VinFast: ಟೆಸ್ಲಾ ಕಾರ್ ಭಾರತಕ್ಕೆ ಬರುವ ಮುನ್ನವೇ ಬಂತು ಇನ್ನೊಂದು ದೈತ್ಯ ಎಲೆಕ್ಟ್ರಿಕ್ ಕಾರ್, 330 Km ರೇಂಜ್.

ಭಾರತದಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ವಿನ್‌ ಫಾಸ್ಟ್‌ ಕಾರು ತಯಾರಿಕಾ ಕಂಪನಿಯು ಸಿದ್ಧವಾಗಿದೆ.

VinFast Electric Car: ಇತ್ತೀಚಿಗೆ ಭಾರತದಲ್ಲಿ ಕಾರು ಮಾರುಕಟ್ಟೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ SUV ಗಳು ತನ್ನದೇ ಆದ ಛಾಪು ಮೂಡಿಸುತ್ತಿದೆ. ಇದೀಗ ಭಾರತೀಯ ಕಾರು ಮಾರುಕಟ್ಟೆಗೆ ಮತ್ತೊಂದು ವಿದೇಶಿ ಕಂಪೆನಿ ಪಾದಾರ್ಪಣೆ  ಮಾಡುತ್ತಿದೆ.

ಹೌದು ಇದೀಗ ವಿಯೆಟ್ನಾಂ ಮೂಲದ ಕಾರು ತಯಾರಿಕಾ ಕಂಪನಿಯಾದ ವಿನ್‌ ಫಾಸ್ಟ್‌ ಎಂಬ ಕಂಪನಿ ಭಾರತೀಯ ಮಾರುಕಟ್ಟೆಗೆ ಸದ್ಯದಲ್ಲೇ ಪ್ರವೇಶ ಮಾಡಲಿದೆ. ಇದು ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಆಗಿದೆ.

VinFast VF8 Electric Car
Image Credit: Electrek

VinFast Company
Vinfast Company 2017 ರಿಂದ ಎಲೆಕ್ಟ್ರಿಕ್‌ ಕಾರುಗಳನ್ನು ತಯಾರಿಸಲು ಪ್ರಾರಂಭಿಸಿದೆ. ಇದು ವಿಯೆಟ್ನಾಂ ದೇಶದ ಒಂದೇ ಒಂದು ಕಾರು ನಿರ್ಮಾಣ ಕಂಪನಿಯಾಗಿದೆ. 2021ರಲ್ಲಿ ವಿನ್‌ ಫಾಸ್ಟ್ ತನ್ನ ಮೊದಲ 3 ಎಲೆಕ್ಟ್ರಿಕ್‌ ಮಾಡೆಲ್‌ ಕಾರ್, ಎರಡು ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಹಾಗೆ ಒಂದು ಎಲೆಕ್ಟ್ರಿಕ್ ಬಸ್‌ ತಯಾರಿಸಿ ಅವುಗಳನ್ನು‌ ಮೊದಲ ಬಾರಿಗೆ ಮಾರಾಟ ಮಾಡಲು ಪ್ರಾರಂಭಿಸಿತು.

ಮೊದಲು ಮಾರಾಟ ಮಾಡಿದ ಮೂರು ಕಾರುಗಳಲ್ಲಿ ಎರಡು ಕಾರುಗಳನ್ನು ಕಂಪನಿಯು ಒಂದು ವರ್ಷದ ನಂತರ ಅಂದರೆ 2022 ರಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಕಂಪನಿಯು ಈಗಾಗಲೇ ತನ್ನ ಶೋ ರೂಮ್‌ಗಳನ್ನು ಯುಎಸ್‌, ಕೆನಡಾ ಮತ್ತು ಯೂರೋಪ್‌ ದೇಶಗಳಲ್ಲಿ ಪ್ರಾರಂಭಿಸಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳು ವಿಪರೀತವಾಗಿ ಬೆಳವಣಿಗೆ ಆಗುತ್ತಿರುವುದರಿಂದ ಭಾರತದಲ್ಲೂ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ವಿನ್‌ ಫಾಸ್ಟ್‌ ಕಾರು ತಯಾರಿಕಾ ಕಂಪನಿಯು ಸಿದ್ಧವಾಗಿದೆ.

VinFast VF7 Electric Car
Image Credit: Original Source

VinFast Electric Car
ಭಾರತದಲ್ಲಿ ವಿನ್‌ ಫಾಸ್ಟ್‌ ಕಂಪನಿ ತನ್ನ ಮೂರು ಮಾದರಿಯ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಎಂದು ಮಾಹಿತಿ ಲಭಿಸಿದೆ. ಆ ಮೂರೂ ಕಾರುಗಳೆಂದರೆ VinFast VF7, VinFast VF8 ಮತ್ತು VinFast VFE34 . VinFast VF7 ಮಾದರಿಯ ಬೆಲೆ ಸುಮಾರು 50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Join Nadunudi News WhatsApp Group

ಹಾಗೆ ಮತ್ತೊಂದು ಕಾರ್ ಆದ VinFast VF8 , VinFast VF7 ಗಿಂತ  ಗಾತ್ರದಲ್ಲಿ ದೊಡ್ಡದಾಗಿರಲಿದೆ. ಇದರ ಅಂದಾಜು ಬೆಲೆ ಎಕ್ಸ್‌ ಶೋರೂಮ್ ಪ್ರಕಾರ 60 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಕಾರ್ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 330 Km ಮೈಲೇಜ್ ನೀಡಲಿದೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ.

Join Nadunudi News WhatsApp Group