Spandana: ನಟ ವಿಜಯ್ ರಾಘವೇಂದ್ರ ಪತ್ನಿ ಇನ್ನಿಲ್ಲ, ಬ್ಯಾಂಕಾಕ್ ನಲ್ಲಿ ಸ್ಪಂಧನ ವಿಜಯ್ ರಾಘವೇಂದ್ರ ನಿಧನ.

ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ವಿಜಯ್ ರಾಘವೇಂದ್ರ ಪತ್ನಿ.

Vijay Raghavendra Wife Spandana Death: ಚಿನ್ನಾರಿ ಮುತ್ತ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ವಿಜಯ್ ರಾಘವೇಂದ್ರ (Vijay Raghavendra ) ಅವರು ಕನ್ನಡಿಗರಿಗೆ ಚಿರ ಪರಿಚಿತರಾಗಿದ್ದಾರೆ.

ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಿರುವ ವಿಜಯ್ ರಾಘವೇಂದ್ರ ಅವರಿಗೆ ಇದೀಗ ನುಂಗಲಾರದ ನೋವು ಸಂಭವಿಸಿದೆ. ವಿಜಯ್ ಅವರ ಪತ್ನಿ ಸ್ಪಂದನ (Spandana) ಅಕಾಲಿಕ ಮರಣ ಹೊಂದಿದ್ದಾರೆ. ಪತ್ನಿಯ ಮರಣದಿಂದಾಗಿ ನಟ ವಿಜಯ್ ಕಂಗಾಲಾಗಿದ್ದಾರೆ.

Actor Vijay Raghavendra's wife died of a heart attack
Image Credit: veethi

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನ
ಕನ್ನಡ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ಗೆ ಪ್ರವಾಸಕ್ಕೆ ಹೋದ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ. ಲೋ ಬಿಪಿ ಹಾಗೂ ಹೃದಯಾಘಾತ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಸ್ಪಂದನ ಅವರ ಮರಣದ ಬಗ್ಗೆ ಇನ್ನೇನು ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಸ್ಪಂದನ ಅವರ ಅಕಾಲಿಕ ಮರಣ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಇತ್ತೀಚಿಗೆ ಹೆಚ್ಚುತ್ತಿದೆ ಹೃದಯಾಘಾತದ ಮರಣ
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಅನೇಕ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಕೂಡ ಹೃದಯಾಘಾತದಿಂದ ಮೃತ ಪಟ್ಟಿದ್ದರು.

vijay raghavendra wife spandana death
Image Credit: TV9kannada

ಇದೀಗ ರಾಜ್ ಕುಟುಂಬದಲ್ಲಿ ಒಬ್ಬರಾದ ವಿಜಯ್ ಪತ್ನಿ ಕೂಡ ಹೃದಯಾಘಾತದಿಂದ ಮರಣಹೊಂದಿರುವುದು ವಿಜಯ್ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ವಿಜಯ್ ಅವರಿಗೆ ತಮ್ಮ ಪತ್ನಿ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

Join Nadunudi News WhatsApp Group

ವಿಜಯ್ ಜೊತೆ ನಟಿಸಿದ್ದರು ಸ್ಪಂದನ
ಇನ್ನು ವಿಜಯ್ ಅವರು 2007 ಆಗಸ್ಟ್ 26 ರಂದು ಸ್ಪಂದನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಶೌರ್ಯ ಹೆಸರಿನ ಮುದ್ದಾದ ಮಗ ಇದ್ದಾನೆ. ಇನ್ನು ವಿಜಯ್ ಹಾಗೂ ಸ್ಪಂದನ ಅನ್ಯೋನತೆಯನ್ನು ವಿಜಯ್ ರಿಯಾಲಿಟಿ ಶೋ ಗಳಲ್ಲಿ ಹೇಳಿಕೊಂಡಿದ್ದರು.

ಇನ್ನು 2016 ರಲ್ಲಿ ಸ್ಪಂದನ ಅವರು ರವಿಚಂದ್ರನ್ ನಿರ್ದೇಶನದ ಅಪೂರ್ವ ಚಿತ್ರದಲ್ಲಿ ವಿಜಯ್ ಪತ್ನಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಇವರು ಕನ್ನಡಿಗರಿಗೆ ಪರಿಚಯವಾಗಿದ್ದರು. ಇದೀಗ ಸ್ಪಂದನ ಅವರ ಅಕಾಲಿಕ ಮರಣ ಎಲ್ಲರಿಗೂ ಶಾಕ್ ಆಗುವಂತೆ ಆಗಿದೆ.

Join Nadunudi News WhatsApp Group