Spandana Death: ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಸ್ಪಂದನ ಕೊನೆಯದಾಗಿ ಮನೆಯವರಿಗೆ ಹೇಳಿದ್ದೇನು, ಕಣ್ಣೀರಿನಲ್ಲಿ ಕುಟುಂಬ.
ಸ್ಪಂದನ ಆಡಿದ ಮಾತುಗಳನ್ನ ನೆನೆದು ಭಾವುಕರಾದ ಕುಟುಂಬ.
Vijay Raghavendra Wife Spandana: ವಿಜಯ್ (Vijay Raghavendra) ಪತ್ನಿ ಸ್ಪಂದನ (Spandana) ಅವರ ಸಾವಿನ ಸುದ್ದಿ ಎಲ್ಲರಿಗು ಆಘಾತ ನೀಡಿದೆ. ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ.
ಸ್ಪಂದನ ನಿಧನದ ಕಾರಣ ಇಡೀ ಕುಟುಂಬ ನೋವಿನಲ್ಲಿದೆ. ಇನ್ನು ಸ್ಪಂದನ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿಯುತ್ತಿದ್ದಾರೆ. ಪ್ರವಾಸದಲ್ಲಿದ್ದ ಸ್ಪಂದನ ಅನಿರೀಕ್ಷಿತ ಸಾವು ಕಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಅಕಾಲಿಕ ಮರಣ ಹೊಂದಿದ ವಿಜಯ್ ಪತ್ನಿ ಸ್ಪಂದನ
ಲೋ ಬಿಪಿಯಿಂದಾಗಿ ಎದೆ ನೋವು ಕಾಣಿಸಿಕೊಂಡಿದ್ದು ಸ್ಪಂದನ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮಾಹಿತಿ ತಿಳಿದುಬಂದಿದೆ. ಇನ್ನು ಸ್ಪಂದನ ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ತಮ್ಮ ಅತ್ತಿಗೆಯ ಸಾವಿನ ಬಗ್ಗೆ ಶ್ರೀಮುರುಳಿ ಅವರು ಕೂಡ ಒಂದಿಷ್ಟು ಮಾಹಿತಿ ನೀಡಿದ್ದರು. ಇನ್ನು ವಿಜಯ್ ರಾಘವೇಂದ್ರ ಅವರು ಇದೀಗ ಬ್ಯಾಂಕಾಕ್ ಗೆ ತೆರಳಿದ್ದಾರೆ.
ಇಂದು ಸ್ಪಂದನ ಅವರ ಮೃತದೇಹ ಬೆಂಗಳೂರಿಗೆ ಬರಲಿದೆ. ಬೆಂಗಳೂರು ಅಥವಾ ಸ್ಪಂದನ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಸ್ಪಂದನ ಅವರ ನಿಧನದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ. ಸ್ಪಂದನ ಅವರ ನಿಧನದ ಬಗ್ಗೆ ಅವರ ಮನೆ ಕೆಲಸದವರು ಹೇಳಿಕೆ ನೀಡಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ಸ್ಪಂದನ ಅವರು ಆಡಿದ ಮಾತುಗಳ ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದಾರೆ.
ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಸ್ಪಂದನ ಕೊನೆಯದಾಗಿ ಮನೆಯವರಿಗೆ ಹೇಳಿದ್ದೇನು
ಸ್ಪಂದನ ಅವರ ನಿಧನದ ಬಗ್ಗೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಸುಮಾ ಅವರು ಮಾಹಿತಿ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸುಮಾ ಅವರು ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಪಂದನ ಅವರ ನಿಧನಕ್ಕೂ ಮುನ್ನ ಯಾವ ರೀತಿ ಮಾತನಾಡಿದ್ದರು ಎನ್ನುವ ಬಗ್ಗೆ ಹೇಳಿಕೆ ನೀಡಿದ್ದಾರೆ.
‘ಮೊದಲಿಗೆ ಸುದ್ದಿ ಕೇಳಿದಾಗ ನಂಬಲಿಲ್ಲ. ಫೋನ್ ಮಾಡಿ ಕೇಳಿದಾಗ ನಿಜ ಎನ್ನುವ ಬಗ್ಗೆ ತಿಳಿಯಿತು.ಈಗ ಮಲ್ಲೇಶ್ವರಂ ನಿವಾಸಕ್ಕೆ ಹೋಗುತ್ತಿದ್ದೇನೆ. ಅಕ್ಕ ಸ್ವಲ್ಪ ಸಣ್ಣಗಾಗಿದ್ದರು. ಆದರೆ ಅದಕ್ಕೆ ಎಂದು ಯಾವುದೇ ಭಿನ್ನ ಆಹಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಎಲ್ಲರಿಗು ಮಾಡುವ ಅಡುಗೆಯನ್ನೇ ಸೇವಿಸುತ್ತಿದ್ದರು. ಕೋವಿಡ್ ಸಮಯದಲ್ಲಿ ಮನೆಯಲ್ಲಿಯೇ ಇದ್ದಿದ್ದರಿಂದ ದಪ್ಪ ಆಗಿದ್ದರು.
ಈಗ ಸ್ವಲ್ಪ ಸಮಯದ ಹಿಂದೆ ಸಣ್ಣ ಆಗಿದ್ದರು. ತೂಕ ಇಳಿಕೆಗೆ ಪ್ರತ್ಯೇಕ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಮನೆಯ ಆರೋಗ್ಯಕರ ಆಹಾರವನ್ನೇ ತೆಗೆದುಕೊಳ್ಳುತ್ತಿದ್ದರು. ಸೋಮವಾರ ರಾತ್ರಿ ಬ್ಯಾಂಕಾಕ್ ಗೆ ಹೋಗಿದ್ದರು. ಒಂದು ವಾರ ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ಮನೆಯಲ್ಲಿ ಇರುವ ತಮ್ಮ ಗಂಡ ಮತ್ತು ಮಗನನ್ನು ನೋಡಿಕೊಳ್ಳಲು ನನ್ನ ಬಳಿ ಹೇಳಿದ್ದರು. ನಿನ್ನೆಯೇ ಮನೆಗೆ ಬರಬೇಕಿತ್ತು. ಆದರೆ ಈಗ ಈ ಸುದ್ದಿ ಬಂದಿದೆ’ ಎಂದು ಸುಮಾ ಹೇಳಿದ್ದಾರೆ.