Ads By Google

Vijay Kiragandur: ಪಠಾಣ್ ವಿವಾದದ ಕುರಿತು ಮಾತನಾಡಿದ ವಿಜಯ ಕಿರಂಗದೂರು, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು .

Vijay Kiragandur| Vijay Kiragandur Spoke About Pathan Bikini Controversy

Image Credit: Times Now

Ads By Google

Vijay Kiragandur Spoke About Pathan Bikini Controversy: ಇದೀಗ ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಸುದ್ದಿಯಲ್ಲಿದೆ.

ಪಠಾಣ್ ಚಿತ್ರದಲ್ಲಿರುವ ಬೇಷ ರಂಗ್ ಹಾಡನ್ನು ಬಾಯ್ಕಾಟ್ ಮಾಡುವಂತೆ ಹಿಂದೂ ಪರ ಹೋರಾಟಗಾರರು ದ್ವನಿ ಎತ್ತಿದ್ದಾರೆ. ಹಾಗೆಯೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಪಠಾಣ್ ವಿವಾದ ಬಗ್ಗೆ ಕಾಂತಾರ ಚಿತ್ರದ ನಿರ್ಮಾಪಕ ಪ್ರತಿಕ್ರಿಯಿಸಿದ್ದಾರೆ.

Image Credit: Times Now

ಪಠಾಣ್ ಚಿತ್ರದ ಬಿಕಿನಿ ವಿವಾದ
ಪಠಾಣ್ ಚಿತ್ರದಲ್ಲಿರುವ ಬೇಷ ರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯನ್ನು ಧರಿಸಿದ್ದರಿಂದ ಆ ಹಾಡಿನಲ್ಲಿರುವ ಸಾಹಿತ್ಯವು ಕೇಸರಿ ಬಣ್ಣಕ್ಕೆ ಅವಮಾನವಾಗುವ ರೀತಿಯಲ್ಲಿ ಇದೆ, ಆದ್ದರಿಂದ ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡಬೇಕೆಂದು ಹಿಂದೂ ಪರ ಹೋರಾಟಗಾರರು ಕಿಡಿಕಾರಿದ್ದಾರೆ. ಈ ವಿವಾದದ ಬಗ್ಗೆ  ಕಾಂತಾರ ಚಿತ್ರದ ನಿರ್ಮಾಪಕ ಪ್ರತಿಕ್ರಿಯಿಸಿದ್ದಾರೆ.
 
ವಿಜಯ ಕಿರಂಗದೂರು (Vijay Kiragandur)  ನೀಡಿದ ಹೇಳಿಕೆ
ಇದೆಲ್ಲ ವಿವಾದವು ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಬರುವ ಪಾರ್ಸೆಲ್ ಆಗಿದೆ. ನಾವು ಖಂಡಿತವಾಗಿಯೂ ಸಿನಿಮಾ ಮಾಡುವಾಗ ಅದರ ಬಗ್ಗೆ ಸಾಕಷ್ಟು ತಿಳಿದುಕೊಂಡು ಮಾಡುತ್ತೇವೆ ಎಂದಿದ್ದಾರೆ.

Image Credit: Times Now

ವಿಜಯ ಕಿರಂಗದೂರು ಹೇಳಿದ ಕಿವಿಮಾತು
ಪ್ರೇಕ್ಷಕರ  ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಡಾಟಾವನ್ನು ನಂಬುತ್ತೇವೆ. ಸಂಶೋಧನೆ ಮಾಡುತ್ತೇವೆ. ಆಚಾರ- ವಿಚಾರ, ಸಂಸ್ಕ್ರತಿ ಅಥವಾ ರಾಜಕೀಯದ ಬಗ್ಗೆ ಭಾವನೆಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ. ವಿವಾದಾತ್ಮಕವಾದದನ್ನು ಮಾಡಬೇಡಿ ಎಂದು ನಾವು ನಮ್ಮ ನಿರ್ದೇಶಕರಿಗೆ ಹೇಳುತ್ತೇವೆ ಎಂದಿದ್ದಾರೆ.

Image Credit: Times Now

ಪಠಾಣ್ ವಿವಾದದ ಕುರಿತು ಮಾತನಾಡಿದ ವಿಜಯ ಕಿರಂಗದೂರು
ಪಠಾಣ್ ವಿವಾದದ ಕುರಿತು ಮಾತನಾಡಿದ ವಿಜಯ ಕಿರಂದೂರು ಅವರು ಮಾತನಾಡಿದ್ದಾರೆ, ಕಾಂತಾರದಲ್ಲೂ ಜಾತಿ ವ್ಯವಸ್ಥೆಯ ವಿವಾದವಿತ್ತು. ಮಾತನಾಡುವ ಜನರು ಇರುತ್ತಾರೆ. ನಾವು ಪ್ರತಿಯೊಬ್ಬ ವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ನಾವು ನಮ್ಮ ಪಾತ್ರವನ್ನು ಮಾಡುತ್ತೇವೆ. ಸಿನಿಮಾವೇ ಮಾತನಾಡಲಿ ಎಂದು ಸುಮ್ಮನೆ ಬಿಡುತ್ತೇವೆ. ನಾವು ನಮ್ಮ ಕಥೆಯನ್ನು ಒಳ್ಳೆಯ ಉದ್ದೇಶದಿಂದ ಹೇಳುವುದು ಕೆಲಸದ ಮೇಲೆ ನಮ್ಮ ಗಮನ ಕೇಂದ್ರೀಕರಿಸುತ್ತೇವೆ ಎಂದಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field