Vinod Raj: ಹಾರ್ಟ್ ಅಟ್ಯಾಕ್ ಆದಾಗ ಸಹಾಯ ಮಾಡಿದ್ದು ಆ ಇಬ್ಬರು ಮಾತ್ರ, ಸತ್ಯ ಬಿಚ್ಚಿಟ್ಟ ವಿನೋದ್ ರಾಜ್.
ಹಾರ್ಟ್ ಅಟ್ಯಾಕ್ ಆದ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದಿದ್ದು ಆ ಇಬ್ಬರು ನಟರು ಮಾತ್ರ ಎಂದು ಹೇಳಿದ್ದಾರೆ ನಟ ವಿನೋದ್ ರಾಜ್.
Actor Vinod Raj Interview: ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವಿನೋದ್ ರಾಜ್ (Vinod Raj) ಅವರ ಮದುವೆಯ ವಿಚಾರಗಳು ಸಾಕಷ್ಟು ವೈರಲ್ ಆಗಿದ್ದವು. ಪ್ರಕಾಶ್ ರಾಜ್ ಮೇಹು (Prakash Raj Mehu) ಅವರು ವಿನೋದ್ ರಾಜ್ ಅವರ ಮದುವೆ ಆಗಿದೆ ಎನ್ನುವ ವಿಚಾರವನ್ನು ರಿವೀಲ್ ಮಾಡಿದ್ದರು.
ಈ ಕಾರಣದಿಂದಾಗಿ ನಟ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿ (leelavathi) ಅವರು ಸುದ್ದಿಯಲ್ಲಿದ್ದರು. ಇದೀಗ ವಿನೋದ್ ರಾಜ್ ಅವರು ಸಂದರ್ಶನದಲ್ಲಿ ಮಾತನಾಡುವಾಗ ಪ್ರಕಾಶ್ ರಾಜ್ ಮೇಹು ಅವರ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.
ಪ್ರಕಾಶ್ ರಾಜ್ ಮೇಹು ವಿರುದ್ಧ ಕಿಡಿಕಾರಿದ ವಿನೋದ್ ರಾಜ್
ಪ್ರಕಾಶ್ ರಾಜ್ ಮೇಹು ಅವರು ಫೇಸ್ ಬುಕ್ ನಲ್ಲಿ ವಿನೋದ್ ರಾಜ್ ಅವರ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡು ವಿನೋದ್ ರಾಜ್ ಅವರ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ನಟ ವಿನೋದ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ನಟ ಬೇಸರ ವ್ಯಕ್ತಪಡಿಸಿದ್ದಾರೆ.
ಮದುವೆ ಆಗಿದೆ ಎನ್ನುವುದನ್ನು ಹೇಳಿಕೊಳ್ಳುವ ಅಗತ್ಯ ಇಲ್ಲ
‘ನನ್ನ ತಾಯಿ ನನ್ನನು ಕಷ್ಟ ಪಟ್ಟು ಸಾಕಿದ್ದಾರೆ. ನನ್ನನು ನೋಡುತ್ತಾ ಅವರ ನೋವನ್ನು ಮರೆತಿದ್ದಾರೆ. ತಾಯಿ ಮಾತನ್ನು ಮೀರದ ಮಗ ಆಗಿದ್ದೇನೆ. ನನಗೆ ಮದುವೆ ಆಗಿದೆ ಎನ್ನುವುದನ್ನು ಹೇಳಿಕೊಳ್ಳುವ ಅಗತ್ಯ ಇಲ್ಲ. ನಾನು ಮತ್ತು ಅವರು ಒಪ್ಪಿದ್ದೇವೆ, ಅಮ್ಮ ಒಪ್ಪಿದ್ದಾರೆ. ಇಬ್ಬರು ನೆಮ್ಮದಿಯಾಗಿ ಇದ್ದೇವೆ. ಆತ್ಮೀಯರೆಲ್ಲರಿಗೂ ಗೊತ್ತು. ನನಗೆ ಜಾಹಿರಾತು ನೀಡುವುದು ಬೇಡ’ ಎಂದಿದ್ದಾರೆ.
ಹಾರ್ಟ್ ಅಟ್ಯಾಕ್ ಆದಾಗ ಸಹಾಯ ಮಾಡಿದ್ದು ಆ ಇಬ್ಬರು ಮಾತ್ರ
“ನನ್ನ ತಾಯಿ ನನ್ನನು ಹೆತ್ತಾಗ ಯಾರು ಬಂದು ತಿರುಗಿ ನೋಡಿಲ್ಲ. ನನ್ನ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಯಾರು ಕೂಡ ಬಂದು ನೋಡಿಲ್ಲ. ನನಗೆ ಹಾರ್ಟ್ ಅಟ್ಯಾಕ್ ಆದಾಗ ಒಬ್ಬರು ಶ್ರೀನಿವಾಸ ಮೂರ್ತಿ ಕಲಾವಿದರು ಮತ್ತು ಎಸ್ ನಾರಾಯಣ್ ಕಲಾವಿದರು ಇಬ್ಬರೇ ನಮ್ಮೊಂದಿಗೆ ಮಾತನಾಡಿದ್ದಾರೆ. ಇನ್ಯಾರು ನಮ್ಮೊಂದಿಗೆ ಮಾತನಾಡಿಲ್ಲ. ಅದಕ್ಕೆ ನಮಗೆ ಯಾರ ಮೇಲೂ ಕೋಪವಿಲ್ಲ” ಎಂದು ಹೇಳಿದ್ದಾರೆ.