Vijay Raghavendra: ಅಗಲಿದ ಮುದ್ದಿನ ಹೆಂಡತಿಗೆ ಭಾವನಾತ್ಮಕ ಪತ್ರ ಬರೆದ ವಿಜಯ್ ರಾಘವೇಂದ್ರ, ಪತ್ರ ಕಂಡು ಭಾವುಕರಾದ ಫ್ಯಾನ್ಸ್.
ಪತ್ನಿಯ ಅಗಲಿಕೆಯ ನೋವಿನಲ್ಲಿರುವ ವಿಜಯ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Vijay Raghavendra Viral Vedio: ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಅಗಲಿಕೆ ಕನ್ನಡಿಗರಿಗೆ ಬೇಸರ ನೀಡಿದೆ. ತಮ್ಮ ಪ್ರೀತಿಯ ಪತ್ನಿಯ ಅಗಲಿಕೆಯಿಂದಾಗಿ ನಟ ವಿಜಯ್ ರಾಘವೇಂದ್ರ ಅವರು ಕಂಗಾಲಾಗಿದ್ದಾರೆ. ಸ್ಪಂದನ ಅವರ ಅಗಲಿಕೆಯ ನೋವು ರಾಘು ಅವರನ್ನು ಇಂದಿಗೂ ಕಾಡುತ್ತಿರುತ್ತದೆ.
ಸ್ಪಂದನ ಹಾಗೂ ವಿಜಯ್ ಪ್ರೀತಿಯ ಮಗನಾದ ಶೌರ್ಯ ಅಮ್ಮನ ನೆನಪಿನಲ್ಲಿ ಕೊರಗುತ್ತಿದ್ದಾನೆ. ಇನ್ನು ಸ್ಪಂದನ ಅವರು ನಮ್ಮೆಲ್ಲರನ್ನೂ ಅಗಲಿ ಇಂದಿಗೆ 13 ದಿನಗಳು ಆಗಿವೆ. ಇನ್ನು ಸ್ಪಂದನ ಅವರು ಬದುಕಿದ್ದಾಗ ಬಹಳ ಪ್ರೀತಿಯಿಂದ ತಮ್ಮ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಸ್ಪಂದನ ಅವರ ಆಸೆಗಳು ಇನ್ನು ಕೊಡ ಈಡೇರದೆ ಹಾಗೆಯೇ ಉಳಿದಿದೆ. ಶೌರ್ಯನ್ನು ಹೀರೋ ಮಾಡಬೇಕೆನ್ನುವುದು ಸ್ಪಂದನ ಅವರ ಆಸೆಯಾಗಿತ್ತು.
ಶೌರ್ಯರನ್ನು ಹೀರೋ ಮಾಡುವ ಮೂಲಕ ರಾಘು ತಮ್ಮ ಪತ್ನಿಯ ಆಸೆಯನ್ನು ಈಡೇರಿಸಬೇಕಿದೆ. ಸ್ಪಂದನ ಅವರ ಅಕಾಲಿಕ ಮರಣಕ್ಕೆ ಇಡೀ ಚಂದನವನವೇ ಕಣ್ಣೀರಿಟ್ಟಿದೆ. ಬಾರದ ಲೋಕಕ್ಕೆ ತೆರಳಿರುವ ಸ್ಪಂದನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರು ಕೋರುತ್ತಿದ್ದಾರೆ.
ಪ್ರೀತಿಯ ಪತ್ನಿಯ ಅಗಲಿಕೆಯ ನೋವಿನಲ್ಲಿ ಚಿನ್ನಾರಿ ಮುತ್ತ
2007 ಆಗಸ್ಟ್ 26 ರಂದು ವಿಜಯ್ ರಾಘವೇಂದ್ರ ಅವರು ಸ್ಪಂದನ ಅವರನ್ನು ಮದುವೆಯಾಗಿದ್ದರು. ಈ ಜೋಡಿ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಸಪ್ತಪದಿ ತುಳಿದಿದ್ದರು. 16 ವರ್ಷ ಅನ್ಯೋನ್ಯ ಜೀವನ ನಡೆಸಿದ ಸ್ಪಂದನ- ವಿಜಯ್ ಬಾಳಲ್ಲಿ ವಿಧಿ ಆಟವಾಡಿದೆ.
View this post on Instagram
ಜೀವನ ಪೂರ್ತಿ ಬಾಳಿ ಬದುಕಬೇಕಿದ್ದ ಸ್ಪಂದನ ಅರ್ಧದಲ್ಲೇ ವಿಜಯ್ ಅವರನ್ನು ಬಿಟ್ಟು ಬಾರದ ಲೋಕಕೆ ಹೋಗಿದ್ದಾರೆ. ಸ್ಪಂದನ ಅಗಲಿಕೆಯಿಂದಾಗಿ ವಿಜಯ್ ಬಾರಿ ನೋವನ್ನು ಅನುಭವಿಸುತ್ತಿದ್ದಾರೆ. ವಿಜಯ್ ಅವರ ನೋವು ಊಹೆಗು ಸಿಗದಂತಾಗಿದೆ. ಪತ್ನಿಯ ಅಗಲಿಕೆಯ ನೋವಿನಲ್ಲಿರುವ ವಿಜಯ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಮುದ್ದಿನ ಹೆಂಡತಿಗೆ ಭಾವನಾತ್ಮಕ ವಿಡಿಯೋ ಮಾಡಿದ ವಿಜಯ್ ರಾಘವೇಂದ್ರ
ತಮ್ಮ ಮಡದಿಯ ಅಗಲಿಕೆಯ ನೋವನ್ನು ವಿಡಿಯೋ ಮುಕಾಂತರ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ಭಾವುಕತೆಯನ್ನು ನೋಡಿ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ವಿಜಯ್ ತಮ್ಮ ಪತ್ನಿಗೆ ಮಾಡಿದ ವಿಡಿಯೋ ಎಲ್ಲರ ಮನಮುಟ್ಟುವಂತಿದೆ.
“ಸ್ಪಂದನ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲವರ. ನಾನೆಂದು ನಿನ್ನವ, ಕೇವಲ ನಿನ್ನವ”. ಎಂದು ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.