Serial Actress Vijayalakshmi: ಕಪ್ಪು ಬಣ್ಣದಿಂದ ಅನುಭವಿಸಿದ ಅವಮಾನಗಳ ಹೇಳಿದ ವಿಜಯಲಕ್ಷ್ಮಿ.

Serial Actress Vijayalakshmi Told The Insults Suffered By The Colour Black: ನಮ್ಮಮ್ಮ ಸೂಪರ್ ಸ್ಟಾರ್ (Nammamma Super Star Season 2) ಶೋ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದೀಗ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಲಕ್ಷಣ (Lakshana)  ಕಾಣಿಸಿಕೊಂಡಿದ್ದಾರೆ. ಕಪ್ಪಾಗಿರುವ ಕಾರಣಕ್ಕೆ ವಿಜಯಲಕ್ಷ್ಮಿ (Vijayalakshmi) ಅನುಭವಿಸಿದ ನೋವುಗಳನ್ನು ಹಂಚಿಕೊಂಡಿದ್ದಾರೆ.

ಸಂಕ್ರಾಂತಿ ಹಬ್ಬದ ಮಹಾಸಂಗಮ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಹಾಸಂಗಮ ನಡೆಯುತ್ತಿದೆ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ವೇದಿಕೆಯಲ್ಲಿ ಧಾರಾವಾಹಿ ತಂಡದ ಕಲಾವಿದರು ಭಾಗಿಯಾಗಿದ್ದರು.

Vijayalakshmi told of the insults suffered by the color black.
Image Source: India Today

ಅದರಲ್ಲೂ ಕನ್ನಡಿಗ ನೆಚ್ಚಿನ ಧಾರಾವಾಹಿಯಾದ ಲಕ್ಷಣ (Lakshana) ತಂಡದವರು ಭಾಗಿಯಾಗಿದ್ದರು. ಲಕ್ಷಣ ತಂಡದಿಂದ ನಾಯಕಿ ವಿಜಯಲಕ್ಷ್ಮಿ, ಜಗನ್ (Jagan) ಭಾಗಿಯಾಗಿದ್ದರು. ವೇದಿಕೆಯಲ್ಲಿ ನಟಿ ವಿಜಯಲಕ್ಷ್ಮಿ ತನಗಾದ ನೋವಿನ ಬಗ್ಗೆ ಮನದಾಳದ ಮಾತುಗಳನ್ನು ಆಡಿದ್ದಾರೆ.

ತಾಯಿಯ ಬಗ್ಗೆ ಮಾತನಾಡಿದ ನಟಿ
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ವೇದಿಕೆಯಲ್ಲಿ ನಟಿ ವಿಜಯಲಕ್ಷ್ಮಿ ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ.

“ಇದು ಬಣ್ಣದ ಜಗತ್ತು. ನಾವು ಹೇಗೆ ಕಾಣಿಸಿಕೊಳ್ಳುತ್ತೀವಿ ಅದರ ಮೇಲೆ ನಮ್ಮನ್ನು ಆಯ್ಕೆ ಮಾಡುತ್ತಾರೆ. ಒಂದು ಕಪ್ಪು ಹುಡುಗಿ ಆಡಿಷನ್ ನಲ್ಲಿ ರಿಜೆಕ್ಟ್ ಆದ ನೋವನ್ನು ನಾನು ಅನುಭವಿಸಿದ್ದೇನೆ. ನನ್ನ ತಾಯಿ ಮಧ್ಯರಾತ್ರಿ ಎದ್ದು ಅಳುತ್ತಿದ್ದರು. ಅಮ್ಮ ನಿನ್ನ ಮೇಲೆ ಆ ತಪ್ಪನ್ನು ದಯವಿಟ್ಟು ಹಾಕಿಕೊಳ್ಳಬೇಡ. ಏನೋ ಕೆಟ್ಟ ಗಳಿಗೆ ಹಾಗೆ ನಡೆಯಿತು” ಎಂದಿದ್ದಾರೆ.

Join Nadunudi News WhatsApp Group

Vijayalakshmi told of the insults suffered by the color black.
Image Source: Times Of India

ಟ್ರೋಲಿಗರು ನಾನು ಆರಂಭದಲ್ಲಿ ಫೇರ್ ಆಗಿರುವೆ ಅಂದುಕೊಂಡಿದ್ದರು ಆದರೆ ನಾನು ಡಸ್ಕಿ ಕಾಂಪ್ಲೆಕ್ಷನ್ ಎಂದು ತಿಳಿದ ಮೇಲೆ ಸುಮ್ಮನಾದರು. ಟ್ರೊಲ್ ಗಳನ್ನೂ ನಾನು ಹೆಚ್ಚಾಗಿ ಅನುಭವಿಸಿಲ್ಲ. ಆಡಿಷನ್ ಅಲ್ಲಿ ಭಾಗಿಯಾಗುತ್ತಿದ್ದೆ ತುಂಬಾ ಹೆದರಿಕೊಳ್ಳುತ್ತಿದ್ದೆ.

ಕಪ್ಪಾಗಿರುವೆ ಸೆಲೆಕ್ಟ್ ಆಗ್ತಿನೋ ಇಲ್ಲವೋ ಅನ್ನೋ ಭಯ ಚಳಿಯಿಂದ ಹೊರಬಂದರೆ ಸಾಧನೆ ಮಾಡುತ್ತೇವೆ. ಕಪ್ಪಾಗಿದ್ದೀವಿ ಅನ್ನೋ ಕಾರಣ ಅಲ್ಲಿ ಕೀಳರಿಮೆ ಇರುವುದಿಲ್ಲ. ಯಾವುದೊ ಒಂದು ರೂಪದಲ್ಲಿ ಅದು ನಮಗೆ ಸಹಾಯ ಮಾಡುತ್ತದೆ ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group