Nitin Gadkari: ದೇಶದಲ್ಲಿ ಜಾರಿಗೆ ಬಂತು ಇನ್ನೊಂದು ಐತಿಹಾಸಿಕ ನಿಯಮ, ಇನ್ನುಮುಂದೆ ರಸ್ತೆಯಲ್ಲಿ ಕೇಳಿಸಲ್ಲ ಈ ಸೌಂಡ್.

ಇನ್ನುಮುಂದೆ ವಿಐಪಿ ವಾಹನಗಳಲ್ಲಿ ಸೈರನ್ ಬದಲು ಕೊಳಲಿನ ನಾದ.

VIP Vehicle Siren: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ದೇಶದಲ್ಲಿ ಹಲವು ನಿಯಮವನ್ನು ಜಾರಿಗೊಳಿಸುತ್ತಿದ್ದಾರೆ. ದೇಶದ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಸಾಕಷ್ಟು ನಿಯಮಗಳನ್ನು ರಸ್ತೆ ಸಂಚಾರಕ್ಕೆ ವಿಧಿಸಲಾಗಿದೆ. ಇನ್ನು ಯಾವುದೇ ರೀತಿಯ ತಂತ್ರಜ್ಞಾನವನ್ನು ಬಳಸಿದರು ಕೂಡ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳುತ್ತಿಲ್ಲ. ಹೀಗಾಗಿ ಹೊಸ ಹೊಸ ನಿಯಮಗಳು ಜಾರಿಯಾಗುತ್ತಲೇ ಇರುತ್ತವೆ.

ಇನ್ನು ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಈಗಾಗಲೇ ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ತಡೆಗಾಗಿ ಎಥನಾಲ್ ಚಾಲಿತ ವಾಹನ ಜಾರಿಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಎಥನಾಲ್ ಚಾಲಿತ ವಾಹನಗಳನ್ನು ಬಿಡುಗಡೆಗೊಳಿಸುವ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಎಥನಾಲ್ ಚಾಲಿತ ವಾಹನಗಳು ಬಿಡುಗಡೆಯಾದರೆ ಸ್ವಲ್ಪ ಮಟ್ಟಿಗೆ ವಾಯುಮಾಲಿನ್ಯ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ವಾಯುಮಾಲಿನ್ಯದ ತಡೆಗಾಗಿ ಕೇಂದ್ರ ಈ ನಿರ್ಧಾರವನ್ನು ಕೈಗೊಂಡಿತ್ತು.

Central government has decided to change the siren sound of VIP vehicles
Image Credit: indiatimes

ವಿಐಪಿ ವಾಹನಗಳಲ್ಲಿನ ಸೈರನ್
ಇನ್ನು ದೇಶದಲ್ಲಿ ವಾಹನಗಳ ಬಳಕೆಯಿಂದ ವಾಯುಮಾಲಿನ್ಯದ ಜೊತೆಗೆ ಶಬ್ದ ಮಾಲಿನ್ಯ ಕೂಡ ಹೆಚ್ಚುತ್ತಿರುತ್ತದೆ. ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಇನ್ನು ಸಾಮಾನ್ಯವಾಗಿ ಪೊಲೀಸ್ ವಾಹನ, ಆಂಬ್ಯುಲೆನ್ಸ, ಅಗ್ನಿಶಾಮಕ ವಾಹನ ಸೇರಿದಂತೆ ಕೆಲವು ವಿಐಪಿ ವಾಹನಗಳ ಮೇಲೆ ಸೈರನ್ ಅನ್ನು ಅಳವಡಿಸಲಾಗುತ್ತದೆ.

ಪೊಲೀಸ್ ವಾಹನ, ಆಂಬ್ಯುಲೆನ್ಸ, ಅಗ್ನಿಶಾಮಕ ವಾಹನಗಳಲ್ಲಿ ಅಳವಡಿಸಲಾದ ಸೈರನ್ ಗಳು ಅಗತ್ಯ ಇರುತ್ತದೆ. ಈ ಸೈರನ್ ಶಬ್ದ ಕೇಳಿದರೆ ಯಾವುದೊ ಅಪಘಾತ ಎನ್ನುವ ಸೂಚನೆ ದೊರೆಯುತ್ತದೆ. ಆದರೆ ವಿಐಪಿ ವಾಹನಗಳಿಗೆ ಸೈರನ್ ಶಬ್ದ ಅಷ್ಟು ಅವಶ್ಯಕೆ ಇರುವುದಿಲ್ಲ. ಇದೀಗ ಕೇಂದ್ರ ಸರ್ಕಾರ ಶಬ್ದ ಮಾಲಿನ್ಯವನ್ನು ತಡೆಗಟ್ಟಲು ವಿಐಪಿ ವಾಹನಗಳಲ್ಲಿ ಬಳಸಲಾಗುವ ಸೈರನ್ ಶಬ್ದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಹಿಡಿದಿದೆ.

Central government has decided to change the siren sound of VIP vehicles
Image Credit: indiatvnews

ಇನ್ನುಮುಂದೆ ವಿಐಪಿ ವಾಹನಗಳಲ್ಲಿ ಸೈರನ್ ಬದಲು ಕೊಳಲಿನ ನಾದ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಕರ್ಕಶ ಶಬ್ದದ ಹಾರ್ನ್, ಸೈರನ್ ಬದಲು ವಿಐಪಿ ವಾಹನಗಳಿಗೆ ಭಾರತೀಯ ವಾದ್ಯಗಳ ಸಂಗೀತವನ್ನು ಜೋಡಿಸಲು ಚಿಂತನೆ ನಡೆಸಲಾಗಿದೆ. ಸೈರನ್ ಬದಲಿಗೆ ಪರ್ಯಾಯ ಮಾರ್ಗವಾಗಿ ಕೊಳಲು, ತಬಲಾ ಮತ್ತು ಶಂಖನಾದಕ್ಕೆ ಬದಲಾಯಿಸುವಂತೆ ನೀತಿ ರೂಪಿಸಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ವಿಐಪಿ ವಾಹನದಲ್ಲಿ ಸೈರನ್ ಬದಲು ಕೊಳಲು ನಾಧ ಕೇಳಲಿದೆ.

Join Nadunudi News WhatsApp Group

Join Nadunudi News WhatsApp Group