Lunar Soil: ಚಂದ್ರನ ಮೇಲೆ ಇರುವ ಮಣ್ಣಿನ ತಾಪಮಾನ ಎಷ್ಟು…? ವಿಕ್ರಮ್ ಲ್ಯಾಂಡರ್ ಸಂಶೋಧನೆಗೆ ಜನ ಮಚ್ಚುಗೆ.
ಚಂದ್ರಯಾನ 3 ಮೊದಲ ಸಂಶೋಧನೆ, ಚಂದ್ರನ ಮಣ್ಣಿನ ತಾಪಮಾನ ಎಷ್ಟಿದೆ ಗೊತ್ತಾ..?
Temperature Of Lunar Soil: ಇಸ್ರೋ ಜುಲೈ 14 ರಂದು ಚಂದ್ರಯಾನ 3 ಅನ್ನು ಉಡಾವಣೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಚಂದ್ರಯಾನ 3 (Chandrayana 3) ದಕ್ಷಿಣ ದ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆ ಪಡೆದಿದೆ. ಆಗಸ್ಟ್ 23 ಭಾರತೀಯ ಪ್ರಜೆಗಳಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಆಗಸ್ಟ್ 23 ರಂದು ಚಂದ್ರಯಾನ 3 ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದಿದೆ.
ಚಂದ್ರನ ಅಂಗಳದಲ್ಲಿರುವ ಚಂದ್ರಯಾನ 3
ಈಗಾಗಲೇ ಸಾಕಷ್ಟು ದೇಶವು ಚಂದ್ರಯಾನವನ್ನು ಉಡಾವಣೆ ಮಾಡಿದ್ದು ದಕ್ಷಿಣ ದ್ರುವದಲ್ಲಿ ಯಾವುದೇ ಯಶಸ್ವಿಯಾಗಿಲ್ಲ. ಇನ್ನು ಆಗಸ್ಟ್ 23 ಬುಧವಾರ ಸಂಜೆ 6.04 ನಿಮಿಷಕ್ಕೆ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ 140 ಕೋಟಿ ಭಾರತೀಯರ ಕನಸನ್ನು ನನಸು ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದ ಟಾಪ್ 4 ದೇಶಗಳ ಪಟ್ಟಿಗೆ ಭಾರತ ಗ್ರಾಂಡ್ ಎಂಟ್ರಿ ಕೊಟ್ಟಿದೆ. ಇಡೀ ಭಾರತೀಯರು ಚಂದ್ರಯಾನ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.
ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಯಲ್ಲಿ ಯಶಸ್ವಿಯಾಗಿ ಇಳಿದ ಸ್ಥಳಕ್ಕೆ ನರೇಂದ್ರ ಮೋದಿ ಅವರು “ಶಿವಶಕ್ತಿ” ಎಂದು ನಾಮಕರಣ ಕೂಡ ಮಾಡಿದ್ದಾರೆ. ಇತಿಹಾಸದಲ್ಲಿ ಭಾರತದ ಹೊಸ ಧಾಖಲೆಯಾಗಿದೆ. ಇನ್ನು ಚಂದ್ರನ ಅಂಗಳದಲ್ಲಿರುವ ಚಂದ್ರಯಾನ 3 ನೌಕೆ ಚಂದ್ರನ ಕುರಿತು ಸಾಕಷ್ಟು ರಹಸ್ಯಗಳನ್ನು ಬಹಿರಂಗ ಪಡಿಸಲಿದೆ. ಇದೀಗ ಚಂದ್ರಯಾನ 3 ನೌಕೆ ಚಂದ್ರನ ಕುರಿತು ಮೊದಲ ಸಂಶೋಧನೆ ಮಾಡಿದ್ದು ಇಸ್ರೋ ಸಂಸ್ಥೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಚಂದ್ರನ ಮಣ್ಣಿನ ತಾಪಮಾನ ಎಷ್ಟಿದೆ ಗೊತ್ತಾ..?
ಇಸ್ರೋ ಚಂದ್ರನ ಮಣ್ಣಿನ ತಾಪಮಾನದ ವಿವಿಧ ಆಳದಲ್ಲಿನ ವ್ಯತ್ಯಾಸದ ಗ್ರಾಫ್ ಅನ್ನು ಇಸ್ರೋ ಹಂಚಿಕೊಂಡಿದೆ. ಚಂದ್ರನ ಮೇಲ್ಮೈನ 10 ಸೆಂಟಿಮೀಟರ್ ಆಳವನ್ನು ತಲಪುವ ಸಾಮರ್ಥ್ಯವನ್ನು ಹೊಂದಿದೆ. ಮೇಲ್ಮೈ, ತನಿಖೆಯನ್ನು 10 ಪ್ರತ್ಯೇಕ ತಾಪಮಾನ ಸಂವೇದಕಗಳೊಂದಿಗೆ ಅಳವಡಿಸಲಾಗಿದೆ ಎಂದು ಇಸ್ರೋ ಹೇಳಿಕೊಂಡೆ.
“ಚಂದ್ರನ ಮೇಲ್ಮೈನ ತಾಪಮಾನ -10 ಡಿಗ್ರಿ ಸೆಲ್ಸಿಯಸ್ ನಿಂದ 60 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಚಂದ್ರಯಾನ 3 ಏಳು ಪೇಲೋಡ್ ಗಳನ್ನೂ ಹೊಂದಿದೆ. ವಿಕ್ರಂ ಲ್ಯಾಂಡರ್ ನಲ್ಲಿ ನಾಲ್ಕು, ಪ್ರಗ್ಯಾನ್ ರೋವರ್ ನಲ್ಲಿ ಎರಡು ಮತ್ತು ಒಂದು ಪ್ರೋಪೇಶನ್ ಮಾಡ್ಯುಲ್ ಪೇಲೋಡ್. ಈ ಪೇಲೋಡ್ ಗಳನ್ನೂ ವಿಭಿನ್ನ ವೈಜ್ಞಾನಿಕ ಪ್ರಯೋಗಳನ್ನು ಕೈಗೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಚಂದ್ರನ ಮಣ್ಣನ್ನು ಅಧ್ಯಯನ ಮಾಡುತ್ತಿರುವ ChaSTE ಯಾ ಹೊರತಾಗಿ, ವಿಕ್ರಂ ಅವರು ರಂಭಾ (ಅಯಾನುಗಳು ಮತ್ತು ಎಲೆಕ್ಟ್ರಾನ್ ಗಳ್ನ್ನು ಅಧ್ಯಯನ ಮಾಡಲು), ILSA (ಭೂಕಂಪವನ್ನು ಅಧ್ಯಯನ ಮಾಡಲು) ಮತ್ತು LRA (ಚಂದ್ರನ ವ್ಯವಸ್ಥೆಯ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು) ನಿಯೋಜಿಸಲಾಗಿದೆ”. ಚಂದ್ರಯಾನ 3 ನೌಕೆ ಚಂದ್ರನ ಕುರಿತು ಮೊದಲ ಸಂಶೋಧನೆ ಮಾಡಿದ ಚಂದ್ರನ ತಾಪಮಾನದ ಬಗ್ಗೆ ಟ್ವಿಟರ್ ನಲ್ಲಿ ಇಸ್ರೋ ಗ್ರಾಫ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ.