Virat And Anushka: ಮಗಳಿಗಾಗಿ ಜೀವನದ ದೊಡ್ಡ ನಿರ್ಧಾರ ಮಾಡಿದ ಅನುಷ್ಕಾ ಮತ್ತು ವಿರಾಟ್, ಗರ್ಭಿಣಿ ಆಗುವ ಮುನ್ನವೇ ಈ ನಿರ್ಧಾರ.

ಪೋಷಕರಾಗುವ ಮುನ್ನವೇ ಮಕ್ಕಳ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡ ವಿರಾಟ್ ಹಾಗೂ ಅನುಷ್ಕಾ.

Virat And Anushka About Daughter: ಬಾಲಿವುಡ್ ನಟಿ ಅನುಷ್ಕಾ ಶರ್ಮ ಹಾಗೂ ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಾಗ ಸುದ್ದಿಯಾಗುತ್ತ ಇರುತ್ತಾರೆ. ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ವಿಚಾರವಾಗಿ ಅಭಿಮಾನಿಗಳಿಗೆ ಇಷ್ಟವಾಗುತ್ತ ಇರುತ್ತಾರೆ. ಸದ್ಯ World cup 2023 ರಲ್ಲಿ ಬ್ಯುಸಿ ಆಗಿರುವ ವಿರಾಟ್ ಕೊಹ್ಲಿ ತಮ್ಮ ಸಾಂಸಾರಿಕ ಜೀವನದ ವಿಷಯವಾಗಿ ಇದೀಗ ಸುದ್ದಿಯಾಗಿದ್ದಾರೆ.

ಇನ್ನು ವಿರಾಟ್ ಹಾಗೂ ಅನುಷ್ಕಾ ದಂಪತಿಗೆ ವಮಿಕ ಹೆಸರಿನ ಮಗಳಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸದ್ಯ ಅನುಷ್ಕಾ ಎರಡನೇ ಗರ್ಭಧಾರಣೆಯ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. ಇದೀಗ ವಿರಾಟ್ ಹಾಗೂ ಅನುಷ್ಕಾ ತಾವು ಪೋಷಕರಾಗುವ ಮುನ್ನವೇ ಮಕ್ಕಳ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.

Virat And Anushka Latest News
Image Credit: Zee News

ಮಗಳಿಗಾಗಿ ಜೀವನದ ದೊಡ್ಡ ನಿರ್ಧಾರ ಮಾಡಿದ ಅನುಷ್ಕಾ ಮತ್ತು ವಿರಾಟ್
ವಿರಾಟ್ ಹಾಗೂ ಅನುಷ್ಕಾ ಆಗಾಗ ಸಂದರ್ಶನದಲ್ಲಿ ತಮ್ಮ ಮಕ್ಕಳ ಬಗ್ಗೆ ಮಾತನಾಡುತ್ತ ಇರುತ್ತಾರೆ. ಈ ಹಿಂದೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ತನ್ನ ಮಕ್ಕಳಿಗಾಗಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಮಕ್ಕಳಿಗಾಗಿ ಹೆಚ್ಚು ಸಮಯ ಕೊಡುತ್ತೇವೆ, ನನ್ನ ವೃತ್ತಿಯಿಂದಾಗಿ ಕುಟುಂಬಕ್ಕೆ ಕಾಲಾವಕಾಶ ಕೊಡುವುದನ್ನ ಮಿಸ್ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಕುಟುಂಬಕ್ಕಾಗಿ ಹೆಚ್ಚು ಸಮಯ ನೀಡುವುದಾಗಿ ವಿರಾಟ್ ಹೇಳಿರುವ ಬಗ್ಗೆ ಅನುಷ್ಕಾ ಸಂದರ್ಶದಲ್ಲಿ ಹೇಳಿಕೊಂಡಿದ್ದರು.

Virat And Anushka
Image Credit: Thenews

ಅನುಷ್ಕಾ ಗರ್ಭಿಣಿ ಆಗುವ ಮುನ್ನವೇ ಈ ನಿರ್ಧಾರ ತೆಗೆದುಕೊಂಡ ವಿರಾಟ್
ಮಕ್ಕಳ ಭವಿಷ್ಯಕ್ಕಾಗಿ ವಿರಾಟ್ ಮತ್ತೊಂದು ನಿರ್ಧಾರ ಕೈಗೊಂಡಿದ್ದಾರಂತೆ. ಯಶಸ್ವಿ ಕ್ರಿಕೆಟಿಗ ವಿರಾಟ್ ತನ್ನ ವೃತ್ತಿಜೀವನದ ಯಾವುದೇ ಅಂಶ ಅಥವಾ ಕಲ್ಪನೆಯು ತನ್ನ ಮಕ್ಕಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ನಿರ್ಧರಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಮಕ್ಕಳು ದೊಡ್ಡವರಾದಾಗ ತಮ್ಮ ಯಾವುದೇ ಸಾಧನೆ ಅಥವಾ ಟ್ರೋಫಿಗಳನ್ನು ಮನೆಯಲ್ಲಿ ಇಡಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅನುಷ್ಕಾ ಅವರ ಗರ್ಭಧಾರಣೆಗೂ ಮುನ್ನವೇ ವಿರಾಟ್ ಈ ನಿರ್ಧಾರವನ್ನು ಕೈಗೊಂಡಿದ್ದಾರಂತೆ.

Join Nadunudi News WhatsApp Group

Join Nadunudi News WhatsApp Group