Vijayalakshmi Darshan: ಮಾನಸಿಕ ನೆಮ್ಮದಿಗಾಗಿ ಬಹುದೊಡ್ಡ ನಿರ್ಧಾರ ತಗೆದುಕೊಂಡ ದರ್ಶನ್ ಪತ್ನಿ, ಬೇಸರದಲ್ಲಿ ಫ್ಯಾನ್ಸ್

ಮಾನಸಿಕ ನೆಮ್ಮದಿಗಾಗಿ ಬಹುದೊಡ್ಡ ನಿರ್ಧಾರ ತಗೆದುಕೊಂಡ ದರ್ಶನ್ ಪತ್ನಿ

Vijayalakshmi Darshan Latest News: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲು ಸೇರಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದರ್ಶನ್ ಅರೆಸ್ಟ್ ಆಗಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ದರ್ಶನ್ ವಿರುದ್ಧ ರೇಣುಕಾಸ್ವಾಮಿ ಪರವಾಗಿ ಜನರು ಹಾಗೂ ಸೆಲೆಬ್ರೆಟಿಗಳು ದ್ವನಿ ಎತ್ತಿದ್ದಾರೆ. ಇದೀಗ ದರ್ಶನ ಜೈಲು ಪಾಲಾದ ಬಳಿಕ ಪತ್ನಿ ವಿಜಯಲಕ್ಷ್ಮಿ ಬೆಂಗಳೂರು ತೊರೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Actor Darshan Family
Image Credit: Instagram

ಮಾನಸಿಕ ನೆಮ್ಮದಿಗಾಗಿ ಬಹುದೊಡ್ಡ ನಿರ್ಧಾರ ತಗೆದುಕೊಂಡ ದರ್ಶನ್ ಪತ್ನಿ
ಇನ್ನು ದರ್ಶನ್ ಬಂದನ ಬಳಿಕ ವಿಜಯಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ ಹಾಗೆ ಪತಿಯನ್ನು ಹೊರತರಲು ಹರಸಾಹಸ ಪಡುತ್ತಿದ್ದಾರೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಮಗನೊಂದಿಗೆ ಕೊಡಗಿನ ಖಾಸಗಿ ಶಿಫ್ಟ್ ಆಗಿದ್ದಾರೆ. ಹೌದು ಕಳೆದ ಕೆಲ ದಿನಗಳಿಂದ ಪರ-ವಿರೋಧ ಹೇಳಿಕೆಗಳನ್ನು ಕೇಳಿ ಮನಸ್ಸಿನ ನೆಮ್ಮದಿ ಕಳೆದುಕೊಂಡಿರುವ ವಿಜಯಲಕ್ಷ್ಮೀ ಸದ್ಯ ಕೊಡಗಿಗೆ ತಮ್ಮ ಮಗನ ಜೊತೆ ತೆರಳಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ದರ್ಶನ ಪತ್ನಿ
ಇನ್ನು ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ಅವರು ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು, “ನಿಮಗೆಲ್ಲ ಗೊತ್ತಿದೆ ಅಭಿಮಾನಿಗಳನ್ನ ದರ್ಶನ್ ಎಷ್ಟು ಪ್ರೀತಿ ಮಾಡುತ್ತಾರೆ ಅಂತ, ಇಂಥಹ ದುಃಖದ ಸಮಯದಲ್ಲಿ ನಾವು ಅವರಿಂದ ದೂರ ಇರುವಂತೆ ಆಗಿದೆ, ಹೊರಗಿನ ಪರಿಸ್ಥಿತಿ ಬಗ್ಗೆ ಅವರಿಗೆ ನಾನು ತಿಳಿಸಿದ್ದೀನಿ, ಅಭಿಮಾನಿಗಳನ್ನ ಶಾಂತವಾಗಿ ಇರುವಂತೆ ದರ್ಶನ್ ಕೇಳಿಕೊಂಡಿದ್ದಾರೆ. ನಿಮ್ಮ ಅಭಿಮಾನದ ಬಗ್ಗೆ ಕೇಳಿ ಭಾವುಕರಾಗಿದ್ದಾರೆ” ಎಂದು ತಿಳಿಸಿದ್ದರು.

ಇದಲ್ಲದೆ, “ನನಗೆ ಗೊತ್ತಿದೆ ಮುಂದೆ ನನ್ನ ಪತಿಗೆ ಒಳ್ಳೆಯ ದಿನಗಳು ಬರುತ್ತೆ. ಆದರೆ ತಾವು ಈ ಪ್ರಕರಣದಿಂದ‌ ಯಾವುದೇ ಉದ್ವೇಗಕ್ಕೆ‌ ಒಳಗಾಗಬೇಡಿ. ನಿಮ್ಮ ಶಾಂತ ಸ್ವಭಾವವೇ ನಮ್ಮ‌ ದೊಡ್ಡ ಶಕ್ತಿ. ಈ ಕೆಟ್ಟ ಘಳಿಗೆ ಹೋಗಲಿದೆ. ಸತ್ಯ ಮೇಲುಗೈ ಸಾಧಿಸಲಿದೆ” ಎಂದು ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

Join Nadunudi News WhatsApp Group

Vijayalakshmi Darshan
Image Credit: Oneindia

Join Nadunudi News WhatsApp Group