Ads By Google

ವಿನೋದ್ ರಾಜ್ ಯಾಕೆ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗೀ ಬರಲ್ಲ ಗೊತ್ತಾ, ನೋಡಿ ಕಾರಣವೇ ಬೇರೆ

vinod raj judge
Ads By Google

ನಮ್ಮ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಕಿಂಗ್ ಎಂಬ ಹೆಸರು ಹೇಳಿದರೆ ಓರ್ವ ನಟನ ಹೆಸರು ಅಜರಾಮರವಾಗಿ ಉಳಿದುಬಿಟ್ಟಿದೆ. ಹೌದು ಆ ನಟ ಬೇರೆ ಯಾರೂ ಅಲ್ಲ ಕನ್ನಡದ ಮೈಕಲ್ ಚಾಕ್ಸನ್ ಎಂದೇ ಒಂದು ಕಾಲದಲ್ಲಿ ಹೆಸರು ಪಡೆದಿದ್ದ ಖ್ಯಾತ ಹಿರಿಯ ನಟಿ ಲೀಲಾವತಿ ಅವರ ಏಕೈಕ ಪುತ್ರ ವಿನೋದ್ ರಾಜ್ ರವರು. ಹೌದು ಆಗಿನ ಕಾಲದಲ್ಲಿ ಹಲವಾರು ಜನ ಮೆಚ್ಚುವಂತಹ ಪಾತ್ರಗಳು ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಂತಹ ನಟ ವಿನೋದ್ ರಾಜ್ ತದನಂತರ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿದರು.

ಅದೇನೇ ಇರಲಿ, ಸಿನಿಮಾ ರಂಗದೊಂದಿಗೆ ದೂರ ಉಳಿದು ತಾಯಿಯೊಂದಿಗೆ ವ್ಯವಸಾಯ ಮಾಡುತ್ತಾ ಕಾಲ ಜೀವನ ನಡೆಸುತ್ತಿದ್ದಾರೆ. ಇತ್ತೀಚಿಗೆ ವಿನೋದ್ ರಾಜ್ ಅವರನ್ನು ರಿಯಾಲಿಟಿ ಶೋ ತೀರ್ಪುಗಾರರಾಗಿ, ಅದು ಆಗದೇ ಹೋದರೆ ಗೆಸ್ಟ್ ಆಗಿ ಬರಬೇಕು ಎಂದು ಕೇಳಿ ಕೊಂಡಿದ್ದರು. ಆದರೆ, ವಿನೋದ್ ರಾಜ್ ಅವರು ಬರಲು ಆಗುತ್ತಿಲ್ಲ ಎಂದು ಉತ್ತರ ನೀಡಿದ್ದರು.

ಹೌದು,ಇತ್ತೀಚಿಗೆ ಡಾನ್ಸ್ ಕರ್ನಾಟಕ ಡಾನ್ಸ್, ಕುಣಿಯೋಣು ಬಾರಾ ದಂತಹ ಡಾನ್ಸ್ ರಿಯಾಲಿಟಿ ಶೋ ಗಳು ಸದ್ದು ಮಾಡುತ್ತಿರುವ ಕಾರಣ ವಿನೋದ್ ರಾಜ್ ಅವರನ್ನು ಏಕೆ ಡಾನ್ಸ್ ರಿಯಾಲಿಟಿ ಷೋ ಗಳಿಗೆ ಜಡ್ಜ್ ಆಗಿ ಕರೆಸಿಕೊಳ್ಳಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಒತ್ತಾಯ ಮಾಡತೊಡಗಿದರು.ಹೀಗಾಗಿ,ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮ ದ ಶ್ರೀಕಾಂತ್ ಅವರು ಸಹ ತಮ್ಮ ಶೋ ಗೆ ಜಡ್ಜ್ ಆಗಿ ಬರುವಂತೆ ಬರುವಂತೆ ಕೇಳಿಕೊಂಡಿದ್ದರು.ಆದರೆ ವಿನೋದ್ ರಾಜ್ ಅವರು ಅಂಥ ಆಫರ್ ಗಳನ್ನೆಲ್ಲ ನಯವಾಗೇ ತಿರಸ್ಕರಿಸುತ್ತಾ ಬಂದಿದ್ದರು.

ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನೀವೇಕೆ ಡಾನ್ಸ್ ಪ್ರೋಗ್ರಾಮ್ ಗಳಿಗೆ ಜಡ್ಜ್ ಆಗಿ ಬರಬಾರದು ಎಂದು ಕೇಳಲಾದ ಪ್ರಶ್ನೆಗೆ ಅವರು ಕಾರಣ ಕೊಟ್ಟಿದ್ದಾರೆ.“ನನ್ನ ತಾಯಿ ನನ್ನನ್ನು ಚಿಕ್ಕವನಿದ್ದಾಗ ತನ್ನೊಂದಿಗೆ ಕರೆದುಕೊಂಡು ಹೋಗಿ ಸೆಟ್ ನಲ್ಲಿಯೇ ಮಲಗಿಸಿ ಸಿನಿಮಾಗಳಲ್ಲಿ ನಟನೆ ಮಾಡಿ ಸಾಕಿ ಸಲುಹಿದ್ದಾಳೆ, ಇದೀಗ ನನ್ನ ಸರದಿ.

ಅವರಿಗೆ ವಯಸ್ಸಾಗಿದ್ದು ಯಾವುದೇ ಕುಂದು ಕೊರತೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು, ಅಷ್ಟೇ ಅಲ್ಲದೆ ತಾವು ವಾಸವಿರುವ ಹಳ್ಳಿಯ ಜನರಿಗೆ ನನ್ನ ತಾಯಿ ಇರದೇ ಇದ್ದರೆ ಬಹಳ ನೊಂದುಕೊಳ್ಳುತ್ತಾರೆ, ಇಲ್ಲಿನ ತೋಟದ ಕೆಲಸ ತಮಿಳುನಾಡಿನ ತೋಟದ ಕೆಲಸ ಎಲ್ಲವನ್ನು ನೋಡಿಕೊಳ್ಳುವುದು ಅನಿವಾರ್ಯ. ತೋಟವನ್ನೇ ನಂಬಿಕೊಂಡ ಹಲವು ಕುಟುಂಬಗಳಿವೆ, ಅವರಿಗೆಲ್ಲ ನಾವು ಅಲ್ಲಿ ಇರುವುದು ಅವಶ್ಯಕ.ಜೊತೆಗೆ “ಬೇಕೆಂದಾಗ ಸಿಗದ ಅವಕಾಶಗಳನ್ನು ಇಂದು ತೆಗೆದುಕೊಂಡು ಏನು ಮಾಡಲಿ?” ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field