವರಕೊಂಡ.

Samantha And Vijay Devarakonda Video Call: ಸದ್ಯ ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ (Vijay Devarakonda) ಹಾಗೂ ಸಮಂತಾ (Samantha Ruth Prabhu) ನಟನೆಯ ಖುಷಿ ಮೂವಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಜೋಡಿ ಇದೀಗ ಬಾರಿ ಸುದ್ದಿಯಾಗಿದ್ದಾರೆ. ನಟ ವಿಜಯ್ ದೇವರಕೊಂಡ ಅವರು ಹೆಚ್ಚಾಗಿ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಅವರ ವಿಚಾರವಾಗಿ ಸದಾ ವೈರಲ್ ಆಗುತ್ತಾರೆ. ಆದರೆ ಇತ್ತೀಚಿಗೆ ನಟಿ ಸಮಂತಾ ಅವರ ವಿಚಾರವಾಗಿ ಹೈಲೈಟ್ ಆಗುತ್ತಿದ್ದಾರೆ.

ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಭಾವಿ ಪತ್ನಿಯ ಬಗ್ಗೆ ಸಮಂತಾ ಮಾತನಾಡಿದ್ದರು. ಈ ಸುದ್ದಿ ಬಾರಿ ವೈರಲ್ ಆಗಿತ್ತು. ಇದೀಗ ಸಮಂತಾ ಹಾಗೂ ವಿಜಯ್ ದೇವರಕೊಂಡ ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ.

Samantha And Vijay Devarakonda Vedio Call
Image Source: Newstap

ಖುಷಿ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್
ಇನ್ನು ನಟ ವಿಜಯ್ ದೇವರಕೊಂಡ ಅವರು ನಟಿ ಸಮಂತಾ ಅವರ ಜೊತೆ ಖುಷಿ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರುವ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿದಿದೆ. ಈಗಾಗಲೇ ಖುಷಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಖುಷಿ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ಸಮಂತಾ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಖುಷಿ ಚಿತ್ರದ ಒಂದಿಷ್ಟು ಪೋಸ್ಟರ್ ಗಳು ವೈರಲ್ ಆಗುತ್ತಿದೆ. ಖುಷಿ ಟ್ರೈಲರ್ ಕೂಡ ರಿಲೀಸ್ ಆಗಿದ್ದು ಸೆಪ್ಟೆಂಬರ್ 1 ರಂದು ಖುಷಿ ಚಿತ್ರ ಅದ್ದೂರಿಯಾಗಿ ತೆರೆ ಕಾಣಲಿದೆ. ಇದೀಗ ಅಮೆರಿಕದಲ್ಲಿರುವ ಸಮಂತಾ ಅವರಿಗೆ ವಿಜಯ್ ದೇವರಕೊಂಡ ವಿಡಿಯೋ ಕಾಲ್ ಮಾಡಿ ಮಿಸ್ ಯು ಹೇಳಿದ್ದಾರೆ ಎನ್ನುವ ಬಗ್ಗೆ ಸುದ್ದಿಯಾಗಿದೆ. ಸಮಂತಾ ಹಾಗೂ ವಿಜಯ್ ದೇವರಕೊಂಡ ವಿಡಿಯೋ ಕಾಲ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Samantha And Vijay Devarakonda Vedio Call
Image Source: Filmibeat

ಮಧ್ಯರಾತ್ರಿ ಸಮಂತಾಗೆ ವಿಡಿಯೋ ಕಾಲ್ ಮಾಡಿದ ವಿಜಯ್ ದೇವರಕೊಂಡ
ಅಮೇರಿಕ್ದಲ್ಲಿರುವ ಸಮಂತಾಗೆ ಹೈದರಬಾದ್ ನಲ್ಲಿರುವ ವಿಜಯ್ ದೇವರಕೊಂಡ ಅವರು ವಿಡಿಯೋ ಕಾಲ್ ಮಾಡಿ ಮಧ್ಯರಾತ್ರಿ ಮಾತನಾಡಿದ್ದಾರೆ. ಕಾಲ್ ರಿಸೀವ್ ಮಾಡಿ ಸಮಂತಾ ವಾಟ್ಸ್ ಅಪ್, ಎಲ್ಲವು ಓಕೆನಾ ಎಂದಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ಮಿಸ್ ಯು ಎಂದು ಉತ್ತರಿಸಿದ್ದಾರೆ. ವಿಜಯ್ ಮಾತಿಗೆ ಸಮಂತಾ ನಾಚಿಕೊಂಡಿದ್ದಾರೆ. ಈ ವೇಳೆ ವಿಜಯ್ ನನ್ನ ಬಳಿ ಒಂದು ನಾಕ್ ನಾಕ್ ಜೋಕ್ ಇದೆ ಎಂದಿದ್ದಾರೆ.

Join Nadunudi News WhatsApp Group

ಅಮೇರಿಕಾದಲ್ಲಿ ಈಗ ಸಮಯ ಎಷ್ಟು ಗೊತ್ತೇ? ನಿನ್ನದು ಜೋಕ್ ಆ, ಬೇಗ ಹೇಳು ಎಂದು ಸ್ಯಾಮ್ ಹೇಳಿದ್ದಾರೆ. ವಿಜಯ್ ದೇವರಕೊಂಡ ನಾಕ್ ನಾಕ್ ಎಂದ ಸಮಯದಲ್ಲಿ ಸಮಂತಾ ಯಾರದು? ಎಂದಿದ್ದಾರೆ. ಆಗ ವಿಜಯ್ ದೇವರಕೊಂಡ ನಾ ರೋಜಾ ನುವ್ವೆ ಸಾಂಗ್ ಹಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ವಿಡಿಯೋ ಕಾಲ್ ಸುದ್ದಿ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group